Participated in the foundation stone laying ceremony of the new Kodagu District Congress Bhavan near Madikeri District Collector's office and wished him good luck. District President Shri Dharmaja Uttappa, Minister in charge Shri N.S Bhosa Raju, Madikeri , 01/11/2025

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ಬಳಿಯಲ್ಲಿ ಉದ್ದೇಶಿತ ನೂತನ ಕೊಡಗು ಜಿಲ್ಲಾ ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಭೋಸ ರಾಜು, ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ, ಪಕ್ಷದ ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
 

Kannada Rajyotsava held at Virajapet Taluk grounds and called to participate and nurture Kannada, land, water and culture with respect. Many dignitaries were present in the program, 01/11/2025

ವಿರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಕನ್ನಡ, ನಾಡು, ಜಲ ಮತ್ತು ಸಂಸ್ಕೃತಿಯನ್ನು ಸದಾ ಗೌರವದಿಂದ ಪೋಷಿಸಬೇಕೆಂದು ಕರೆ ನೀಡಿದೆ.ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.


Participated in Virajpet Unity Vote 2025 program on the occasion of National Unity Day. Participated in the walk by inaugurating peace and unity awareness program organized by the District Police Department, 31/10/2025

ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ವಿರಾಜಪೇಟೆ ಏಕತೆಗಾಗಿ ಓಟ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು.
ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ ಶಾಂತಿ ಮತ್ತು ಏಕತೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಕಾಲ್ನಡಿಗೆಯಲ್ಲಿ ಭಾಗವಹಿಸಲಾಯಿತು.

Participated in the remembrance of Subedar Appayya Gowda by paying flowers to his butterfly in Madikeri., 31/10/2025

ಮಡಿಕೇರಿಯಲ್ಲಿ ಸುಬೇದಾರ್ ಅಪ್ಪಯ್ಯ ಗೌಡ ರವರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಅವರ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.


Visited several development works in the holy Talakaveri holy place and then food distribution was served in the constituency, 31/10/2025

ಪವಿತ್ರ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯನ್ನು ಮಾಡಿ ಬಳಿಕ ಕ್ಷೇತ್ರದಲ್ಲಿ ಅನ್ನದಾಸೋಹ ಸೇವೆ ಸಲ್ಲಿಸಲಾಯಿತು.