Assistance through women's organisation, 07/07/2022

ಪೊನ್ನಂಪೇಟೆ ತಾಲೂಕಿನ ಶಿವಕಾಲೋನಿಯ ಜಗಜೀವನ ರಾಮ್ ಮಹಿಳಾ ಸಂಘದವರಿಂದ ಅನಾರೋಗ್ಯದಿಂದ ಬಳಲುತ್ತಿರುವ ಸ್ಥಳೀಯರಾದ ಹೆಚ್.ಹೆಚ್ ಮಲ್ಲೇಶ್ ರವರಿಗೆ ನೆರವಿನ ಅಗತ್ಯ ಇರುವುದು ತಿಳಿಯಿತು.
 
ಅವರ ಮನೆಗೆ ಭೇಟಿ ಕೊಟ್ಟು ಅವರ ಆರೋಗ್ಯ ವಿಚಾರಿವಿ ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ. ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದೆ.
 
ಮಹಿಳಾ ಸಂಘದ ವತಿಯಿಂದ ಈ ರೀತಿಯ ಸಮಾಜ ಸೇವೆಯ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ.
 
#Kodagu #Coorg #Madikeri #Virajpet #Kushalnagar #Gonikoppal #Ponnampet
 
 
img
 

Unscientific policies responsible for natural disasters in Kodagu, 05/07/2022

ಜಿಲ್ಲಾಡಳಿತದ ಅವೈಜ್ಞಾನಿಕ ನೀತಿಯೇ ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ಮೂಲ ಕಾರಣ. ಕಳೆದ ಹಲವಾರು ದಿನಗಳಿಂದ ಕೊಡಗಿನ ವಿವಿಧ ಸ್ಥಳಗಳಲ್ಲಿ ಸರಣಿ ಭೂಕಂಪನವಾಗುತ್ತಿವೆ. ಇದರ ಜೊತೆಗೆ ಮುಂಗಾರಿನ ಆಗಮನದಿಂದ ಸತತ ಮಳೆ ಭೂಕುಸಿತಕ್ಕೂ ಕಾರಣವಾಗುತ್ತಿದೆ. ಇದಕ್ಕೆ ಪ್ರಕೃತಿಯನ್ನು ಮಾತ್ರ ಹೊಣೆ ಮಾಡುವುದು ಸಲ್ಲ.
 
ಕೊಡಗಿನಲ್ಲಿ ಭೂ ಪರಿವರ್ತನೆ ಒಂದು ದೊಡ್ಡ ದಂಧೆಯಾಗಿದೆ. ಕೃಷಿ ಭೂಮಿಯಲ್ಲಿ ಬದವಣೆಗಳು ಹಾಗೂ ರೆಸಾರ್ಟ್ ನಿರ್ಮಾಣ ಮಾಡಲು ಎಗ್ಗಿಲ್ಲದಂತೆ ಅನುಮತಿ ಕೊಡಲಾಗುತ್ತಿದೆ. ರಾಜಕೀಯ ಒತ್ತಡದಲ್ಲಿ ಮನಸ್ಸಿಗೆ ಬಂದಂತೆ ಭು ಪರಿವರ್ತನೆ ನಡೆಯುತ್ತಿದೆ.
 
2017 ಮತ್ತು 2018 ರಲ್ಲಿ ಸಂಭವಿಸಿದ ವಿಕೋಪದ ನಂತರ ತಾಂತ್ರಿಕ ಸಮಿತಿಯ ರಚನೆಯಾಯಿತು. ಭೂ ಪರಿವರ್ತನೆಗೆ ಈ ಸಮಿತಿಯ ಶಿಫಾರಸ್ಸು ಅಗತ್ಯ. ಆದರೆ ಜಿಲ್ಲಾಡಳಿತ ತಾಂತ್ರಿಕ ಸಮಿತಿಯನ್ನು ಕಡೆಗಣನೆ ಮಾಡಿದೆ. ಪ್ರಕೃತಿಯ ಮುಂದೆ ನಾವೆಲ್ಲರೂ ಸಣ್ಣವರು. ಪ್ರಕೃತಿಯನ್ನು ಎದುರು ಹಾಕಿಕೊಳ್ಳುವುದರಿಂದ ನಮಗೆ ಉಳಿಗಾಲವಿಲ್ಲ.
 
#WesternGhats #Landslide #Karnataka #Kodagu #Coorg #Madikeri #Virajpet #Kushalnagar #Gonikoppal #Ponnampet
 
 
img
 

Visit to Jagjivan Ram Women's Association, 04/07/2022

ಪೊನ್ನಂಪೇಟೆ ತಾಲೂಕಿನ ಶಿವಕಾಲೋನಿಯ ಜಗಜೀವನ್ ರಾಮ್ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಧರ್ಭ.
 
ನಮ್ಮ ದೇಶದಲ್ಲಿ ಮಹಿಳಾ ಶಕ್ತಿಯ ಪ್ರಾಮುಖ್ಯತೆ ಮತ್ತು ಈ ಮಹಿಳಾ ಶಕ್ತಿಯನ್ನು ಸಂಘಟಿತವಾಗಿ ಮುನ್ನಡೆಸುವ ಅನಿವಾರ್ಯತೆ ಎಲ್ಲಾ ಮಹಿಳೆಯರಲ್ಲೂ ಇದೆ.
 
ಜೊತೆಯಾಗಿ ಸೇರಿ, ಸಮಾಜದಲ್ಲಿರುವ ಲೈಂಗಿಕ ತಾರತಮ್ಯವನ್ನು ಸರಿಪಡಿಸಬೇಕಾದ ಹೋರಾಟ ಮಹಿಳೆಯರಿಂದಲೇ ಸಾಧ್ಯ. ಈ ಹೋರಾಟಗಳು ಮಹಿಳಾ ಸಂಘಟನೆಗಳಿಂದ ಸಾಧ್ಯ. ಇದಕ್ಕೆ ಯಶಸ್ಸು ಸಿಗಲಿ ಮತ್ತು ನನ್ನ ಎಲ್ಲಾ ಬೆಂಬಲ ಸಹಕಾರ ಇದೆ ಎನ್ನುವ ಮಾತನ್ನು ಹೇಳಿದೆ.
 
ಮಹಿಳಾ ಸಂಘಟನೆಗಳು ಮಹಿಳೆಯರಲ್ಲಿ ಕೌಶಲ್ಯ ತರಬೇತಿ, ಸ್ವಾವಲಂಬನೆ, ಉದ್ಯಮಶೀಲತೆ ಬೆಳೆಸುವ ಕೆಲಸ ಇನ್ನು ಹೆಚ್ಚು ಹೆಚ್ಚು ಮಾಡಬೇಕಿದೆ.
 
ಕೊಡಗಿನಲ್ಲಿ ಹಲವಾರು ಸಮುದಾಯಗಳು ಪ್ರಗತಿಯ ಕೆಳ ಹಂತಗಳಲ್ಲಿವೆ. ಮಹಿಳಾ ಸಂಘಟನೆಗಳ ಮೂಲಕ ಇವುಗಳನ್ನು ಮೇಲೆತ್ತುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಜಗಜೀವನ್ ರಾಮ್ ಮಹಿಳಾ ಸಂಘದ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
 
#Kodagu #Coorg #Madikeri #Virajpet #Kushalnagar #Gonikoppal #Ponnampet #WomensAssociation
 
 
img
 

High Court strictures Govt and Anti-Corruption Bureau on handling of corruption cases , 01/07/2022

ಮೊನ್ನೆ ದಿನ ಕರ್ಣಾಟಕ ಉಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಪ್ರಕರಣ ಒಂದನ್ನು ವಿಚಾರಣೆ ನಡೆಸುವ ಸಮಯದಲ್ಲಿ ಕೋರ್ಟ್ ಎ.ಸಿ.ಬಿ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಸಮಯದಲ್ಲಿ ನಾನು ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ನಲ್ಲಿ ಹಾಜರಿದ್ದೆ. ಮಾಧ್ಯಮದವರು ಈ ಬಗ್ಗೆ ವಿಚಾರಿಸಿದಾಗ, ಅಲ್ಲಿ ನಡೆದ ಘಟನೆಯನ್ನು ಅವರಿಗೆ ವಿವರಿಸಿದೆ. ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ಸರ್ಕಾರಿ ಮತ್ತು ಎ.ಸಿ.ಬಿ ವಕೀಲರಿಗೆ ಕೇಳಿದ ಪ್ರಶ್ನೆಗಳು ಕರ್ನಾಟಕದ ಸಾಮಾನ್ಯ ಜನರ ಅಭಿಪ್ರಾಯ ಹಾಗೂ ಪ್ರಶ್ನೆಗಳು ಕೂಡ. ಎ.ಸಿ.ಬಿ ಯ ರಚನೆ ಮತ್ತು ಅದು ಮಾಡಬೇಕಾಗಿರುವ ಕೆಲಸ ಈಗ ಅದು ಮಾಡುತ್ತಿರುವ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಕೋರ್ಟ್ ಹೇಳಿದಂತೆ ಈ ಸಂಸ್ಥೆ ಒಂದು 'ಕಲೆಕ್ಷನ್ ಸೆಂಟರ್' ಆಗಿದೆ. ಸಣ್ಣ ಪುಟ್ಟ ಅಧಿಕಾರಿಗಳನ್ನು ಬಲಿ ಹಾಕಿ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಮಣೆ ಹಾಕುವ ಕೆಲಸ ನಡೆಯುತ್ತಿದೆ. ಎಷ್ಟು ಜನ ಮೇಲಾಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ ಮತ್ತು ಅದರಲ್ಲಿ ಎಷ್ಟು ಪ್ರಕರಣಗಳಲ್ಲಿ 'ಬಿ ರಿಪೋರ್ಟ್' ಮಾಡಲಾಗಿದೆ ಎನ್ನುವ ವಿವರವನ್ನು ಕೋರ್ಟ್ ಕೇಳಿದೆ. ಸರ್ಕಾರ ಹಾಗೂ ಎ.ಸಿ.ಬಿ ಈಗಲಾದರೂ ಎಚ್ಚೆತ್ತುಕೊಂಡು ಸಂಸ್ಥೆಯ ಮೂಲ ಉದ್ದೇಶವಾದ ಭ್ರಷ್ಟಾಚಾರ ನಿರ್ಮೂಲನೆ ಮಾಡುವತ್ತ ಕೆಲಸ ಮಾಡಬೇಕಿದೆ. #Corruption #ACB #AntiCorruptionBureau #Karnataka #Kodagu #Coorg #Madikeri #Virajpet #Kushalnagar #Gonikoppal
 
 

News reports on the All-India Football tournament in Gonikoppal, 27/06/2022

ಗೋಣಿಕೊಪ್ಪಲುವಿನಲ್ಲಿ ಕೆಲದಿನಗಳ ಹಿಂದೆ ನಾನು ಉದ್ಘಾಟಿಸಿದ ಆಲ್ ಇಂಡಿಯಾ 7s ಫುಟ್ಬಾಲ್ ಪಂದ್ಯಾವಳಿಯ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ವರದಿಯಾಗಿದೆ.
 
ಯುವಜನತೆ ಕೆಟ್ಟ ಅಭ್ಯಾಸಗಳಿಂದ ದೂರವಿರಲು ಮತ್ತು ಕೆಟ್ಟ ವ್ಯಾಸನಗಳಿಂದ ಮುಕ್ತಿ ಪಡೆಯಲು ಕ್ರೀಡಾಕೂಟಗಳ ಮಹತ್ವದ ಬಗ್ಗೆ ನಾನು ಹೇಳಿದ ಮಾತುಗಳು ಮಾಧ್ಯಮದ ಮಿತ್ರರು ವರದಿ ಮಾಡಿದ್ದಾರೆ. ಯುವಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಮತ್ತು ಎಲ್ಲಾ ಜನಾಂಗದ ಜನರನ್ನು ಒಟ್ಟುಗೂಡಿಸುವ ಶಕ್ತಿ ಕ್ರೀಡೆಗೆ ಮಾತ್ರ ಇದೆ ಎನ್ನುವ ಮಾತನ್ನು ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ.
 
ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವ ಕೆಂದ್ರ, ಕ್ರೀಡಾ ಸಚಿವಾಲಯ ಹಾಗೂ ಆಲ್ ಸ್ಟಾರ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಈ ಪಂದ್ಯಾವಳಿಗಳು ಯಶಸ್ವಿಯಾಗಿ ಆಯೋಜನೆಯಾಗಿದಕ್ಕೆ ಮತ್ತೊಮ್ಮೆ ನನ್ನ ಅಭಿನಂದನೆಗಳು.
 
#Kodagu #Coorg #Madikeri #Virajpet #Kushalnagar #Gonikoppal
 
 
img