Hearty congratulations to all sportspersons making India proud at the #CWG2022, 08/08/2022

ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಪಾರಂಪರಿಕವಾಗಿ ಪ್ರಭಲವಿದ್ದ ಕ್ರೀಡೆಗಳ ಜೊತೆಗೆ ನಮ್ಮ ಕ್ರೀಡಾಪಟುಗಳು ಬೇರೆ ಸ್ಪರ್ಧೆಗಳಲ್ಲೂ ಪದಕಗಳನ್ನು ಗೆಲ್ಲುತ್ತಿರುವುದು ಎಲ್ಲಾ ಭಾರತೀಯರಿಗೂ ಸಂತಸ ತಂದಿದೆ.
 
ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಳಿಗೆ ಇದೆ ಎನ್ನುವ ಮಾತನ್ನು, ದೇಶದ ನಾನಾ ಕಡೆಗಳಿಂದ ಸೇರಿದ ಕ್ರೀಡಾಪಟುಗಳು ದೇಶದ ಕೀರ್ತಿ ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಎತ್ತಿ ಹಿಡಿಯುತ್ತಿರುವುದು, ರುಜು ಮಾಡಿದೆ.
 
ಗೆದ್ದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಕೆಗಳು
 
#India4CWG2022 #Sports #CWG2022India
 
 
img
 

Illegal and forcible eviction of poor people should stop immediately, 02/08/2022

ವಿರಾಜಪೇಟೆ ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಮೆಕಾಡು ಪೈಸಾರಿ ತೆರವು ಕಾರ್ಯಾಚರಣೆಯನ್ನು ತಾಲೂಕು ಆಡಳಿತ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದೇನೆ. ಸರ್ಕಾರ ಜನವಿರೋಧಿ ಧೋರಣೆಯನ್ನು ಕೈಬಿಟ್ಟು ಜನರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಬಾರದು.
 
ಸ್ಥಳೀಯ ನಿವಾಸಿಗಳ ಕೋರಿಕೆಯ ಮೇರೆಗೆ ತೆರಮೆಕಾಡು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದ್ದೇನೆ. ಒಂದು ವೇಳೆ ತಾಲೂಕು ಆಡಳಿತ ಒತ್ತಡಕ್ಕೆ ಮಣಿದು ಮತ್ತೆ ಕಾರ್ಯಾಚರಣೆ ಮುಂದುವರಿಸಿದರೆ ಕಾನೂನು ಹೋರಾಟ ಅನಿವಾರ್ಯವಾದಿತು ಎಂದು ಎಚ್ಚರಿಸಿದ್ದೇನೆ.
 
ಸ್ಥಳಕ್ಕೆ ಸಂಬಂಧಿಸಿದ ಬಹಳಷ್ಟು ದಾಖಲೆಗಳನ್ನು ಪರಿಶೀಲಿಸಿದಾಗ ಈ ಕಾರ್ಯಾಚರಣೆ ಕಾನೂನಾತ್ಮಕವಾಗಿಲ್ಲ ಎಂಬುದು ತಿಳಿದು ಬರುತ್ತದೆ. ತೆರವು ಮಾಡುವ ಕುರಿತು ಯಾವುದೇ ಸ್ಪಷ್ಟ ಆದೇಶವಿಲ್ಲ. ಯಾವುದೇ ಕಾನೂನು ಕ್ರಮಗಳನ್ನು ಪಾಲಿಸದೆ ಏಕಾಏಕಿ ತೆರವುಗೊಳಿಸುವ ಕಾರ್ಯಾಚರಣೆಯ ಹಿಂದಿರುವ ಉದ್ದೇಶ ನಿಗೂಢವಾಗಿದೆ. ಇದೀಗ ಈ ಪ್ರದೇಶದಲ್ಲಿ ನೂರಾರು ಸಂಖ್ಯೆಯ ಬಡಜನರು ಮನೆ ನಿರ್ಮಿಸಿ ವಾಸಿಸುತ್ತಿದ್ದು, ಇವರಿಗೆ ಕಾನೂನು ಹೋರಾಟದ ಮೂಲಕ ರಕ್ಷಣೆ ನೀಡಲು ಬದ್ಧನಾಗಿದ್ದೇನೆ.
 
ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ನಗರ ಅಧ್ಯಕ್ಷರಾದ ಎಂ.ಪಿ. ತಿಮ್ಮಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ, ಜಿ. ಪಂ. ಮಾಜಿ ಸದಸ್ಯ ಬಿ.ಎನ್‌ ಪ್ರಥ್ಯು, ವಕೀಲರಾದ ಬೊಪಣ್ಣ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಶಿವಣ್ಣ, ನಾಗೇಶ್, ಗಾಯತ್ರಿ, ಸ್ಥಳೀಯ ಮುಖಂಡರಾದ ಗಿರಿ, ಅನಿಲ್ ಮೊದಲಾದವರು ಜೊತೆಗಿದ್ದರು.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet
 
 
img
 

Channel Coorg interviews A S Ponnanna, 01/08/2022

ಚಾನೆಲ್ ಕೂರ್ಗ್ ಸುದ್ದಿವಾಹಿನಿಯ ನೇರಾ-ನೇರ ಸಂದರ್ಶನದಲ್ಲಿ ಪಾಲ್ಗೊಂಡು ಕೊಡಗಿಗೆ ಸಂಬಂಧಪಟ್ಟ, ರಾಜಕೀಯ, ಆರ್ಥಿಕ, ಅಭಿವೃದ್ಧಿ, ಸಾಮಾಜಿಕ ಮುಂತಾದ ಹಲವಾರು ವಿಚಾರಗಳ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಂಡೆ.
 
ಎಲ್ಲಾ ಪ್ರಶ್ನೆಗಳಿಗೆ ನನ್ನ ಸ್ಪಷ್ಟ ಉತ್ತರಗಳನ್ನು ಕೊಟ್ಟಿದ್ದೇನೆ. ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಚಾನೆಲ್ ಕೂರ್ಗ್ ಅವರಿಗೆ ಧನ್ಯವಾದಗಳು.
 
ಪೂರ್ಣ ಸಂದರ್ಶನವನ್ನು ನೋಡಲು ಈ ಕೆಳಗಿನ ಲಿಂಕ್ ಉಪಯೋಗಿಸಿ ☛ https://www.youtube.com/watch?v=tHgD1F1D_fk
 
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje #ChannelCoorg #NeraNera
 
 
 

Civic reception at Chennangoli, 25/07/2022

ಗೋಣಿಕೊಪ್ಪಲು ಸಮೀಪದ ಚೆನ್ನoಗೋಲ್ಲಿ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಉಚ್ಚನ್ಯಾಯಾಲಯದಲ್ಲಿ ವಾದ ಮಂಡಿಸಿ ಯಶಸ್ವಿಯಾದ ಕಾರಣ ಗ್ರಾಮದ ನಿವಾಸಿಗಳು ಭಾನುವಾರ ನಾಗರಿಕ ಸನ್ಮಾನವನ್ನು ಹಮ್ಮಿಕೊಂಡಿದರು. ಇದನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದೇನೆ.
 
ಕನಿಷ್ಠ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದ್ದ ಚನ್ನoಗೊಲ್ಲಿ ಗ್ರಾಮಸ್ಥರು ಕಳೆದ ಹಲವು ದಶಕಗಳಿಂದ ಎದುರಿಸುತ್ತಿದ್ದ ನಿತ್ಯ ಯಾತನೆಯನ್ನು ಖುದ್ದಾಗಿ ನೋಡಿದ ಬಳಿಕ ಇದಕ್ಕೆ ಇತಿಶ್ರೀ ಹಾಡಲು ನ್ಯಾಯಾಂಗ ಹೋರಾಟ ಅನಿವಾರ್ಯವಾಗಿತ್ತು.
 
ನಿಮ್ಮ ಕಾನೂನು ಹೋರಾಟದಲ್ಲಿ ನಾನು ಭಾಗಿಯಾಗಿದ್ದು ಕೊಡಗಿನವನಾಗಿ ನನ್ನ ಕರ್ತವ್ಯ, ಮಾನವನಾಗಿ ನನ್ನ ಧರ್ಮ. ನೆನ್ನೆ ನೀವು ತೋರಿಸಿದ ಪ್ರೀತಿ ಎಲ್ಲಾ ಸನ್ಮಾನಗಳಿಗಿಂತಲು ದೊಡ್ಡದು.
 
ಚೆನ್ನoಗೋಲ್ಲಿಯ ಎಲ್ಲಾ ನಿವಾಸಿಗಳಿಗೂ, ಹಿರಿಯರಿಗೂ, ಮುಖಂಡರಿಗೂ, ನನ್ನ ಮೇಲೆ ಅಪಾರ ವಿಶ್ವಾಸ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ ಎಲ್ಲರಿಗೂ ನಾನು ಮತ್ತೊಮ್ಮೆ ವಂದಿಸುತ್ತೇನೆ. ನಿಮ್ಮ ಹಕ್ಕಿಗಾಗಿ ನಡೆಯುವ ಎಲ್ಲಾ ಹೋರಾಟಗಳಲ್ಲೂ ನಾನು ನಿಮ್ಮ ಜೊತೆಗಿರುತ್ತೇನೆಂದು ಹೇಳಲು ಇಚ್ಚಿಸುತ್ತೇನೆ.
 
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje #Chennangoli
 
 
img
 

Kodagu loves sports, in rain or shine or mud, 24/07/2022

ಕಗ್ಗೋಡ್ಲುವಿನಲ್ಲಿ ಜಿಲ್ಲಾ ಆಡಳಿತ, ಕೊಡಗು ಜಿಲ್ಲಾ ಯುವ ಒಕ್ಕೂಟ, ಕೊಡಗಿನ ಯುವಕರ ಸಂಘ ಸೇರಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ.
 
ಕಳೆದ ಮೂವತ್ತು ವರ್ಷಗಳಿಂದಲೂ ಈ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿರುವುದು ಆಯೋಜಕರ ಕ್ರೀಡಾಪ್ರೇಮ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಈ ರೀತಿಯ ಬದ್ಧತೆಯೇ ಕೊಡಗಿನಿಂದ ಸಾಕಷ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಹೊರಹೊಮ್ಮಲು ಸಾಧ್ಯವಾಗಿರುವುದು.
 
ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ, ಕ್ರೀಡಾಪಟುಗಳಿಗೆ ಶುಭ ಕೋರುತ್ತಾ ಮುಂದಿನ ವರ್ಷಗಳಲ್ಲಿ ಇನ್ನು ಹೆಚ್ಚಿನ ಮಹತ್ವ ಈ ಕ್ರೀಡಾಕೂಟಕ್ಕೆ ಬರಲಿ ಎಂದು ಹಾರೈಸಿದೆ. ಮುಂದಿನ ದಿನಗಳಲ್ಲೂ ಕ್ರೀಡಾಕೂಟಕ್ಕೆ ಬೆಂಬಲವಾಗಿ ನಿಲ್ಲುವ ಭರವಸೆ ಕೊಟ್ಟಿದ್ದೇನೆ. ನಮ್ಮ ಪಕ್ಷದ ಯುವ ಮುಖಂಡರಾದ ಮಂಥರ್ ಗೌಡ ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
 
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje #Sports
 
 
img