Free Dental Check-up Camp by Coorg Institute of Dental Sciences advocating the importance of dental health, 17/03/2023

ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರಕ್ಕೆ ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಮಾತನಾಡಿ, ಸಾಮಾನ್ಯ ಆರೋಗ್ಯದೊಂದಿಗೆ ನಮ್ಮ ಹಲ್ಲಿನ ಆರೋಗ್ಯವೂ ಪ್ರಮುಖವಾದುದು, ಅದರ ಬಗ್ಗೆ ನಿರ್ಲಕ್ಷ್ಯ ತೋರದೆ, ಹಲ್ಲಿನ ಬಗ್ಗೆ ಕಾಳಜಿವಹಿಸಿಕೊಳ್ಳಬೇಕು ಎಂದು ಅಲ್ಲಿ ನೆರೆದಿದ್ದ ಸಭಿಕರಿಗೆ ಹೇಳಿದೆ. ಪ್ರತಿ ವರ್ಷವೂ ಜನಪರ ಸೇವೆಗಳನ್ನು ಹಮ್ಮಿಕೊಳ್ಳುತ್ತಿರುವ ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಕೋರಿದೆ.
 
I was honored to be the chief guest at the Free Dental Check-up Camp by Coorg Institute of Dental Sciences advocating the importance of dental health. Let's prioritize our dental health as much as our general health. A healthy smile leads to a healthy life! Wishing the Institute all the success in their endeavors to provide pro-people services every year.
 
 
 
img
 

Visit to the Government Higher Primary School in K-Badaga village and donated 15 benches and 5 chairs to the school, 16/03/2023

ಕೆ. ಬಾಡಗ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿ ಕೊರತೆಯಿದ್ದ 15 ಬೆಂಚುಗಳನ್ನು ಹಾಗೂ 5 ಖುರ್ಚಿಗಳನ್ನು ಕೊಡುಗೆ ನೀಡಿದೆನು. ಈ ನನ್ನ ಅಲ್ಪ ಕಾಣಿಕೆಯು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದ್ದೇನೆ. ಹಾಗೆಯೇ ಶಾಲಾಪಠ್ಯಗಳಲ್ಲಿ ಕನ್ನಡ ಭಾಷೆಯ ಮಹತ್ವದ ಬಗ್ಗೆಕೂಡ ಮನವರಿಕೆ ಮಾಡಿಸಿದೆನು..
 
I visited the Government Higher Primary School in K-Badaga village and donated 15 benches and 5 chairs to the school to provide for their lack of adequate facilities. I hope that this meagre contribution of mine will benefit the students. I also discussed the importance of Kannada language in school textbooks.
 
 
 
img
 

Held meetings and consultations with party workers in Gonikoppa, Hudikeri and Arji Panchayat villages, 15/03/2023

ಗೋಣಿಕೊಪ್ಪ, ಹುದಿಕೇರಿ ಮತ್ತು ಅರ್ಜಿ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿಯಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆಗಳನ್ನ ನಡೆಸಿದ ಕ್ಷಣಗಳು.
 
I had an eventful evening recently when we held meetings and consultations with party workers in Gonikoppa, Hudikeri and Arji Panchayat villages. I eagerly look forward to doing some good work with our dedicated party workers in the coming future.
 
 
 
img
 

Visit to Brahmagiri colony and listened to the concerns of the people, 15/03/2023

ಇತ್ತೀಚೆಗೆ ನಾನು ಬ್ರಹ್ಮಗಿರಿ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದೆನು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳ ಬಗ್ಗೆ ಅವರಿಗೆ ತಿಳುವಳಿಕೆ ನೀಡಿ, ಉಜ್ವಲ ಭವಿಷ್ಯವನ್ನು ನಿರ್ಮಿಸಲು ನಮ್ಮೊಂದಿಗೆ ಕೈಜೋಡಿಸಿ ಎಂದು ಬೆಂಬಲ ಕೇಳಿದೆನು!
 
Recently I visited the Brahmagiri colony and listened to the concerns of the people. I assured them that we are dedicated to making a positive difference in their lives.
 
They were informed about the Congress Guarantee Cards and they were invited to join their hands with us to build a brighter future!
 
 
 
img
 

I met with the Kelapanda family to discuss and propose a vision for a clean and efficient government that puts the people first, 14/03/2023

ನಿನ್ನೆ ಕೇಲ್ಪಂಡ ಕುಟುಂಬವನ್ನು ಭೇಟಿ ಮಾಡಿ, ಜನರಿಗೆ ಮೊದಲ ಆದ್ಯತೆ ಕೊಡುವ ಸ್ವಚ್ಛ ಮತ್ತು ದಕ್ಷ ಸರ್ಕಾರದ ಕಲ್ಪನೆಯನ್ನು ನೀಡಿದೆ.ಸ್ಥಳೀಯನಾಗಿ,ಇಲ್ಲಿನ ಎಲ್ಲ ಸಮುದಾಯಗಳಿಗೆ ಸೇವೆ ಸಲ್ಲಿಸಲು ಮತ್ತು ಸಕಾರಾತ್ಮಕ ಸಾಮಾಜಿಕ ಬದಲಾವಣೆಗಳನ್ನು ಮಾಡಲು ನಾನು ಬದ್ಧನಾಗಿದ್ದೇನೆ.ರಾಜಕೀಯಕ್ಕೆ ಬರುವುದಕ್ಕೂ ಮುಂಚೆಯಿಂದಲೂ ಜನರ ಸೇವೆ ಮಾಡಬೇಕೆಂಬುದೇ ಸದಾ ನನ್ನ ಪ್ರೇರಕ ಶಕ್ತಿಯಾಗಿತ್ತು.ಕೋವಿಡ್-19 ಮಹಾಮಾರಿ ಅಪ್ಪಳಿಸಿದಾಗ,ನಾನು ನನ್ನನ್ನು ಸಾಮಾಜಿಕ ಕಾರ್ಯಗಳಿಗೆ ಸಮರ್ಪಿಸಿಕೊಂಡು,ಸಂತ್ರಸ್ತರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ನನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಿದ್ದೇನೆ.ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇನೆ ಎಂದು ವಿವರಿಸಿದೆ.
 
I met with the Kelapanda family yesterday, where I discussed and proposed a vision for a clean and efficient government that puts the people first.
 
As a local, I'm committed to serving my community and making a positive impact for all.
 
 
 
img