Protest against price rise, 07/04/2022
ಪಕ್ಷದ ಕುಟ್ಟ ವಲಯ ಆಯೋಜಿಸಿದ್ದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮತ್ತು ಆ ಭಾಗದ ಪ್ರಮುಖರು ಪಕ್ಷ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಕುಟ್ಟ ಬಸ್ ನಿಲ್ದಾಣದಿಂದ ಕೊಡವ ಸಮಾಜದ ವರೆಗೂ ಪಾದಯಾತ್ರೆ ಮೂಲಕ ಬಂದ ನೂರಾರು ಪಕ್ಷದ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದೆವು.
ಮುಕ್ಕತಿರ ನವೀನ್, ಅಪ್ಪಯ್ಯ, ಚೆಂಗಪ್ಪ, ದರ್ಶನ್, ಉಮೇರ್ ಮತ್ತಿತರರು ಪಕ್ಷ ಸೇರ್ಪಡೆಯಾದರು. ಪಕ್ಷ ಸಂಘಟನೆ ಮಾಡಲು ಇನ್ನಷ್ಟು ಶಕ್ತಿಯನ್ನು ಈ ಕಾರ್ಯಕ್ರಮ ತುಂಬಿದೆ.
ಬಡ ಜನರು, ಸೋಷಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ಜನರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.
#Kodagu #Virajpet #Madikeri #Ponnampet #Kutta
Happy Ugadi, 02/04/2022

Meeting with Principal Chief Conservator of Forests (Wildlife), 31/03/2022
ಬಂಬುಕಾಡು, ಕಾರೆಕಂಡಿ, ಮಜ್ಜಿಗಳ ಆನೆ ಕ್ಯಾಂಪ್, ಚೇಣಿಹದ್ಲು, ಆಯಿರಸುಳ್ಳಿ, ಜಂಗಲ್ಲಾಡಿ, ಈ ಹಾಡಿಗಳಲ್ಲಿ ವಾಸವಾಗಿರುವ ಗಿರಿಜನರ ಸಮಸ್ಯೆಗಳ ಬಗ್ಗೆ, ಅವರು ಜೀವನ ನಡೆಸುವುದಕ್ಕೆ ಇರುವ ತೊಂದರೆಗಳ ಬಗ್ಗೆ, ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ವಿ ಬಾಡಗ ಗ್ರಾಮದಲ್ಲಿ ನಡೆದಂತಹ ಹುಲಿಯ ಹಾವಳಿ ಮತ್ತು ಅಲ್ಲಿ ಮೃತಪಟ್ಟ ಅಮಾಯಕ ಕಾರ್ಮಿಕ, ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮನುಷ್ಯ ಮತ್ತು ಆನೆಗಳ ಸಂಘರ್ಷ ಈ ಎಲ್ಲಾ ವಿಚಾರಗಳ ಬಗ್ಗೆ ಪ್ರಿನ್ಸಿಪಾಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ಪಿ.ಸಿ.ಸಿ.ಎಫ್) Wildlife, ಶ್ರೀ ವಿಜಯ್ ಕುಮಾರ್ ಗೋಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಆದಷ್ಟು ಶೀಘ್ರದಲ್ಲಿ ಜಿಲ್ಲೆಗೆ ಭೇಟಿ ನೀಡಿ ಸರ್ಕಾರದ ಮಟ್ಟದಲ್ಲಿ ಯಾವ ರೀತಿ ಈ ಸಮಸ್ಯೆಗಳಿಗೆ ಪರಿಹಾರ ತಂದುಕೊಡುವ ಬಗ್ಗೆ ನೀತಿಯನ್ನು ರೂಪಿಸುವ ಭರವಸೆಯನ್ನು ಕೊಟ್ಟರು. ಈ ವಿಷಯಗಳ ಬಗ್ಗೆ ದೀರ್ಘ ಕಾಲ ನಮ್ಮ ಜೊತೆ ಚರ್ಚೆಯನ್ನು ನಡೆಸಿ ಜನರ ತೊಂದರೆಗಳನ್ನು ಆಲೈಸಿದ ಶ್ರೀ ಗೋಗಿ ಅವರಿಗೆ ಧನ್ಯವಾದಗಳು. ಸಮಸ್ಯೆಗಳಿಗೆ ಆದಷ್ಟು ಬೇಗ ಸರ್ಕಾರದಿಂದ ಪರಿಹಾರವನ್ನು ಕೊಡಿಸಬೇಕೆಂದು ಅವರನ್ನು ಒತ್ತಾಯ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ಪೊನ್ನಂಪೇಟ್ ಬ್ಲಾಕ್ ಅಧ್ಯಕ್ಷರಾದ ಮೀದೇರಿರ ನವೀನ್, ಸ್ಥಳೀಯರಾದ ಅಜ್ಜಿಕುಟ್ಟೀರ ಗಿರೀಶ್ ಅವರು, ಜಿಲ್ಲಾ ಪಂಚಾಯತ್ ಸದಸ್ಯರಾದ ಪಂಕಜಾ ಅವರು, ಗಿರಿಜನ ಒಕ್ಕೂಟದ ಮುಖಂಡರಾದ ರಾಮು, ಶಿವಣ್ಣ, ಮತ್ತು ಸ್ಥಳೀಯರ ನಿಯೋಗದೊಂದಿಗೆ ಭೇಟಿ ಮಾಡಲಾಯಿತು.
#Kodagu #Coorg #Wildlife #Ponnampet #Madikeri #Virajpet #TigerAttack #AnimalConflict #Forest
Wishing Shri MB Patil, the very best in his new role as the Chairman, Karnataka Congress Campaign Committee, 29/03/2022


Support to the demand for ST reservation , 28/03/2022
ಫೆ.10 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏಕಾಂಗಿಯಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಸ್ಥಳದಲ್ಲೇ ಭೇಟಿ ಮಾಡಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.
ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಸಮಿತಿಯು ಶಿಫಾರಸ್ಸು ಮಾಡಿರುವಂತೆ ST ಮೀಸಲಾತಿಯನ್ನು ಶೇಕಡಾ 3ರ ರಿಂದ ಶೇಕಡಾ 7.5ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ಕಾಲ ದೂಡುತ್ತಾ ಬಂದಿದೆ. ತಮ್ಮ ಸಾಂವಿಧಾನಿಕ ಹಕ್ಕನ್ನು ಬೇಡುತ್ತಿರುವ ST ಸಮುದಾಯಕ್ಕೆ ಇದರಿಂದ ವಂಚನೆ ಮಾಡಿದಂತಾಗಿದೆ.
ಸಮುದಾಯದ ಜನಸಂಖ್ಯೆಯ ಅನುಪಾತಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಂವಿಧಾನಬದ್ದವಾದ ಮೀಸಲಾತಿ ಕೇಳುತ್ತಿರುವುದರಲ್ಲಿ ಸಾಮಾಜಿಕ ನ್ಯಾಯದ ಉದ್ದೇಶ ಇದೆ. ಹೆಚ್ಚಿನ ಕಾಲ ಹರಣ ಮಾಡದೆ ನ್ಯಾ.ನಾಗಮೋಹನ ದಾಸ್ ವರದಿಯನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ಆಗ್ರಹ ಮಾಡಲಾಯಿತು. ವಾಲ್ಮೀಕಿ ಸಮಾಜದ ಇನ್ನಿತರ ಬೇಡಿಕೆಗಳಿಗೂ ಕಾನೂನಿನ ಅಡಿಯಲ್ಲಿ ನಮ್ಮ ಬೆಂಬಲ ಇರುವುದಾಗಿ ಪೂಜ್ಯ ಸ್ವಾಮೀಜಿಯವರಿಗೆ ತಿಳಿಸಲಾಯಿತು.
#Reservation #ST #NagamohanaDas #Kodagu #Virajpet #Madikeri #Ponnampet