Chi, son of Karnataka Supreme Court Justice S.G. Pandit, at the tennis pavilion hall at Bangalore Palace ground. Raw. Vinayak S. Pandit's marriage is Chi. Happened with Sou Ramya Hegde. In his wedding reception, the newly weds were participated along with, 10/05/2026
ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಟೆನ್ನಿಸ್ ಪೆವಿಲಿಯನ್ ಸಭಾಂಗಣದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಎಸ್.ಜಿ ಪಂಡಿತ್ ರವರ ಪುತ್ರ ಚಿ. ರಾ. ವಿನಾಯಕ್ ಎಸ್. ಪಂಡಿತ್ ರವರ ವಿವಾಹವು ಚಿ. ಸೌ ರಮ್ಯಾ ಹೆಗ್ಡೆ ರವರೊಂದಿಗೆ ಜರುಗಿತು.
ಇವರ ವಿವಾಹ ಆರತಕ್ಷತೆಯಲ್ಲಿ, ಕರ್ನಾಟಕ ರಾಜ್ಯ ಘನ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರೊಂದಿಗೆ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಲಾಯಿತು.

Balayada Karun Kalappa and Lata and Kollimada Ajith Ayyappa and Rashmi's grandson's naming ceremony held at Mulki Sundaram Shetty Hall in Hongasandra, Bangalore, participated and blessed with my wife Mrs. Kanchan Ponnanna., 10/05/2026
ಬೆಂಗಳೂರಿನ ಹೊಂಗಸಂದ್ರದಲ್ಲಿರುವ ಮುಲ್ಕಿ ಸುಂದರಾಂ ಶೆಟ್ಟಿ ಸಭಾಂಗಣದಲ್ಲಿ ನಡೆದ ಬಾಳೆಯಡ ಕರುಣ್ ಕಾಳಪ್ಪ ಹಾಗೂ ಲತಾ ಮತ್ತು ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಹಾಗೂ ರಶ್ಮಿ ರವರ ಮೊಮ್ಮಗನ ನಾಮಕರಣ ಸಮಾರಂಭದಲ್ಲಿ, ನನ್ನ ಧರ್ಮ ಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರೊಂದಿಗೆ ಭಾಗವಹಿಸಿ ಆಶೀರ್ವದಿಸಲಾಯಿತು.

Happy World Mothers Day There is no god above mother, the real god on earth is mother. Respectful salute to all mothers., 10/05/2026
ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು
ತಾಯಿಗಿಂತ ಮಿಗಿಲಾದ ದೇವರಿಲ್ಲ,ಭೂಮಿ ಮೇಲಿನ ನಿಜವಾದ ದೇವರು ಎಂದರೆ ಅದು ತಾಯಿಯೇ.
ಸರ್ವ ಮಾತೆಯರಿಗೂ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

Karnataka State Government Minister of Planning and Numeracy Department, Sri D. I am deeply saddened and shocked to hear the news of Sudhakar's demise now. I pray that the Lord bless his immense supporters, friends, relatives and family members to bear th, 10/05/2026
ಕರ್ನಾಟಕ ರಾಜ್ಯ ಸರಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಶ್ರೀ ಡಿ. ಸುಧಾಕರ್ ರವರು ಇದೀಗ ನಿಧನರಾದ ಸುದ್ದಿ ತಿಳಿದು ತೀವ್ರ ದುಃಖ ಹಾಗೂ ಆಘಾತ ಉಂಟಾಗಿದೆ.
ಸರಕಾರದ ಅತ್ಯಂತ ಕ್ರಿಯಾಶೀಲ ಶಾಸಕರು ಹಾಗೂ ಸಚಿವರಾಗಿದ್ದ ಶ್ರೀಯುತರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು, ಭಗವಂತ ಅವರ ಅಪಾರ ಬೆಂಬಲಿಗರಿಗೆ, ಸ್ನೇಹಿತರಿಗೆ, ಬಂಧು-ಬಳಗಕ್ಕೆ ಹಾಗೂ ಕುಟುಂಬ ವರ್ಗದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ

The moment when the Karnataka government and my efforts for sports development of Kodagu district was informed to the people at the Chenanda Cup., 09/05/2026
ಕೊಡಗು ಜಿಲ್ಲೆಯ ಕ್ರೀಡೆಗೆ ಹಾಗೂ ಕ್ರೀಡಾ ಅಭಿವೃದ್ಧಿಗೆ, ಕರ್ನಾಟಕ ಸರ್ಕಾರ ಹಾಗೂ ನಾನು ಮಾಡಿರುವ ಪ್ರಯತ್ನವನ್ನು ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಜನತೆಗೆ ತಿಳಿಯಪಡಿಸಿದ ಸಂದರ್ಭ.
