Congratulations to Manish and Pramod Bhagat for bringing two more gold medals to India, 04/09/2021
ಭಾರತಕ್ಕೆ ಮತ್ತೆರಡು ಚಿನ್ನದ ಪದಕ ತಂದ ಮನೀಶ್ ಹಾಗೂ ಪ್ರಮೋದ್ ಭಗತ್ ಅವರಿಗೆ ಅಭಿನಂದನೆಗಳು. Congratulations to #ManishNarwal and #PramodBhagat for two more #Gold medals for India and bringing us such joy and pride. #Parabadminton #Paralympics #Shooting


In the A. K. Subbaiah-Ponnamma Educational and Datti Trus, 02/09/2021
ಕಳೆದ ಶುಕ್ರವಾರ ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್'ನ ವತಿಯಿಂದ, 45 ವಿದ್ಯಾರ್ಥಿಯನಿಯರಿಗೆ ವಿದ್ಯಾರ್ಥಿ ವೇತನ ನೀಡಿದ ಕಾರ್ಯಕ್ರಮದ ವರದಿ ಪತ್ರಿಕೆಗಳಲ್ಲಿ. ????????


Permanent creative projects required to solve the problem of increased incidents of loss due to wild elephants in Kodagu, 30/08/2021
ಮನುಷ್ಯರು ಮತ್ತು ಕಾಡುಪ್ರಾಣಿಗಳ ನಡುವೆ ಸಂಘರ್ಷಕ್ಕೆ ಯಾವುದೇ ತಾತ್ಕಾಲಿಕ ಕ್ರಮಗಳಿಂದ ಪ್ರಯೋಜನವಿಲ್ಲ. ಅದಕ್ಕೆ ಶಾಶ್ವತ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಕೊಡಗಿನಲ್ಲಿ ಕಾಡಾನೆಗಳಿಂದ ಆಗುತ್ತಿರುವ ನಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಕ್ರಿಯಾಶೀಲ ಯೋಜನೆಗಳಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ರೈತರಿಗೆ ಪರಿಹಾರ ಕೊಡಲು ಕೂಡ ಸತಾಯಿಸುತ್ತಿರುವ ಸರ್ಕಾರ ಸಮಸ್ಯೆ ವಿಕೋಪಕ್ಕೆ ಹೋಗುತ್ತಿದ್ದರು ಕಣ್ಣು ಮುಚ್ಚಿ ಕೂತಿದೆ.



My heartfelt thanks to the media friends for encouraging the scholarship program by publishing in channels and newspapers, 29/08/2021
A student scholarship program, 29/08/2021
ಆಗಸ್ಟ್ 27, ಶುಕ್ರವಾರದಂದು ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್'ನ ವತಿಯಿಂದ, ವಿದ್ಯಾರ್ಥಿಯನಿಯರಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು "ಶಕ್ತಿ" ದಿನಪತ್ರಿಕೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ವಿದ್ಯಾರ್ಥಿ ವೇತನಕ್ಕೆ ಒಟ್ಟು 100 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ 45 ಅರ್ಹ ಫಲಾನುಭವಿ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಲ್ಲಿ ಪ್ರತಿಯೊಬ್ಬರಿಗೂ ವರ್ಷಕ್ಕೆ ರೂ.10,000 ನಂತೆ ವಿದ್ಯಾರ್ಥಿ ವೇತನ ನೀಡಲಾಯಿತು. ಪಿ.ಯು.ಸಿ ಮುಗಿಸಿ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್'ಶಿಪ್ ನೀಡಲಾಗುತ್ತಿದೆ. ಮುಂದಿನ ಎರಡು ವರ್ಷಗಳು ಕೂಡ ಈ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ರೂ.10,000 ವಿದ್ಯಾರ್ಥಿ ವೇತನ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮುಖ್ಯ ಅತಿಥಿಗಳಿಗೆ, ಹಿರಿಯರಿಗೆ, ಕುಟುಂಬದವರಿಗೆ, ಸ್ನೇಹಿತರಿಗೆ, ನಮ್ಮ ಮೇಲೆ ಅಪಾರ ಪ್ರೀತಿ ವಿಶ್ವಾಸ ತೋರಿಸಿದ ಎಲ್ಲರಿಗೂ ನನ್ನ ವಂದನೆಗಳು ಮತ್ತು ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ-ವಿಶ್ವಾಸ ನಮ್ಮ ಮೇಲಿರಲಿ ಎಂದು ಆಶಿಸುತ್ತೇನೆ. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನೆರವಾದ ಎಲ್ಲ ಸ್ನೇಹಿತರಿಗೂ ನಾನು ಆಭಾರಿಯಾಗಿದ್ದೇನೆ. ಎಲ್ಲ ಮಾಧ್ಯಮ ಮಿತ್ರರಿಗೂ ನನ್ನ ಧನ್ಯವಾದಗಳು.











