Membership drive at Ponnampet and Napoklu, 28/02/2022
ಕೊಡಗಿನ ಪೊನ್ನಂಪೇಟೆ ಮತ್ತು ನಾಪೋಕ್ಲುಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿ ಪಕ್ಷದ ಸಿದ್ಧಾಂತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸುವ ಬಗ್ಗೆ ಮತ್ತು ಪಕ್ಷದಲ್ಲಿ ಇರುವವರ ಹೊಣೆಗಾರಿಕೆಗಳ ಬಗ್ಗೆ ಮಾತನಾಡಿದೆ. ಪಕ್ಷದ ಬಗ್ಗೆ ನಿಷ್ಠೆ, ಸೈದ್ಧಾಂತಿಕ ಬದ್ಧತೆಯ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟದ ಅವಶ್ಯಕತೆ ಬಗ್ಗೆ ವಿವರಿಸಿದೆ.






Final darshan of Altaf Ahmed, a soldier of Virajapete of Kodagu who recently died in Kashmir, 27/02/2022
ಇತ್ತೀಚಿಗೆ ಕಾಶ್ಮೀರದಲ್ಲಿ ವೀರಮರಣವನ್ನು ಹೊಂದಿದ ಕೊಡಗಿನ ವಿರಾಜಪೇಟೆಯ ಯೋಧ ಅಲ್ತಾಫ್ ಅಹಮದ್ ರವರ ಅಂತಿಮ ದರ್ಶನವನ್ನು ಶನಿವಾರ ಪಡೆದು, ವೀರಯೋಧನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದೆ. ಅವರ ಮನೆಯವರಿಗೆ ಸಾಂತ್ವನ ಹೇಳಿ ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅವರ ಆತ್ಮಕ್ಕೆ ಶಾಂತಿ ಕೋರಿದೆ. ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ವಿರಾಜಪೇಟೆಗೆ ರಸ್ತೆಯ ಮೂಲಕ ಆಗಮಿಸಿದ ಯೋಧನ ಪ್ರಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಾವಿರಾರು ಜನರು ಪಡೆದಿದ್ದು ಕೊಡಗಿನ ವೀರಪರಂಪರೆಗೆ ಸಾಕ್ಷಿಯಾಗಿತ್ತು. ????????






Massive protest against the humiliation done to Baba Saheb Ambedkar, 23/02/2022
ಬಾಬಾ ಸಾಹೇಬ್ ಅಂಬೇಡ್ಕರ್'ಗೆ ಮಾಡಿದ ಅಪಮಾನದ ವಿರುದ್ಧ ಈ ಬೃಹತ್ ಪ್ರತಿಭಟನೆ ಮಾಧ್ಯಮದ ಕಣ್ಣಿಗೆ ಬೀಳಲಿಲ್ಲವೇ? ಬಾಬಾ ಸಾಹೇಬರ ಕಡೆಗಣನೆ ಯಾರೂ ಕೂಡ ಸಹಿಸಬಾರದು.






Constitution Awareness Programme, 19/02/2022
ಪದ್ಮನಾಭನಗರ ಕ್ಷೇತ್ರದ ಮುಖಂಡರಾದ ರಂಗನಾಥ್ ನಾಯ್ಡು ಅವರು ಪಕ್ಷದ ಹೊಸ ಕಚೇರಿಯಲ್ಲಿ ಸಂವಿಧಾನ ಅರಿವು ಅಭಿಯಾನ ಕಾರ್ಯಕ್ರಮವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ವತಿಯಿಂದ ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಕಾನೂನು ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್'ನ ಅಧ್ಯಕ್ಷರು ಭಾಗವಹಿಸಿದ್ದರು. ಭಾರತೀಯ ಸಂವಿಧಾನಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಮತ್ತು ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಸಂವಿಧಾನ ಬದಲಾವಣೆ ಮತ್ತು ಸಂವಿಧಾನ ತಿದ್ದುಪಡಿ ಬಗ್ಗೆ ಒಂದು ಕುತಂತ್ರ ನಡೆಯುತ್ತಿರುವ ಬಗ್ಗೆ ಚರ್ಚಿಸಲಾಯಿತು. ಸಂವಿಧಾನದ ರಕ್ಷಣೆ ಮತ್ತು ಅದರ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದೇಶಕ್ಕೆ ಒಂದೇ ಧರ್ಮ ಗ್ರಂಥ ಎನ್ನುವುದು ನಮ್ಮ ಸಂವಿಧಾನವೇ.



Karaumbiah Academy for Learning and Sports Graduation Day program, 18/02/2022
ಗೋಣಿಕೊಪ್ಪಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ, ಕರುಂಬಯ್ಯ ಅಕಾಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋರ್ಟ್ಸ್'ನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಗ್ರ್ಯಾಜುಯೇಷನ್ ಡೇ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ನನ್ನ ಜೊತೆ ನನ್ನ ಧರ್ಮಪತ್ನಿ ಹಾಗೂ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕಂಚನ್ ಪೊನ್ನಣ್ಣ ಅವರೂ ಕೂಡ ಭಾಗವಹಿಸಿದ್ದರು. ದತ್ತ ಕರುಂಬಯ್ಯ ಮತ್ತು ಅಶ್ವಿನಿ ನಾಚಪ್ಪ ದಂಪತಿಗಳು ಕೊಡಗಿನಲ್ಲಿ ಸ್ಥಾಪಿಸಿರುವ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವ್ಯವಸ್ಥೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಹಾಗೂ ಕ್ರೀಡಾ ತರಬೇತಿ ಒದಗಿಸುತ್ತಿದೆ. ಅವರಿಗೆ ಈ ಉನ್ನತ ಮಟ್ಟದ ಸಂಸ್ಥೆ ಸ್ಥಾಪಿಸಿ ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸಿದೆ. ಅತ್ಯಂತ ಶಿಸ್ತಿನಿಂದ ಸಮಾರಂಭದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೂ, ಸಂಸ್ಥೆಯ ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ ಅವರಿಗು, ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರಿಗೂ ನನ್ನ ಅಭಿನಂದನೆಗಳು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಕೂಡ ಹಾರೈಸುತ್ತೇನೆ.





