Inauguration of the new party office in Ponnampet, Kodagu, 06/02/2022

Inauguration of the new party office in Ponnampet, Kodagu, on Saturday.
 
ಹೊಸದಾಗಿ ಕಾಂಗ್ರೆಸ್ ಪಕ್ಷದ ಪೊನ್ನಂಪೇಟ್ ಬ್ಲಾಕ್'ನ ವಲಯ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ ಸಂದರ್ಭ. ಈ ಭಾಗದ ಕಾಂಗ್ರೆಸ್ ಪಕ್ಷದ ಅತಿ ಹಿರಿಯ ನಾಯಕರಾದಂತಹ ಮನೆಯಪಂಡ ವಿಠಲ್ ಅಪ್ಪಯ್ಯ ಉದ್ಘಾಟಿಸಿದರು.
ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯರು, ಹಿರಿಯ ನಾಯಕರು, ಈ ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿದರು. ಕಾಂಗ್ರೆಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಎಲ್ಲರು ಜೊತೆ ಸೇರಿ, ಹಿರಿಯರ ಮಾರ್ಗದರ್ಶನದಲ್ಲಿ, ಯುವಕರ ಸಹಯೋಗದೊಂದಿಗೆ, ಕಟ್ಟುವಂತ ದೃಢ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
 
 

Gonikoppa Premier League cricket tournament by Youth Wing, 29/01/2022

Gonikoppa Premier League cricket tournament by Youth Wing
7 Star ಯೂತ್ ವಿಂಗ್, ಗೋಣಿಕೊಪ್ಪ ಅವರು ಆಯೋಜಿಸಿದ್ದ 6ನೇ ವರ್ಷದ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳು ಹಾಗೂ ಆಯೋಜಕರಿಗೆ ಶುಭಕೋರಿದ ಸಂಧರ್ಭ. ಕೊಡಗು ಜಿಲ್ಲೆಯಿಂದ ಸಾಕಷ್ಟು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಸ್ಥಳೀಯವಾಗಿ ಆಯೋಜಿಸುವ ಈ ರೀತಿಯ ಪಂದ್ಯಾವಳಿಗಳಿಂದ ಇನ್ನಷ್ಟು ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಪಂದ್ಯಾವಳಿ ಆಯೋಜಕರು, ಜಿ.ಪಿ.ಎಲ್ ಕುಟುಂಬ ಮತ್ತು ಪ್ಲಾಗೊಂಡ ಎಲ್ಲಾ ಕ್ರೀಡಾಪ್ರೇಮಿಗಳಿಗೂ ಅಭಿನಂದನೆಗಳು.
 
img
img
 

Meeting of party workers at Koyanadu, 29/01/2022

ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್ ಮೊಹಿದಿನ್ ಕುಂಞ ರವರ ಕೊಯನಾಡು ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ. ಸಭೆಯಲ್ಲಿ ಮಾಜಿ ಕೊಡಗು ಡಿಸಿಸಿ ಸದಸ್ಯರಾದ ಎನ್.ಸಿ ಮನೋಹರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮನಾಥ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್ ಸುರೇಶ್, ಮುಖಡರಾದ ಗಣಪಯ್ಯ, ಕನ್ಯಾನ ವಿಜಯಕುಮಾರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ ಹನೀಫ್, ನಾಯಕರಾದ ವಾಸು ಪೂಜಾರಿ, ಬ್ಲಾಕ್ ಕಾಂಗ್ರೆಸ್ ನಾಯಕಿ ಕೆ.ಕೆ ರಾಜೇಶ್ವರಿ, ಪಂಚಾಯತ್ ಸದಸ್ಯ ಗಿರೀಶ್, ಚೆಂಬು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಚೆಂಬು ಸಂಪಾಜೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದರು.

 

 
img
img
img
img
img
 

Addressing Pragati Auto Drivers and Owners Association, APMC, Gonikoppa, 28/01/2022

Best wishes to Pragati Auto Drivers and Owners Association, APMC, Gonikoppa. ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ನೂತನವಾಗಿ ಸ್ಥಾಪನೆಯಾದ ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉದ್ಘಾಟನೆಯನ್ನು ಹಲವು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನೆರವೇರಿಸಿದ ಸಂದರ್ಭ. ಸಂಘದ ಅಧ್ಯಕ್ಷರಾದ ಎಂ.ಎನ್.ಪ್ರಕಾಶ್, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ನನ್ನ ಅಭಿನಂದನೆಗಳು.
 
 
img
img
img
img
 

Visit to Sampaje, 27/01/2022

During my visit to Sampaje, I prayed at the Panchalingeshwara Temple and Chedavu Koragajja Daivasthana.
ಸಂಪಾಜೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಚೆಡಾವು ಕೊರಗಜ್ಜ ದೈವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಜೊತೆಗಿದ್ದರು.
 
asp
asp
asp
asp
asp
asp