Government Bolero Vehicle Provided to Virajpet Forest Department, 26/09/2026

ಅರಣ್ಯದಂಚಿನ ಗ್ರಾಮಸ್ಥರಿಗೆ ವನ್ಯಪ್ರಾಣಿಗಳಿಂದ ಆಗುವ ತೊಂದರೆಗಳನ್ನು ಶೀಘ ಗತಿಯಲ್ಲಿ ಪರಿಹರಿಸಲು, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅನುಕೂಲವಾಗಲೆಂದು ಸರ್ಕಾರದಿಂದ ನೀಡಿದ ಬೊಲೆರೋ ವಾಹನವನ್ನು ವಿರಾಜಪೇಟೆ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಸಂದರ್ಭ.


Laptops and Projectors Donated to Four Government Schools in Kodagu, 26/09/2026

ಅರಣ್ಯ ಇಲಾಖೆ ಮೂಲಕ ಕರ್ನಾಟಕ ಸರ್ಕಾರ, ಗ್ರಾಮೀಣ ಶಾಲೆಗಳಿಗೆ ಅನುಕೂಲವಾಗಲೆಂದು ಲ್ಯಾಪ್ಟಾಪ್ ಹಾಗೂ ಪ್ರೊಜೆಕ್ಟರ್ ಸವಲತ್ತನ್ನು, ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಬೇಗೂರು, ಹುದಿಕೇರಿ ಹಾಗೂ ವಿರಾಜಪೇಟೆ ತಾಲೂಕಿನ ದೇವಣಗೇರಿ, ಕುಂಜಿಲಗೇರಿ ಸರಕಾರಿ ಶಾಲೆಗಳಿಗೆ ಕೊಡುಗೆಯಾಗಿ ನೀಡಿದ ಸಂದರ್ಭ.

 


Bhoomi Pooja Held for Virajpet–Gonikoppalu Main Road Development, 26/09/2026

ವಿರಾಜಪೇಟೆಯಿಂದ ಗೋಣಿಕೊಪ್ಪಲುವಿಗೆ ತೆರಳುವ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ ಸಂದರ್ಭ.


Preliminary Meeting Held for Kodava Hockey Festival 2027, 26/09/2026

2027 ನೇ ಸಾಲಿನ ಪ್ರತಿಷ್ಠಿತ ಕೊಡವ ಹಾಕಿ ಉತ್ಸವ, ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಪೂರ್ವಭಾವಿ ಸಭೆಯು ಇಂದು ವಿರಾಜಪೇಟೆಯ ನನ್ನ ಗೃಹ ಕಚೇರಿಯಲ್ಲಿ ನಡೆಯಿತು. ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ಅಜ್ಜಿಕುಟ್ಟಿರ ಎಸ್ ನರೇನ್ ಕಾರ್ಯಪ್ಪ, ಹಾಗೂ ಅಜ್ಜಿಕುಟ್ಟಿರ ಕುಟುಂಬದ ಸರ್ವ ಸದಸ್ಯರು ಭಾಗವಹಿಸಿದ ಈ ಸಭೆಯಲ್ಲಿ ಮುಂಬರುವ ಕ್ರೀಡಾಕೂಟದ ಪ್ರಯುಕ್ತ ಪೂರ್ವಭಾವಿ ತಯಾರಿ ಬಗ್ಗೆ ಚರ್ಚಿಸಲಾಯಿತು.

 


**Sports, Cultural, NSS, Red Cross and Rovers-Rangers Activities Inaugurated at Virajpet First Grade College**, 26/09/2026

ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆಯ ಸಭಾಂಗಣದಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್, ರೆಡ್ ಕ್ರಾಸ್, ರೋವರ್ಸ್-ರೇಂಜರ್ಸ್‌ ಮತ್ತು ವಿವಿಧ ಸಮಿತಿಗಳ 2026-27 ಸಾಲಿನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾಹಿತಿ ಪಡೆದ ಸಂದರ್ಭ.