Shooting competition at Ponnampet, 25/01/2023
Shooting competition at Ponnampet. ಪೊನ್ನಂಪೇಟೆಯಲ್ಲಿ ಶೂಟಿಂಗ್ ಸ್ಪರ್ದೆ
ಅಂಬಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದ್ದ ಶೂಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸುವ ಅವಕಾಶ ಓದಗಿಬಂತು. ನಮ್ಮ ಕೊಡಗಿನ ಪಾರಂಪರಿಕ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಇಂತಹ ಕ್ರೀಡಾಕೂಟ ಆಯೋಜಿಸಿದ ಕ್ಲಬ್ ಪದಾಧಿಕಾರಿಗಳಿಗೂ ಮತ್ತು ಇದರಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದಿಸಿದೆ.
ಉದ್ಘಾಟನೆ ವೇಳೆ 12 ಬೋರ್ ಬಂದೂಕಿನಲ್ಲಿ ಗುರಿಯನ್ನು ಹೊಡೆದಿದ್ದು ಅವಿಸ್ಮರಣೀಯ ಕ್ಷಣವಾಗಿತ್ತು. ಕ್ರೀಡೆ ಕೊಡಗಿನ ಜನರ ಜೀವನದ ಭಾಗವೇ ಆಗಿದೆ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #KannadaSahityaSammelana

Virajpet Taluk Kannada Sahitya Sammelana, 23/01/2023
Virajpet Taluk Kannada Sahitya Sammelana. ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನ
ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವ ಅವಕಾಶ ಒದಗಿ ಬಂತು. ಸಾಹಿತ್ಯ, ಶಿಕ್ಷಣ, ಕ್ರೀಡೆ, ಜನಪದ, ವೈದ್ಯಕೀಯ ಹೀಗೆ ಹಲವಾರು ಕ್ಷೇತ್ರದ ಗಣ್ಯರಿಗೆ ಆರ್ಜಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಮಾತ್ರವಲ್ಲದೆ, ಕನ್ನಡದ ಸರ್ವತೋನ್ಮುಖ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾದುದು. ಪರಿಷತ್ತಿನ ಕಾರ್ಯಚಟುವಟಿಕೆಗಳು ಕನ್ನಡದ ವಾತಾವರಣ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಿದೆ. ಪರಿಷತ್ತಿನ ಕೆಲಸಗಳಿಗೆ ನನ್ನ ಬೆಂಬಲ ಸದಾ ಇರುವುದಾಗಿ ಈ ಸಂಧರ್ಬದಲ್ಲಿ ಮಾತನಾಡುತ್ತ ತಿಳಿಸಿದೆ.
ಕನ್ನಡ ಭಾಷೆಯ ರಕ್ಷಣೆಯ ಹೊಣೆ ನಮ್ಮೆಲರ ಮೇಲೆ ಇದೆ. ಅದು ನಮ್ಮ ಕರ್ತವ್ಯ ಕೂಡ. ಈ ಕಾರ್ಯಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದ ತಾಲ್ಲೂಕು ಸಾಹಿತ್ಯ ಪರಿಷತ್ತಿಗೆ ನನ್ನ ಧನ್ಯವಾದಗಳು.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #KannadaSahityaSammelana

Virajpet Taluk Kannada Literary Conference, 22/01/2023
ಅರ್ಜಿ ಬೇಟೊಳ್ಳಿ ಅಲ್ಲಿ ನಡೆಯುತ್ತಿರುವ 9ನೆಯ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಸಮಾರಂಭ ದ ಅಧ್ಯಕ್ಷತೆ ವಹಿಸಿಕೊಂಡ ಎ .ಎಸ್ ಪೊನ್ನಣ್ಣ ನವರು
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Chiniwada #Gonikoppa #Shivakeri #Chennayyanakote #Pollibetta #Devapura #Amangeri #Kunda #KodavaSong

Kodagu Zilla Kaveri Tamil Sangha Pongal celebrations, 21/01/2023
Kodagu Zilla Kaveri Tamil Sangha Pongal celebrations. ತಮಿಳು ಸಂಘದ ಪೊಂಗಲ್ ಕಾರ್ಯಕ್ರಮ ಸಿದ್ದಾಪುರದಲ್ಲಿ, ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ. ಹಬ್ಬಗಳು ಜನರನ್ನು ಬೆಸೆಯುವ, ಸ್ನೇಹ ಸೌಹಾರ್ದತೆಯನ್ನು ಹೆಚ್ಚಿಸುವ ದಿನಗಳು. ಕಾವೇರಿ ತಾಯಿಯ ಆಶೀರ್ವಾದದ ಕೊಡುಗೆಯಿಂದ ಕೋಟ್ಯಂತರ ಜನ ಈ ಹಬ್ಬವನ್ನು ಆಚರಿಸುವಂತಾಗಿದೆ. ಕೊಡಗಿನಲ್ಲಿ ನೆಲೆಯೂರಿರುವ ತಮಿಳು ಜನರಿಗೆ ಹಬ್ಬದ ಶುಭಾಶಯ ಕೋರಿ ಸಂಘದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದೆ. ಬಾಷೆ ನಮ್ಮ ಅಸ್ತಿತ್ವವನ್ನು ಉಳಿಸುತ್ತದೆ. ಆದರೆ ಅದು ನಮ್ಮನ್ನು ಬೇರೆ ಮಾಡುವ ಸಾಧನವಲ್ಲ. ಎಲ್ಲಾ ಸಮುದಾಯಗಳ ಜನರು ಕೊಡಗಿನಲ್ಲಿ ನೆಲೆಸಿ ತಮ್ಮದೇ ಕೊಡುಗೆ ಕೊಡುತ್ತಿರುವುದು ಹೆಮ್ಮೆಯ ಮತ್ತು ಸಂತಸದ ವಿಷಯ. ಕಾವೇರಿ ತಾಯಿಯ ಆಶೀರ್ವಾದ ಸದಾ ಕಾಲ ಎಲ್ಲರ ಮೇಲೂ ಇರಲಿ ಎಂದು ಹಾರೈಸಿದೆ. #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

A S Ponnanna was honored by the management of Hudikeri Janata High School., 18/01/2023
ಅಜ್ಜಿಕುಟ್ಟೀರ ಎಸ್ ಪೊನ್ನಣ್ಣರವರಿಗೆ ಹುದಿಕೇರಿ ಜನತಾ ಪ್ರೌಢಶಾಲೆ ಆಡಳಿತ ಮಂಡಳಿಯವರಿಂದ ಸನ್ಮಾನ
ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಪೊನ್ನಣ್ಣರವರು ಮಾತನಾಡಿ ಈ ಶಾಲೆಯು ನಮ್ಮ ತಂದೆಯವರು ಓದಿದ ಶಾಲೆ ಹಾಗೂ ಇದು ನನ್ನ ಊರು. ಈ ಶಾಲೆಯಲ್ಲಿ ಓದಿದವರು ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಈ ಶಾಲೆ ಆಡಳಿತ ಮಂಡಳಿಯವರು ನನ್ನನ್ನು ಕರೆಸಿ ಈ ಶಾಲೆಯ ಶಾಲೆಯ ಕಟ್ಟಡಗಳ ದುಸ್ಥಿತಿಯ ಬಗ್ಗೆ ತಿಳಿಸಿದಾಗ ಹೇಗಾದರೂ ಮಾಡಿ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಸಂಕಲ್ಪದೊಂದಿಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಿ ಕೊನೆಗೆ ಕೋಲಾರ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ರವರಿಂದ 10 ಲಕ್ಷ ಅನುದಾನ ತರುವಲ್ಲಿ ಯಶಸ್ವಿಯಾದೆ. ಶಾಲಾ ಅಡತ ಮಂಡಳಿ ಅಧ್ಯಕ್ಷರಾದ ಮಂಡೆಚಂಡ ದಿನೇಶ್ ಚಿಟ್ಯಪ್ಪರವರು ಮಾತನಾಡಿ ಈ ಹಿಂದೆ ಹಲವಾರು ವರ್ಷಗಳಿಂದ ಇದರ ದುರಸ್ತಿಗೆ ಹಲವಾರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ರಾಜಕೀಯ ಲೆಕ್ಕಾಚಾರಗಳಿಂದಾಗಿ ಯಾರೊಬ್ಬರೂ ಆಸಕ್ತಿ ವಹಿಸಿರಲಿಲ್ಲ. ಆದರೆ ಪೊನ್ನಣ್ಣವರು ಯಾವುದೇ ಅಧಿಕಾರವಿಲ್ಲದಿದ್ದರೂ ಕೂಡ, ತಮ್ಮ ಸೇವಾ ಮನೋಭಾವದಿಂದ ಶಾಲಾ ಆಡಳಿತ ಮಂಡಳಿಯವರೊಂದಿಗೆ ಕೈಜೋಡಿಸಿ ಶಾಲೆಯನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಹಿಂದಿನ ಆಡಳಿತ ಮಂಡಳಿ ಹಾಗೂ ಹಾಲಿ ಆಡಳಿತ ಮಂಡಳಿಯ ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
