Meeting with MLC Dr. D Thimmaiah, 13/07/2022
ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ ತಿಮ್ಮಯ್ಯನವರನ್ನು ಭೇಟಿ ಮಾಡಿದ ಸಂಧರ್ಭ.
ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಲು ಮಂಗಳವಾರ ನನ್ನ ಕಚೇರಿಗೆ ಬಂದಿದ್ದ ಮಾನ್ಯ ತಿಮ್ಮಯ್ಯ ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಕೂಡ ನಡೆಸುವ ಅವಕಾಶ ಒದಗಿಬಂತು.
ಸಹೃದಯಿ ಮತ್ತು ಜನಪರ ನಿಲುವುಳ್ಳ ರಾಜಕಾರಣಿಯಾದ ತಿಮ್ಮಯ್ಯ ಅವರಿಗೆ ನನ್ನ ಧನ್ಯವಾದಗಳು.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje

Visit to earthquake-affected regions, 11/07/2022
ಭೂಕಂಪದಿಂದ ಸಂಕಷ್ಟ ಎದುರಿಸುತ್ತಿರುವ ಚಂಬು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಬೇಕಾದ ತುರ್ತು ಪರಿಹಾರದ ಬಗ್ಗೆ ಪರಿಶೀಲನೆ ನಡೆಸಿದೆ.
ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಜನರ ಬದುಕು ಕಷ್ಟವಾಗಿದೆ. ಅದಲ್ಲದೆ ಭೂಕಂಪನದಿಂದ ಮನೆ ಕುಸಿದು ಅಮ್ಮಕ್ಕ ಎಂಬುವರ ನಿವಾಸ ಸಂಪೂರ್ಣ ಹಾನಿಗೀಡಾಗಿದ್ದು, ಅವರಿಗೆ ನೆರವು ಒದಗಿಸಲಾಗಿದೆ. ಸಂಬಂಧಪಟ್ಟ ಅಧಿಕಾರ ವರ್ಗ ಹಾಗೂ ಸರ್ಕಾರದ ಮಟ್ಟದಲ್ಲಿ ಈ ವಿಷಯ ಪ್ರಸ್ತಾಪಿಸಿ ಮತ್ತಷ್ಟು ಪರಿಹಾರ ಕೊಡಿಸುವ ಭರವಸೆ ನೀಡಿದ್ದೇನೆ.
ಈ ಸಂದರ್ಭದಲ್ಲಿ ಪೆರಾಜೆಗೆ ತೆರಳುವ ದಾರಿ ಮಧ್ಯ ಚಂಬು ಗ್ರಾಮದ ಬಾಲಂಬಿಯಲ್ಲಿ ಪಕ್ಷದ ಕಾರ್ಯಕರ್ತರು ನನ್ನನ್ನು ಭೇಟಿ ಮಾಡಿ ಗ್ರಾಮಸ್ಥರ ಹಕ್ಕು ಪತ್ರ ವಿಷಯದಲ್ಲಿ ಇದ್ದ ತಮ್ಮ ದುಗುಡವನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರದ ಮಟ್ಟದಲ್ಲಿ ಈ ಕುರಿತು ಚರ್ಚಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದೇನೆ.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje

Wishing a peaceful, prosperous and happy #EidAlAdha, 10/07/2022
ಈದ್ ಉಲ್ ಅದಾ ಪವಿತ್ರ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ, ಬಲಿದಾನ ಮತ್ತು ದೇವರ ಮೇಲಿನ ನಿಷ್ಠೆಯ ಸಂಕೇತವಾದ ಈ ಹಬ್ಬ ಎಲ್ಲರ ಬಾಳಲ್ಲಿ ನೆಮ್ಮದಿ ಮತ್ತು ಶಾಂತಿ ತರಲಿ. #Bakrid2022

Visit to rain-affected places, 09/07/2022
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಾನಿಗೆ ಒಳಗಾಗಿರುವ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಜನರ ಸಮಸ್ಯೆ ಆಲಿಸಿದೆ.
ಚೆಂಬು ಗ್ರಾಮ, ಕಾಟಕೇರಿ, ಮದೆನಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರಿಂದ ಮಾಹಿತಿ ಪಡೆದೆ. ಮೂಲಭೂತ ಸೌಕರ್ಯ ಕಲ್ಪಿಸುವುದರಿಂದ ಇಂತಹ ಸಮಯದಲ್ಲಿ ಜನರ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುವುದು ಸುಲಭವಾಗಲಿದೆ.
ಇಲ್ಲಿನ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಡೆ ಗಮನ ಹರಿಸಲು ಜಿಲ್ಲಾ ಆಡಳಿತ ಹಾಗೂ ಸಂಬಂಧಪಟ್ಟವರು ಜೊತೆ ನೇರವಾಗಿ ಮಾತನಾದಲಿದ್ದೇನೆ.
ಈ ಗ್ರಾಮಗಳ ಭೇಟಿಯ ವೇಳೆ ಪಕ್ಷದ ಸ್ಥಳೀಯ ಮುಖಂಡರಾದ ಶ್ರೀಧರ್ ನಾಯಕ್, ಇಸ್ಮಾಯಿಲ್, ಕೊಲ್ಯದ ಗಿರೀಶ್, ಅಗಸ್ಟಿನ್ ಜಯರಾಜ್, ಬಂಗೇರಾ ತಾಳತ್ತಮನೆ, ಮೊಯಿದು ಕುಞಿ, ಕೊಯಿನಾಡು, ಸೂರಜ್ ಹೊಸೂರು, ಚಂದ್ರಶೇಖರ್, ಬಶೀರ್ ಚೇರಂಬಾಣೆ ಜೊತೆಗಿದ್ದರು.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje

Trees saving lives, 08/07/2022
(Forwarded creative)
