Happy Happy Holi to all the people of the state., 03/03/2026
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

Visited Madikeri District Hospital to enquire about the health of Gautam, who was injured in the recent non-injured incident in the Napoklu area, spoke to the injured, got information about the incident and encouraged., 02/03/2026
ಇತ್ತೀಚೆಗೆ ನಾಪೋಕ್ಲು ಭಾಗದಲ್ಲಿ ಸಂಭವಿಸಿದ ಅಹಿತರ ಘಟನೆಯಲ್ಲಿ ಗಾಯಗೊಂಡಿದ್ದ ಗೌತಮ್ ರವರ ಆರೋಗ್ಯ ವಿಚಾರಿಸಲು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನೊಂದಿಗೆ ಮಾತನಾಡಿ, ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದು ಧೈರ್ಯ ತುಂಬಲಾಯಿತು.

Bhoomi pooja was conducted for the new building work of the scheduled Pangada pre-metric girls student in the Kutta part of Ponnampete taluk of Virajpet assembly constituency., 02/03/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಕುಟ್ಟ ಭಾಗದಲ್ಲಿ ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಲಾಯಿತು.

Participated in 2026, Honor Award and Kodava Sahitya-Culture Festival, organized by Karnataka Kodava Sahitya Academy and Kodava Samaj Kutta., 01/03/2026
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಸಮಾಜ ಕುಟ್ಟ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ, 2026ನೇ ಸಾಲಿನ, ಗೌರವ ಪ್ರಶಸ್ತಿ ಮತ್ತು ಕೊಡವ ಸಾಹಿತ್ಯ-ಸಂಸ್ಕೃತಿರ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

Best wishes to all the students writing the second PUC exams., 28/02/2026
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು.
