All-party meet on Karnataka's river water disputes, 18/03/2022

ಕರ್ನಾಟಕ ಎದುರಿಸುತ್ತಿರುವ ಹಲವಾರು ಅಂತರರಾಜ್ಯ ನದಿ ವಿವಾದಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುವ ಮುನ್ನ, ಸಿ.ಎಲ್.ಪಿ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಾಜಿ ಜಲಸಂಪನ್ಮೂಲ ಸಚಿವರದಾ ಶ್ರೀ ಎಂ.ಬಿ.ಪಾಟೀಲ್ ಅವರು, ಶ್ರೀ ಎಚ್.ಕೆ.ಪಾಟೀಲ್ ಅವರು, ಕೆ.ಪಿ.ಸಿ.ಸಿಯ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರು, ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿ ಪ್ರಸಾದ್ ಅವರು, ಹಾಗೂ ಪಕ್ಷದ ಮುಖ್ಯ ಸಚೇತಕರಾದ ಅಜಯ್ ಸಿಂಗ್ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆ ಜರುಗಿತು.
 
ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಈ ವಿಷಯದ ಬಗ್ಗೆ ಯಾವ ನಿಲುವನ್ನು ತಳಿಯಬೇಕು ಎಂಬುದರ ಬಗ್ಗೆ ದೀರ್ಘವಾದ ಸಮಾಲೋಚನೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಕಚೇರಿಯಲ್ಲಿ ನಡೆಯಿತು. ಕಾವೇರಿ ನದಿ, ಮಹದಾಯಿ, ಕೃಷ್ಣ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ಯಾವ ರೀತಿ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವನ್ನು ತಿಳಿಸಲು ಚರ್ಚೆ ಮಾಡಲಾಯಿತು.
 
ಈ ಚರ್ಚೆಯ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಹಿರಿಯ ಮುಖಂಡರಿಂದ ಕಲಿಯುವ ಅವಕಾಶ ಒದಗಿಬಂತು. ಈ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯನವರಿಗೂ, ಇತರ ಮುಖಂಡರಿಗೂ ನನ್ನ ಧನ್ಯವಾದಗಳು.

#Kaveri #Cauvery #Krishna #Mahadayi #Mekedatu #Kodagu #Ponnampet #Madikeri #Virajpet
 
 
img
img
img
 

Interview with Kodava Kootaliyaada Koota, 12/03/2022

ಕೊಡವ ಕೂಟಾಳಿಯಡ ಕೂಟದವರ ಯೂಟ್ಯೂಬ್ ಚಾನೆಲ್'ನಲ್ಲಿ ನನ್ನದೊಂದು ಸಂದರ್ಶನ ಇತ್ತೀಚೆಗೆ ಪ್ರಸಾರವಾಗಿದೆ. ಇದರಲ್ಲಿ ಹಲವಾರು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ಸಂದರ್ಶಕರು, ತಾಂತ್ರಿಕ ವರ್ಗದವರು ಮತ್ತು ಕೊಡವ ಕೂಟಾಳಿಯಡ ಕೂಟದವರಿಗೂ ನನ್ನ ಧನ್ಯವಾದಗಳು.

#Kodagu #Coorg #Madikeri #Virajpet #Ponnampet #KodavaKootaliyaadaKoota

 
 

Poverty and disparity are the biggest threats to the progress of this great nation, 10/03/2022

Poverty and disparity are the biggest threats to the progress of this great nation. There will be real progress when tribal children get their rightful share in the development of the country and when they become an active part of the mainstream.
 
ಬುಡಕಟ್ಟು ಜನಾಂಗದ ಮಕ್ಕಳು ಈ ದೇಶದ ಅಭಿವೃದ್ಧಿಯ ಪಾಲುದಾರರಾಗಬೇಕು. ಎಲ್ಲಾ ವರ್ಗದ ಜನ ಮುಖ್ಯವಾಹಿನಿಗೆ ಬಂದಾಗ ಮಾತ್ರ ನಮ್ಮ ಸಂವಿಧಾನದ ಆಶಯಗಳು ಈಡೇರುವುದಕ್ಕೆ ಸಾಧ್ಯ. ಬಡತನ ಮತ್ತು ಅಸಮಾನತೆ ನಮ್ಮ ದೇಶದ ಅಭಿವೃದ್ಧಿಗೆ ಅತಿ ದೊಡ್ಡ ಶತ್ರುಗಳು.
 
ಕಾಡು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬಡತನದಿಂದ ನರಳುತ್ತಿರುವ ಹಲವಾರು ಕುಟುಂಬಗಳಲ್ಲಿ ಈ ಮಕ್ಕಳೂ ಕೂಡ ಸೇರಿದ್ದಾರೆ. ನಾವು ಮಾಡುವ ಪ್ರತಿ ಕೆಲಸವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉಪಯೋಗಕ್ಕೆ ಬರಬೇಕು ಎಂಬ ನಿರ್ದಾರ ನಮ್ಮದಾಗಲಿ.
 
#TribalRights #Constitution #Equity #Equality #Poverty #Kodagu #Coorg #Virajpet #Madikeri #Gonikoppa #Napokul
 
 
img
 

Membership drive at K.Chembu, 09/03/2022

ಕೆ. ಚೆಂಬು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಬೂತ್ ಮಟ್ಟದ ಸದಸ್ಯತ್ವ ನೊಂದಣಿ ಕೈಗೊಳ್ಳಲು ದಾಖಲಾತಿಗಾರರನ್ನು ನೇಮಿಸಿ ಅವರಿಗೆ ಹೊಸ ಸದಸ್ಯರನ್ನು ಯಾವ ರೀತಿಯಲ್ಲಿ ನೋಂದಣಿ ಮಾಡಬೇಕು, ಅದರಲ್ಲಿ ಎದುರಾಗುವ ಅಡಕು-ತೊಡಕುಗಳನ್ನು ಗುರುತಿಸಿ ಹೇಗೆ ನಿವಾರಿಸಬೇಕೆನ್ನುವ ತರಬೇತಿಯನ್ನು ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಬೂತ್ ಮಟ್ಟದಲ್ಲೇ ಪಕ್ಷಕ್ಕೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಈ ಅಭಿಯಾನ ಆದಷ್ಟು ಬೇಗ ಕಾರ್ಯರೂಪಕ್ಕೆ ಬಂದು ದಾಖಲಾತಿಗಾರರ ನೇಮಕದಿಂದ ಶುರುವಾಗಿ ಹೊಸ ಸದಸ್ಯರ ನೊಂದಣಿ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸೋಣ ಎಂದು ಮನವಿ ಮಾಡುತ್ತೇನೆ.

ಇದರಿಂದ ಪಕ್ಷದ ಸಂಘಟನೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸದೃಢವಾಗಲಿದೆ. ಇದಕ್ಕೆ ಎಲ್ಲಾ ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ಕೈಜೋಡಿಸಬೇಕು.

#Kodagu #Virajpet #Madikeri #Chembu #KChembu

 
 

Sports meet of Kudiya community in Kakkabe , 08/03/2022

ಕಕ್ಕಬ್ಬೆ ಗ್ರಾಮದಲ್ಲಿ ಕುಡಿಯ ಸಮಾಜದ ವತಿಯಿಂದ ಆಯೋಜಿಸಿದ್ದ ಹಾಕಿ, ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿಗಳ ಫೈನಲ್ಸ್ ಪಂದ್ಯಗಳನ್ನು ಉದ್ಘಾಟಿಸುವ ಸುದೈವ ನನಗೆ ಒದಗಿಬಂತು.
 
ಸೂಕ್ಷ್ಮ ಅಲ್ಪಸಂಖ್ಯಾತ ಸಂಖ್ಯೆಯಲ್ಲಿರುವ ಈ ಸಮಾಜ ಕೊಡುವ ಭಾಷೆ ಮತ್ತು ಸಂಸ್ಕೃತಿಯನ್ನು ಪಾಲನೆ ಮಾಡುತ್ತಾ ಅದರ ಅಂಗವಾಗಿ ಇರುವಂತಹ ಒಂದು ಸಮಾಜ. ಅವರ ಏಳಿಗೆಗಾಗಿ ಅಭಿರುದ್ಧಿಗಾಗಿ ಸದಾ ಅವರೊಂದಿಗೆ ಕೈಜೋಡಿಸಿ ಅವರೊಳಗೆ ಒಬ್ಬನಾಗಿ ಕ್ಷಮಿಸಲು ಸದಾ ಸಿದ್ಧ ಎಂಬ ಭರವಸೆ ಮತ್ತು ಆಶ್ವಾಸನೆಯನ್ನು ಈ ಸಂದರ್ಭದಲ್ಲಿ ಅವರಿಗೆ ನೀಡಿದ್ದೇನೆ.
ಸಮಾಜಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ನನ್ನ ಮುಂದೆ ಇಟ್ಟಿದ್ದರು. ಕಾನೂನಾತ್ಮಕವಾಗಿ ಎಲ್ಲೆಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವೋ ಅಲ್ಲಿ ನಾನು ಇರುತ್ತೇನೆಂಬ ಮಾತನ್ನು ಹೇಳಿದ್ದೇನೆ.
 
ನನ್ನನ್ನು ಈ ಕಾರ್ಯಕ್ರಮಕ್ಕೆ ಅತಿ ಪ್ರೀತಿಯಿಂದ, ಗೌರವದಿಂದ ಬರಮಾಡಿಕೊಂಡು ಅವರ ಕುಟುಂಬದ ಒಬ್ಬ ಸದಸ್ಯನಂತೆ ನನ್ನನ್ನು ಕಂಡಂತಹ ಕ್ರೀಡಾ ಸಂಘದ ಎಲ್ಲಾ ಪದಾಧಿಕಾರಿಗಳಿಗೆ, ಪಂದ್ಯಾವಳಿಗಳನ್ನು ಆಯೋಜಿಸಿದ ಎಲ್ಲಾ ಮುಖಂಡರುಗಳಿಗೆ, ಸಮಾಜದ ಹಿರಿಯರಿಗೆ ಅಣ್ಣ-ತಮ್ಮಂದಿರಿಗೆ, ಅಕ್ಕ-ತಂಗಿಯರಿಗೆ ನನ್ನ ಧನ್ಯವಾದಗಳನ್ನು ಮತ್ತೊಮ್ಮೆ ಸಲ್ಲಿಸುತ್ತೇನೆ. ????????