The Kodagu District Photographers Welfare Association cordially invited me to their Chhaya Sammilana program, 19/02/2023
ಛಾಯಾಗ್ರಾಹಕರು ಮಾಧ್ಯಮದ ಒಂದು ಅವಿಭಾಜ್ಯ ಅಂಗ, ೨೦೧೨ ರಲ್ಲಿ ಶುರುವಾದ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮಾರ್ಚ್ ೭ ,೨೦೨೩ ರಂದು ನಡೆಸುತ್ತಿರುವ ಛಾಯಾ ಸಮ್ಮಿಲನ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಅಹ್ವಾನ ನೀಡಿದರು. ಕೊವಿಡ್ ಸಂದರ್ಭದಲ್ಲಿ ನಮ್ಮಿಂದಾದ ಅಲ್ಪ ಸೇವೆಯನ್ನ ಈ ಸಮಯದಲ್ಲಿ ಸ್ಮರಿಸಿ ಆಡಿದ ಮಾತುಗಳು ಮೂಕ ವಿಸ್ಮಿತ ಮಾಡಿತು. ನಿಮ್ಮ ಪ್ರೀತಿಗೆ ನಾನು ಸದಾ ಚಿರ ಋಣಿ. ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಕೂಡ ಉತ್ಸುಕನಾಗಿದ್ದೇನೆ.

Joining hands for construction of Kunjalgeri Shiva temple, 18/02/2023
Joining hands for construction of Kunjalgeri Shiva temple. ಕುಂಜಲಗೇರಿ ಶಿವ ದೇವಸ್ಥಾನ ನಿರ್ಮಾಣಕ್ಕೆ ಕಾಣಿಕೆ
ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲಗೇರಿಯಲ್ಲಿ ನಿರ್ಮಾಣವಾಗುತ್ತಿರುವ ಶಿವ ದೇವಾಲಯಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯದ ಪ್ರಗತಿ ಬಗ್ಗೆ ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರುಗಳ ಜೊತೆ ಚರ್ಚಿಸಿದೆ.
ಕುಂಜಿಲಗೇರಿ ಒಂದು ಐತಿಹಾಸಿಕ ಹಿನ್ನೆಲೆ ಇರುವ ಗ್ರಾಮ. ಇಲ್ಲಿ ನಿರ್ಮಾಣವಾಗುತ್ತಿರುವ ಈ ನೂತನ ಶಿವ ದೇವಾಲಯದ ನಿರ್ಮಾಣ ಕಾರ್ಯಕ್ಕೆ ನನ್ನ ಕೈಲಾದ ಕಾಣಿಕೆ ಸಲ್ಲಿಸಿದ್ದೇನೆ. ಆದಷ್ಟು ಬೇಗ ನಿರ್ಮಾಣ ಕಾರ್ಯ ಮುಗಿದು ದೇವಾಲಯದಲ್ಲಿ ಪೂಜೆ ಪುರಸ್ಕಾರ ಕಾರ್ಯ ಶುರುವಾಗಲಿ ಎಂದು ದೇವರಲ್ಲಿ ಬೇಡಿದೆ.
ಈ ಮಹಾಶಿವರಾತ್ರಿ ಹಬ್ಬದಂದು ನಾಡಿನ ಸಕಲ ಜನರಿಗೂ ಆ ದೇವರು ನೆಮ್ಮದಿ ಮತ್ತು ಸಂತೃಪ್ತಿಯ ಜೀವನ ಕರುಣಿಸಲಿ ಎಂದು ಬೇಡುತ್ತೇನೆ.
#HappyShivaratri #Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kutta #Nalkeri

Met with the Kodagu Deputy Commissioner, 16/02/2023
ಕೊಡಗು ಜಿಲ್ಲಾ ಅಧಿಕಾರಿಯವರಿಗೆ ಭೇಟಿ ಮಾಡಿ ಮೂಕಂದನೆ ಬಾವಳಿ ಗ್ರಾಮದಲ್ಲಿ ಗ್ರಾಮಸ್ಥರ ವಸತಿ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿ ಅದನ್ನ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಗ್ರಾಮಸ್ಥರು, ಗಣ್ಯರು ನನ್ನ ಈ ಹೋರಾಟಕ್ಕೆ ಜೊತೆಯಾದರು.

Visited the ancient Kadanur Sri Bhagwati Temple and sought the blessings of the sacred Goddess., 16/02/2023
ಪುರಾತನ , ಪ್ರಸಿದ್ಧ, ಪವಿತ್ರ ಕದನೂರು ಶ್ರೀ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಕೃತಾರ್ಥನಾದೆ. ತದನಂತರ ನೆರೆದಿದ್ದ ಗಣ್ಯರ ಜೊತೆ ಕೊಡಗಿನ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ,ಕೃಷಿಕರ ಕಾನೂನಿನ ಹೋರಾಟಗಳ ಬಗೆಗಿನ ಚರ್ಚೆ ನಡೆಸಿದೆ. "ನಮ್ಮ ಇಂದಿನ ಮತ್ತು ಹಿಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ.. ಒಂದು ಅವಕಾಶ ನೀಡಿ, ಬದಲಾವಣೆಯ ಪರ್ವ ಕಾಣುವ.."

Prayed at the Muttappa temple of Karadikooppa village., 15/02/2023
ಕರಡಿಕೊಪ್ಪ ಗ್ರಾಮದ ಮುತ್ತಪ್ಪ ದೇವಸ್ಥಾನಕ್ಕೆ ಭೇಟಿಯಾದ ಸಂದರ್ಭ. ನನನ್ನ ಆತ್ಮಿಯವಾಗಿ ಬರ ಮಾಡಿಕೊಂಡರು. ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಗ್ರಾಮಸ್ಥರನ್ನ ಮತ್ತು ಹಿರಿಯರನ್ನ ಉದ್ದೇಶಿಸಿ ಮಾತನಾಡಿದೆ.
