At the unveiling of the bronze statue of Mother Bhuvaneshwari held in the Vidhana Soudha premises, an art exhibition was organized from different parts of the state, languages, cultures and ethnicities, 28/01/2025
ವಿಧಾನಸೌಧದ ಆವರಣದಲ್ಲಿ ನಡೆದ ತಾಯಿ ಭುವನೇಶ್ವರಿಯ ಕಂಚಿನ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗ, ಭಾಷೆ, ಸಂಸ್ಕೃತಿ ಹಾಗೂ ಜನಾಂಗದ ಕಲಾ ಪ್ರದರ್ಶನ ಏರ್ಪಾಡು ಆಗಿತ್ತು. ಇಡೀ ಕಾರ್ಯಕ್ರಮದ ಆಕರ್ಷಣೆಯಾಗಿ ಕೊಡಗಿನ ಕೊಡವ ಮತ್ತು ಅರೆಭಾಷೆ ಸಮುದಾಯದವರು ಜೊತೆಯಾಗಿ ವೇದಿಕೆ ಮೇಲೆ ತಮ್ಮ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ್ದು ಆನಂದ ಹಾಗೂ ಮಾನಸಿಕ ತೃಪ್ತಿ ನೀಡಿತು.
ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಅನ್ಯೋನ್ಯತೆ ಕೆಡಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಭೀತಾಯಿತು. ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಮತ್ತು ಸಾಮರಸ್ಯ ನೆಲೆ ಮಾಡಲಿ. #ASPonnanna
ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಅನ್ಯೋನ್ಯತೆ ಕೆಡಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಭೀತಾಯಿತು. ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಮತ್ತು ಸಾಮರಸ್ಯ ನೆಲೆ ಮಾಡಲಿ. #ASPonnanna

I accompanied the Honorable Chief Minister to inquire about the health of Dr. Shivaraj Kumar, a renowned actor of the Karnataka film industry, who returned to his homeland after receiving treatment abroad, and wished him a speedy recovery, 28/01/2025
ವಿದೇಶದಲ್ಲಿ ಚಿಕಿತ್ಸೆ ಪಡೆದ ಬಳಿಕ ತಾಯಿನಾಡಿಗೆ ಮರಳಿದ ಕರ್ನಾಟಕ ಚಲನಚಿತ್ರರಂಗದ ಪ್ರಖ್ಯಾತ ನಟರಾದ ಡಾ. ಶಿವರಾಜ್ ಕುಮಾರ್ ರವರ ಆರೋಗ್ಯವನ್ನು ವಿಚಾರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ತೆರಳಿ ಅವರು ಅತಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ.

The occasion of performing the Gudali Puja and inaugurating the completed works of various development SFC special grant works within the Virajpet Municipality limits, 28/01/2025
ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಎಸ್.ಎಫ್.ಸಿ ವಿಶೇಷ ಅನುದಾನದ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಮುಕ್ತಾಯಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿದ ಸಂದರ್ಭ.

It was an auspicious occasion when His Holiness Jagadguru Sri Sri Sri Nirmalanandanath Maha Swamiji, the head of the Sri Adichunchanagiri Mahasamsthan Math, came to our Virajpet residence and blessed us all, 27/01/2025
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ರವರು ನಮ್ಮ ವಿರಾಜಪೇಟೆ ನಿವಾಸಕ್ಕೆ ಆಗಮಿಸಿ ನಮ್ಮನ್ನೆಲ್ಲ ಆಶೀರ್ವದಿಸಿದ ಶುಭ ಸಂದರ್ಭ.ನಾಡಿನ ಅತ್ಯಂತ ಶ್ರೇಷ್ಠ ಹಾಗೂ ಗೌರವಾನ್ವಿತ ಮಠದ ಜಗದ್ಗುರುಗಳು ನನ್ನ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದ್ದು ನನ್ನ ಜೀವನವನ್ನು ಪಾವನವನ್ನಾಗಿಸಿತು.ನಮ್ಮಲ್ಲಿಗೆ ಆಗಮಿಸಿ ಆಶೀರ್ವದಿಸಿದ ಪರಮಪೂಜ್ಯ ಜಗದ್ಗುರುಗಳಿಗೆ ನನ್ನ ಭಕ್ತಿ ಪೂರ್ವಕ ಅನಂತಾನಂತ ಪ್ರಣಾಮಗಳು.

Happy Republic Day to all the people of the state, 26/01/2025
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು.
