The final appearance of the body of a farmer named Koppada Shivappa who died of an elephant attack yesterday night in Dabadka part of Chembu village, was consoled and handed over the first installment of the relief check., 08/08/2025

ಚೆಂಬು ಗ್ರಾಮದ ದಬಡ್ಕ ಭಾಗದಲ್ಲಿ ನೆನ್ನೆ ರಾತ್ರಿ ಆನೆ ದಾಳಿಯಿಂದ ಮೃತಪಟ್ಟ ಕೊಪ್ಪದ ಶಿವಪ್ಪ ಎಂಬ ರೈತನ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಇಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆದು ಬಳಿಕ ಮನೆಯವರಿಗೆ ಸಾಂತ್ವನ ಹೇಳಿ ಪರಿಹಾರ ಚೆಕ್ ನ ಮೊದಲ ಕಂತನ್ನು ಹಸ್ತಾಂತರಿಸಲಾಯಿತು./div>
 
 
 
 
 
 
 
 
 
 
 

Participated in food kit distribution program to special spirits and Asha workers on my 51st birthday by Virajpete assembly constituency Kedamullur Zone Congress., 08/08/2025

ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ವಲಯ ಕಾಂಗ್ರೆಸ್ ವತಿಯಿಂದ ನನ್ನ 51ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಚೇತನರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
 
 
 
 
 
 
 
 
 
 
 

Congratulations to Chandoor Poovanna, son of Kodagu for being selected for the Indian National Hockey Team and best wishes for success., 08/08/2025

ಭಾರತೀಯ ರಾಷ್ಟ್ರೀಯ ಹಾಕಿ ತಂಡಕ್ಕೆ ಆಯ್ಕೆಯಾದ ಕೊಡಗಿನ ಸುಪುತ್ರ ಚಂದೂರ ಪೂವಣ್ಣ ರವರಿಗೆ ಅಭಿನಂದನೆಗಳು ಹಾಗೂ ಅವರಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಕೆಗಳು...
 
 
 
 
 
 
 
 

Visiting the Ashraya Colony of Kedamullur Grama Panchayat area of Virajpet assembly constituency and observing the development of infrastructure there and after accepting the request of various demands, inauguration of new concrete road in Kottoli Guddali, 07/08/2025

ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶ್ರಯ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯದ ಅಭಿವೃದ್ಧಿಯ ವೀಕ್ಷಣೆ ಮಾಡಿ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದ ಬಳಿಕ ಕೊಟ್ಟೋಳಿ ನೂತನ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಹಾಗೂ ಕೊಟ್ಟೋಳಿ ಆಶ್ರಯ ಕಾಲೋನಿಯ ನೂತನ ಅಂಗನವಾಡಿ ಕಟ್ಟಡದ ಗುದ್ದಲಿ ಪೂಜೆ ನೆರೆವೇರಿಸಲಾಯಿತು.
 
 
 
 
 
 
 
 
 
 
 

The new library of SEA Women's College in Perambadi, Virajpet taluk was inaugurated today., 07/08/2025

ವಿರಾಜಪೇಟೆ ತಾಲೂಕು ಪೆರಂಬಾಡಿಯಲ್ಲಿರುವ ಎಸ್ ಇ ಎ ಮಹಿಳಾ ಕಾಲೇಜಿನ ನೂತನ ಗ್ರಂಥಾಲಯವನ್ನು ಇಂದು ಲೋಕಾರ್ಪಣೆ ಮಾಡಲಾಯಿತು..