Thanks to the Forest Dept's efforts in preventing waste dumping, 03/02/2023

Thanks to the Forest Dept's efforts in preventing waste dumping. ಅರಣ್ಯ ಇಲಾಖೆಯ ಮೆಚ್ಚುವಂತ ಕಾರ್ಯ
 
ಕೊಡಗಿನ ಕಾಡುಗಳಲ್ಲಿ ಕೇರಳ ರಾಜ್ಯದಿಂದ ಅಕ್ರಮವಾಗಿ ತಂದು ಬಿಸಾಡುತ್ತಿದ್ದ ಕಸವನ್ನು ತಡೆದು ಅಪರಾಧಿಗಳನ್ನು ಬಂದಿಸಿದ ಬ್ರಹ್ಮಗಿರಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಡ್ಯಾನ್ಸಿ ದೇಚಮ್ಮ, ಮಾಕುಟ್ಟ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಸುಹಾನಾ ಮತ್ತು ಇತರೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಅಭಿನಂದನೆಗಳು.
 
ಅರಣ್ಯದ ಒಳಗೆ ಭಾರಿ ಪ್ರಮಾಣದಲ್ಲಿ ಕಸವನ್ನು ವಿಸರ್ಜನೆ ಮಾಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅರಣ್ಯ ಮತ್ತು ಕಾಡು ಪ್ರಾಣಿಗಳಿಗೆ ಮಾತ್ರವಲ್ಲದೆ, ಪರಿಸರ ಹಾನಿಯಿಂದ ಪ್ರತಿಯೊಬ್ಬರಿಗೂ ತೊಂದರೆ ತಪ್ಪಿದ್ದಲ್ಲ. ಈ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ.
 
ಸಿಬ್ಬಂದಿ ಕೊರತೆ, ಪರ ರಾಜ್ಯಗಳಿಂದ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸದಿರುವುದೇ ಇದಕ್ಕೆ ಕಾರಣವಾಗಿದೆ. ಕೊಡಗಿನ ಕಾಡುಗಳು ಸೂಕ್ಷ್ಮ ಪ್ರದೇಶಗಳು. ಇಲ್ಲಿನ ಮಳೆ, ನದಿ, ನೀರು, ಕಾಡು ಕೋಟ್ಯಂತರ ಜನರನ್ನು ಸಲಹುತ್ತದೆ. ಇದನ್ನು ಕಾಪಾಡುವುದು ಕೇವಲ ಕೊಡಗಿನ ಜನರ ಅಥವಾ ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಕರ್ನಾಟಕ ರಾಜ್ಯ ಸರ್ಕಾರ ಕೇರಳದ ಮೇಲೆ ಪ್ರಭಾವ ಬೀರಿ ಅಲ್ಲಿಂದ ಕಸ ಬರದಂತೆ ತಡೆಯಬೇಕು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Forest #Garbage
 
 
img