Kodagu's talents in Khelo Masters National Games, 23/04/2022

Dhamayanthi and Vasanthi PT from Kodagu are selected to represent Karnataka in the Khelo Masters National Games.. A.S. Ponnanna offered his support to these ladies from Kodagu who are representing Karnataka

ಕೊಡಗಿನ ಕ್ರೀಡಾಪಟುಗಳಾದ ದಮಯಂತಿ ಮತ್ತು ಪಿ.ಟಿ.ವಾಸಂತಿ ಖೇಲೋ ಮಾಸ್ಟರ್ಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಹೆಮ್ಮಯ ಮತ್ತು ಸಂತಸದ ವಿಷಯ.

ಅವರಿಗೆ ಅಭಿನಂದಿಸಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಬೆಂಬಲ ನೀಡಲಾಯಿತು. ಕ್ರೀಡೆಗೆ ಹೆಸರಾದ ಕೊಡಗಿಗೆ ಅವರು ಕೀರ್ತಿತರಲೆಂದು ಹಾರೈಸಿದೆ.

#Kodagu #Coorg #Madikeri #Ponnampet #Virajpet #Karnataka #Sports

 
 

Interview in Samyukta Karnataka, 23/04/2022

ಕೊಡವರಿಗೆ ಬುಡಕಟ್ಟು ಸ್ಥಾನಮಾನ ಪಡೆಯುವ ಬಗ್ಗೆ ನಡೆಯುತ್ತಿರುವ ಕಾನೂನು ಹೋರಾಟದ ಬಗ್ಗೆ ಕೆಲ ತಿಂಗಳ ಹಿಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಯು-ಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನ.

ಉಚ್ಚ ನ್ಯಾಯಾಲಯದ ತೀರ್ಪು ಹೋರಾಟದಲ್ಲಿ ಮೊದಲ ಹೆಜ್ಜೆ ಮಾತ್ರ. ಈ ವಿಷಯದಲ್ಲಿ ಮಾಡಬೇಕಾದ ಕೆಲಸ ಸಾಕಷ್ಟು ಇದೆ. ಇದರ ಜೊತೆಗೆ ಕೊಡಗಿನ ಜನತೆ ಎದುರಿಸುತ್ತಿರುವ ಇತರೇ ಸಮಸ್ಯೆಗಳ ಬಗ್ಗೆ ಕೂಡ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ.

#Coorg #Kodagu #Madikeri #Virajpet #Ponnampet #Memories

 

Condolences to families of accident victims, 21/04/2022

ಪಾಲಿಬೆಟ್ಟದ ಆರು ಮಂದಿ ಪ್ರಯಾಣಿಕರು ಹುಣಸೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಸುದ್ದಿ ತೀವ್ರ ಆಘಾತ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಆ ದೇವರು ಕರುಣಿಸಲೆಂದು ಬೇಡಿಕೊಳ್ಳುತ್ತೇನೆ. ಅವರ ಈ ನೋವ್ವಿನಲ್ಲಿ ನಾನು ಭಾಗಿಯಾಗಿದ್ದೇನೆ.


Visit to Mooteri Sri Bhagavathi temple, 20/04/2022

ಮೂಟೇರಿ ಶ್ರೀ ಭಗವತಿ ದೇವಸ್ಥಾನ, ಈಸ್ಟ್ ಕೊಳಕೇರಿ ನಾಪೋಕ್ಲುಯ ಇಲ್ಲಿನ ಮೂಟೇರಿ ಭಗವತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಮತ್ತು ಆಡಳಿತ ಮಂಡಳಿ ಪುನರ್ ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಹಮ್ಮಿಕೊಂಡಿದ್ದು, ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿಗೆ ನನ್ನ ಧನ್ಯವಾದಗಳು. ಶ್ರೀ ಭಗವತಿ ದೇವರ ಆಶೀರ್ವಾದ ಎಲ್ಲರ ಮೇಲು ಇರಲಿ ಎಂದು ಬೇಡಿಕೊಳ್ಳುತ್ತೇನೆ.

#Kodagu #Coorg #Napoklu #Ponnampet #Virajpet #Madikeri #Kushalnagar

 
 

Kabaddi tournament in Kushalnagar, 20/04/2022

ಕೊಡಗಿನ ಕುಶಾಲನಗರದಲ್ಲಿ ಸತತ ನಾಲ್ಕನೇ ವರ್ಷ ಆಯೋಜಿಸಿದ್ದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯವಳಿಯ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂತು.

ಯೂಥ್ ಫ್ರೆಂಡ್ಸ್ ಸಂಘ, ಕುಶಾಲನಗರ, ಇವರು ಬಹಳ ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಭಾಗವಹಿಸಿದ ತಂಡಗಳು ಕೂಡ ವೃತ್ತಿಪರರಂತೆ ಪಂದ್ಯಗಳನ್ನು ಆಡಿದರು. ಪಂದ್ಯಗಳನ್ನು ವೀಕ್ಷಣೆ ಮಾಡಿದ್ದು ಒಂದು ಒಳ್ಳೆ ಅನುಭವವಾಯಿತು.

ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಪಂದ್ಯಾವಳಿಗಳಿಗೆ ಬಹಳ ಮಹತ್ವವಿದೆ. ಪಂದ್ಯಾವಳಿಯ ಆಯೋಜಕರಿಗೂ, ಭಾಗವಹಿಸಿದ ತಂಡಗಳಿಗೂ ಮತ್ತು ಪ್ರಶಸ್ತಿಗಳನ್ನು ಗೆದ್ದವರಿಗೂ ಅಭಿನಂದನೆಗಳು.

#Kodagu #Coorg #Madikeri #Virajpet #Ponnampet #Kushalnagar