Volleyball tournament in Hundi, 23/12/2022

Volleyball tournament in Hundi. ಹುಂಡಿ ಗ್ರಾಮದಲ್ಲಿ ವಾಲಿಬಾಲ್ ಕ್ರೀಡಾಕೂಟ
 
ವಿರಾಜಪೇಟೆಯ ಹುಂಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹುಂಡಿ ಪ್ರೀಮಿಯರ್ ಲೀಗ್ ವಾಲಿಬಾಲ್ ಕ್ರೀಡಾಕೂಟದ ಉದ್ಘಾಟನೆಯನ್ನು ಮಾಡಿ ಆಯೋಜಕರಿಗೂ ಹಾಗೂ ಕ್ರೀಡಾಪಟುಗಳಿಗೂ ಶುಭ ಕೋರಿದೆ.
 
ಕ್ರೀಡೆಗಳು ಕೊಡಗಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದರ ಮಹತ್ವವನ್ನು ಅರಿತು ಗ್ರಾಮೀಣ ಮಟ್ಟದಲ್ಲೂ ಸ್ಪರ್ಧಾತ್ಮಕ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಜೊತೆಗೆ ಕೊಡಗಿನ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಈ ಪಂದ್ಯಾವಳಿ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದೆ.
 
ಪಂದ್ಯಾವಳಿಯ ಆಯೋಜಕರಿಗೆ ಮತ್ತು ಕ್ರೀಡಾಮನೋಭಾವದಿಂದ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Party workers meet at Virajpet, 22/12/2022

Party workers meet at Virajpet. ವಿರಾಜಪೇಟೆಯಲ್ಲಿ ಕಾರ್ಯಕರ್ತರ ಸಭೆ
 
ವಿರಾಜಪೇಟೆಯಲ್ಲಿ ಪಕ್ಷದ ಬ್ಲಾಕ್ ವತಿಯಿಂದ ಆಯೋಜಿಸಲಾಗಿದ್ದ ಬಿ.ಎಲ್.ಎ.ಗಳ ಅಧಿಕಾರ ಪರಿಮಿತಿಗಳು ಮತ್ತು ಬ್ಲಾಕ್ ಮಟ್ಟದ ವಿವಿಧ ವಲಯಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಮುಂಬರುವ ಚುನಾವಣೆಯನ್ನು ಪಕ್ಷ ಒಗ್ಗಟ್ಟಿನಿಂದ ಮತ್ತು ತಳಮಟ್ಟದಿಂದ ಸಂಘಟಿತವಾಗಿ ಎದುರಿಸಬೇಕು ಎನ್ನುವ ಮಾತನ್ನು ಹೇಳಿದೆ. ಕೊಡಗಿನಲ್ಲಿ ನಮ್ಮ ಗುರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು.
 
ಯಾವುದೇ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ ಅದನ್ನೆಲ್ಲ ಬದಿಗೊತ್ತಿ ನಾವೆಲ್ಲರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಏಕಚಿತ್ತದಿಂದ ಶ್ರಮಿಸಬೇಕಿದೆ. ಚುನಾವಣೆ ಸಮೀಪಿಸುತ್ತಿದೆ. ಬೇರೆಲ್ಲಾ ಸಮಯಕ್ಕಿಂತಲು ಈಗ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲಿನ ಜವಾಬ್ದಾರಿ ಹೆಚ್ಚಿದೆ.
 
ಮುಂದಿನ ದಿನಗಳಲ್ಲಿ, ಗ್ರಾಮ ಮಟ್ಟದಲ್ಲಿ ಪಕ್ಷದ ಬೆಂಬಲಿಗರನ್ನು ಸಂಘಟಿಸುವ ಜವಾಬ್ದಾರಿ ಎಲ್ಲಾ ಕಾರ್ಯಕರ್ತರ, ಮುಖಂಡರ ಮೇಲೆ ಇದೆ. ಇದನ್ನು ಮನದಟ್ಟು ಮಾಡಿಕೊಂಡು ಮುನ್ನಡೆಯೋಣ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Annual Day at Birunani High School., 21/12/2022

Annual Day at Birunani High School. ಬಿರುನಾಣಿ ಪ್ರೌಢಶಾಲೆಯ ವಾರ್ಷಿಕೋತ್ಸವ

ಬಿರುನಾಣಿ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ. ಈ ಶಾಲೆಯನ್ನು ಕಟ್ಟಿ ಬೆಳೆಸಿದ ಹಿರಿಯ ಚೇತನ ಐ.ಜಿ.ಕಾಳಪ್ಪ ಅವರು ಇನ್ನು ಕೆಲವೇ ತಿಂಗಳಲ್ಲಿ ಶತಮಾನ ಪೂರೈಸಲಿದ್ದಾರೆ. ಅವರನ್ನು ಸನ್ಮಾನಿಸಿ ಗೌರವಿಸುವ ಸೌಭಾಗ್ಯ ನನ್ನದಾಯಿತು. ಕೊಡಗಿನ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಅವರ ಜೀವನ ಎಲ್ಲರಿಗೂ ಸ್ಫೂರ್ತಿ ತುಂಬುತ್ತದೆ. ಇದೇ ಸಂದರ್ಭದಲ್ಲಿ ಹಲವಾರು ಹಿರಿಯರ ಆಶೀರ್ವಾದ ಪಡೆಯುವ ಅವಕಾಶ ನನ್ನದಾಯಿತು.

ಶಾಲೆಯ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ವಿತರಿಸುವ ಕಾರ್ಯವೂ ನಡೆಯಿತು. ಶಾಲೆಯ ವಿದ್ಯಾರ್ಥಿಗಳು ಕೊಡಗಿನ, ರಾಜ್ಯದ, ದೇಶದ ಹೆಸರನ್ನು ಉಜ್ವಲಗೊಳಿಸಲಿ ಎಂದು ಹಾರೈಸಿದೆ. ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಶಾಲೆಯ ಆಡಳಿತ ಮಂಡಳಿ, ನನ್ನನ್ನು ಆತ್ಮೀಯವಾಗಿ ನಡೆಸಿಕೊಂಡ ಮಕ್ಕಳು, ಶಿಕ್ಷಕರು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿಗಳಿಗೂ, ಸರಳ ಸುಂದರ ಸಮಾರಂಭಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು.

#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Sports meet of indigenous people, 20/12/2022

Sports meet of indigenous people. ಕೊಡಗು ಮೂಲನಿವಾಸಿಗಳ ಕ್ರೀಡಾಕೂಟ
 
ಕೊಡಗು ಮೂಲನಿವಾಸಿಗಳ ಅರಮನೆ ಪಾಲೆ ಸಮಾಜ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ 2022 ರಲ್ಲಿ ಪಾಲ್ಗೊಂಡ ಸಂದರ್ಭ. ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಕೊಡಗಿನಲ್ಲಿ ಎಲ್ಲಾ ಸಮಜಗಳಲ್ಲೂ ಕ್ರೀಡೆಗೆ ಇರುವ ಮಹತ್ವಕ್ಕೆ ಸಾಕ್ಷಿಯಾಗಿತ್ತು.
 
ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಅವರನ್ನು ಉದ್ದೇಶಿಸಿ ಮಾತನಾಡುತ್ತ ಕ್ರೀಡಾಕೂಟಗಳನ್ನು ಆಯೋಜಿಸುವ ಮಹತ್ವದ ಬಗ್ಗೆ ವಿವರಿಸಿದೆ. ಎಲ್ಲಾ ಸ್ತರಗಳಲ್ಲೂ ಕ್ರೀಡೆಗೆ ಪ್ರೋತ್ಸಾಹ ದೊರೆತಾಗ ಮಾತ್ರ ಕ್ರೀಡಾಪಟುಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಈ ರೀತಿಯ ಕ್ರೀಡಾಕೂಟ ಆಯೋಜಿಸಿದ ಸಮಾಜಕ್ಕೆ ಅಭಿನಂದನೆಗಳು.
 
ಇದೇ ಸಂದರ್ಭದಲ್ಲಿ ಸಾಧನೆ ಮಾಡಿರುವ ಮೂಲನಿವಾಸಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಮೂಲನಿವಾಸಿ ಸಮಾಜದಿಂದ ಇನ್ನು ಹೆಚ್ಚಿನ ಕ್ರೀಡಾಪಟುಗಳು ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದೆ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Kaveri #Talacauvery #Hudikeri #Napoklu #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Inter High School Hockey Meet in Napoklu, 17/12/2022

Inter High School Hockey Meet in Napoklu. ನಾಪೋಕ್ಲುವಿನಲ್ಲಿ ಅಂತರ ಪ್ರೌಡಶಾಲಾ ಹಾಕಿ ಪಂದ್ಯಾವಳಿ
 
ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆ ವತಿಯಿಂದ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತರ ಪ್ರೌಡಶಾಲಾ ಹಾಕಿ ಪಂದ್ಯಾವಳಿಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭ.
 
ಮಕ್ಕಳಿಗೆ ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಮತ್ತು ಸಹಬಾಳ್ವೆಯನ್ನು ರೂಡಿಸುತ್ತದೆ. ಇಂತಹ ಕ್ರೀಡಾಕೂಟಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನಮ್ಮ ಜಿಲ್ಲೆಯಿಂದ ಸಜ್ಜುಗೊಳಿಸಲು ಪ್ರೋತ್ಸಾಹ ನೀಡಿದoತಾಗುತ್ತದೆ.
 
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಪ್ರಾಮಾಣಿಕವಾಗಿ ಬಾಗವಹಿಸುದು ಮುಖ್ಯ ಎನ್ನುವ ನನ್ನ ಅಭಿಪ್ರಾಯ ತಿಳಿಸಿ , ಈ ಕ್ರೀಡೆಯಲ್ಲಿ ಬಾಗವಹಿಸಿದ ಎಲ್ಲರಿಗೂ ಶುಭಾಶಯಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Kaveri #Talacauvery #Hudikeri #Napoklu #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda
 
 
img