Ahead of the budget session of the Legislative Assembly, today, Hon'ble Forest Minister Shri Eshwar Khandre along with Hon'ble Chief Minister Shri Siddaramaiah met and discussed several important issues related to the Forest Department and requested the H, 06/03/2025
ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಮುನ್ನ, ಇಂದು ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ರವರ ಜೊತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು ಹಾಗೂ ಮಾನ್ಯ ಅರಣ್ಯ ಸಚಿವರಲ್ಲಿ ಹಾಗೂ ಮುಖ್ಯಮಂತ್ರಿಗಳಲ್ಲಿ ಕೊಡಗಿನ ಬಗ್ಗೆ ವಿಶೇಷ ಗಮನಹರಿಸುವಂತೆ ಮನವಿ ಮಾಡಲಾಯಿತು.

Inauguration of many development works in Bellur area of Hudikeri Grama Panchayat, Virajpet assembly constituency, 05/03/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಪೊನ್ನಂಪೇಟೆ ತಾಲೂಕು, ಹುದಿಕೇರಿ ಗ್ರಾಮ ಪಂಚಾಯತಿಯ ಬೆಳ್ಳೂರು ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಸಂದರ್ಭ.

During a meeting with various officers of Virajpet assembly constituency about the development works happening in the constituency, 05/03/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಧಿಕಾರಿಗಳೊಂದಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಭೆ ನಡೆಸಿದ ಸಂದರ್ಭ.

K.Y. Nanjegowda, MLA of Malur Assembly constituency, extended a cordial invitation to the Karaga Mahotsav program, 05/03/2025
ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘ (ರಿ) ಇವರ ವತಿಯಿಂದ ಮಾಲೂರಿನಲ್ಲಿ ನಡೆಯುವ ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ.ನಂಜೇಗೌಡ ಅವರು ಆತ್ಮೀಯ ಆಮಂತ್ರಣ ನೀಡಿದರು.

A request was made to the respected Minister of Education, Shri Madhu Bangarappa, to include Gonikoppa and Virajpet Kaveri Pre-University Colleges for funding, 04/03/2025
ಗೋಣಿಕೊಪ್ಪ ಮತ್ತು ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾವೇರಿ ಕಾಲೇಜಿನ ಅಧ್ಯಕ್ಷರಾದ ಸುವರ್ಣ ಮುತ್ತಣ್ಣ, ಕೆ ಜಿ ಗೋಪಾಲಕೃಷ್ಣ ಭಟ್, ಡಾ. ಅಕ್ರಂ, ಚೇತನ್ ಚಿನ್ನಪ್ಪ ಉಪಸ್ಥಿತರಿದ್ದರು.
