The ground breaking ceremony for the newly constructed Shaadi Mahal building in Nalvatoklu village of Virajpet assembly constituency and the inauguration of the newly constructed computer room for the education of the students of Kommethodu Badriya Jumma , 30/03/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಲ್ವತ್ತೊಕ್ಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶಾದಿ ಮಹಲ್ ಕಟ್ಟಡಕ್ಕೆ ಭೂಮಿ ಪೂಜೆ ಹಾಗೂ ಕೊಮ್ಮೆತೋಡು ಬದ್ರಿಯಾ ಜುಮ್ಮ ಮಸೀದಿಯಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ನೂತನವಾಗಿ ನಿರ್ಮಾಣಗೊಂಡ ಕಂಪ್ಯೂಟರ್ ಕೊಠಡಿಯ ಉದ್ಘಾಟನೆಯನ್ನು ನೆರವೇರಿಸಿದ ಸಂದರ್ಭ.

Wishing everyone a very Happy Ugadi!, 30/03/2025
ಈ ಹೊಸ ವರ್ಷವು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಹೊಸ ಅವಕಾಶಗಳು ಮತ್ತು ಯಶಸ್ಸನ್ನು ತರಲಿ. ಶಾಂತಿ, ಸಮೃದ್ಧಿ ಮತ್ತು ಸಂತೋಷದಿಂದ ತುಂಬಿರಲಿ.ಬೆಲ್ಲ ಮತ್ತು ಬೇವಿನ ಎಲೆಗಳ ಸಿಹಿ ರುಚಿ, ಜೀವನದ ಕಹಿ ಸಿಹಿ ಕ್ಷಣಗಳನ್ನು ಸಂಕೇತಿಸಲಿ.
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

Participated in the foundation stone laying and inauguration ceremonies of various roads under the jurisdiction of Mayamudi Gram Panchayat, 29/03/2025
ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆಗಳ ಭೂಮಿ ಪೂಜೆ ಹಾಗೂ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

The 25th-year prestigious Muddanda Hockey Festival 2025 was inaugurated at the Field Marshal K.M. Cariappa College ground in Madikeri, and best wishes were extended for the sports event, 29/03/2025
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ, 25ನೇ ವರ್ಷದ ಪ್ರತಿಷ್ಠಿತ ಮುದ್ದಂಡ ಹಾಕಿ ಹಬ್ಬ 2025ರ ಉದ್ಘಾಟನೆಯನ್ನು ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.

Various electrically operated tools approved for the 2024-25 financial year were distributed free of cost to rural artisans under the initiative of the Government of Karnataka, Kodagu Zilla Panchayat, and the Rural Industries Department, 28/03/2025
ಕರ್ನಾಟಕ ರಾಜ್ಯ ಸರ್ಕಾರ, ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕೈಗಾರಿಕಾ ವಿಭಾಗ ವತಿಯಿಂದ 2024-25 ನೇ ಸಾಲಿಗೆ ಮಂಜೂರಾದ, ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ವಿವಿಧ ವಿದ್ಯುತ್ ಚಾಲಿತ ಉಪಕರಣಗಳನ್ನು ವಿತರಣೆ ಮಾಡಲಾಯಿತು.
