Support to the demand for ST reservation , 28/03/2022

ಫೆ.10 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏಕಾಂಗಿಯಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಸ್ಥಳದಲ್ಲೇ ಭೇಟಿ ಮಾಡಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.

ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಸಮಿತಿಯು ಶಿಫಾರಸ್ಸು ಮಾಡಿರುವಂತೆ ST ಮೀಸಲಾತಿಯನ್ನು ಶೇಕಡಾ 3ರ ರಿಂದ ಶೇಕಡಾ 7.5ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ಕಾಲ ದೂಡುತ್ತಾ ಬಂದಿದೆ. ತಮ್ಮ ಸಾಂವಿಧಾನಿಕ ಹಕ್ಕನ್ನು ಬೇಡುತ್ತಿರುವ ST ಸಮುದಾಯಕ್ಕೆ ಇದರಿಂದ ವಂಚನೆ ಮಾಡಿದಂತಾಗಿದೆ.

ಸಮುದಾಯದ ಜನಸಂಖ್ಯೆಯ ಅನುಪಾತಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಂವಿಧಾನಬದ್ದವಾದ ಮೀಸಲಾತಿ ಕೇಳುತ್ತಿರುವುದರಲ್ಲಿ ಸಾಮಾಜಿಕ ನ್ಯಾಯದ ಉದ್ದೇಶ ಇದೆ. ಹೆಚ್ಚಿನ ಕಾಲ ಹರಣ ಮಾಡದೆ ನ್ಯಾ.ನಾಗಮೋಹನ ದಾಸ್ ವರದಿಯನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ಆಗ್ರಹ ಮಾಡಲಾಯಿತು. ವಾಲ್ಮೀಕಿ ಸಮಾಜದ ಇನ್ನಿತರ ಬೇಡಿಕೆಗಳಿಗೂ ಕಾನೂನಿನ ಅಡಿಯಲ್ಲಿ ನಮ್ಮ ಬೆಂಬಲ ಇರುವುದಾಗಿ ಪೂಜ್ಯ ಸ್ವಾಮೀಜಿಯವರಿಗೆ ತಿಳಿಸಲಾಯಿತು.

#Reservation #ST #NagamohanaDas #Kodagu #Virajpet #Madikeri #Ponnampet

 
 

Legal Cell meeting , 24/03/2022

ಕೆ.ಪಿ.ಸಿ.ಸಿಯ ಕಾನೂನು ಘಟಕದ ಸಭೆಯಲ್ಲಿ ಅಥಿತಿಗಳಾಗಿ ಭಾಗವಹಿಸಿದ ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ ಹಾಗೂ ಎಲ್ಲಾ ವಕೀಲರು ಮತ್ತು ಮಾನವ ಹಕ್ಕು ಘಟಕದ ಸದಸ್ಯರುಗಳಿಗೆ ಧನ್ಯವಾದಗಳು.

ಸಭೆಯಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ವಿಚಾರ ವಿನಿಮಯ ಮತ್ತು ಚರ್ಚೆ ನಡೆಯಿತು. ಕಾನೂನು ಘಟಕದ ಕೆಲಸಗಳಿಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾದವು.  

#Kodagu #Madikeri #Virajpet #Ponnampet #Coorg #Karnataka #Legal

 
 

Holi Cup Football tournament in Madikeri, 23/03/2022

ಕೂರ್ಗ್ ಚಾರ್ಮರ್ಸ್ ಫುಟ್ಬಾಲ್ ಕ್ಲಬ್ ಅವರು ಆಯೋಜಿಸಿದ್ದ ಹೋಳಿ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ನನ್ನನು ಆಹ್ವಾನಿಸಿದ್ದರು. ಮಡಿಕೇರಿಯ ಮೆನ್ಸ್ ಕಾಂಪೌಂಡ್ ನಲ್ಲಿ ಜರುಗಿದ ಈ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು ಸಂತಸದ ವಿಷಯ.

ಕ್ರೀಡೆಗೆ ಹೆಸರುವಾಸಿಯಾದ ನಮ್ಮ ಕೊಡಗು ಜಿಲ್ಲೆಗೆ ಎಲ್ಲಾ ಮಟ್ಟದಲ್ಲೂ ಎಲ್ಲಾ ರೀತಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಈ ರೀತಿಯ ಪಂದ್ಯಾವಳಿಗಳ ಅವಶ್ಯಕತೆ ಇದೆ. ಯುವಜನತೆಯಲ್ಲಿ ಆರೋಗ್ಯ, ಕ್ರೀಡಾ ಮನೋಭಾವ ತುಂಬುವಲ್ಲಿ ಇದು ಸಹಕಾರಿ. ಪಂದ್ಯಾವಳಿಯ ಆಯೋಜಕರಿಗೂ, ಅದರಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು. ಕ್ರೀಡಾಕೂಟದ ಉದ್ಘಾಟನೆಗೆ ನನ್ನನು ಆಹ್ವಾನಿಸಿದಕ್ಕೆ ಆಯೋಜಕರಿಗೆ ನನ್ನ ಧನ್ಯವಾದಗಳು.

#Kodagu #Madikeri #Virajpet #Ponnampet #Coorg

 
 

Enrolment drive in Ponnampet, 21/03/2022

ಪೊನ್ನಂಪೇಟೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೂತನ ಸದಸ್ಯರನ್ನು ದಾಖಲು ಮಾಡುವ ಸಲುವಾಗಿ ನೋಂದಣಿಗಾರರು ಮತ್ತು ಮುಖ್ಯ ನೋಂದಣಿಗಾರರ (Enrollers and Master Enrollers) ಜೊತೆಯಲ್ಲಿ ಸಭೆ ನಡೆಸಲಾಯಿತು.

ಮುಂದಿನ ದಿನಗಳಲ್ಲಿ ಯಾವ ರೀತಿ ಸದಸ್ಯತ್ವ ನೋಂದಣಿ ನದಸಬೇಕು ಎನ್ನುವುದರ ಕುರಿತು ಮತ್ತು ಯಾವ ರೀತಿಯ ಕ್ರಮಗಳ ಅವಶ್ಯಕತೆ ಇದೆ ಎನ್ನುವುದರ ಕುರಿತು ಚರ್ಚಿಸಲಾಯಿತು. ಪಕ್ಷದ ಸಂಘಟನೆಯನ್ನು ಇನ್ನಷ್ಟು ಗಟ್ಟಿಮಾಡುವ ನಿಟ್ಟಿನಲ್ಲಿ ಎನ್ರೋಲರ್ಸ್ಗ್'ಗಳ ಪಾತ್ರ ಬಹಳ ಮಹತ್ವದ್ದು.

#Kodagu #Virajpet #Madikeri #Ponnampet

 
 

Discussion with Scheduled Tribes of Thithimathi, 20/03/2022

ಕೊಡಗು ಜಿಲ್ಲೆಯ ತಿತಿಮತಿ ಗ್ರಾಮದಲ್ಲಿ ದಟ್ಟವಾದ ಕಾಡು ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಮಾಡಲು ಅವರ ವಾಸಸ್ಥಳಗಳಿಗೆ ಭೇಟಿ ಮಾಡಿದೆ.

ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ, ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಮಟ್ಟದಲ್ಲಿ ಯಾವ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ತರಬಹುದು ಎಂಬುದರ ಕುರಿತಾಗಿ ಚರ್ಚೆ ನಡೆಸಲಾಯಿತು.

#Kodagu #Virajpet #Madikeri #Ponnampet #Thithimathi