It was a blessed visit to the Yogam Kutta branch of Sri Narayana Dharma Paripala, 05/03/2023

ಮನುಕುಲಕ್ಕೆ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಪ್ರತಿಪಾದಿಸುವ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಕುಟ್ಟ ಶಾಖೆಗೆ ಭೇಟಿ ನೀಡಿ ಸದಸ್ಯರ ಜೊತೆ ಕಳೆದ ಕ್ಷಣಗಳು.
 
It was a blessed visit to the Yogam Kutta branch of Sri Narayana Dharma Paripala, which advocates one caste, one vote, one God for mankind. I am thankful for this opportunity to pray for the well being of our people and our family.
 
 
img
 

I had the great pleasure to launch a 3 day Kodava Family Sports Meet at Ammathi in Virajpet, with a football tournament and women's throwball tournament, 04/03/2023

ಕ್ರೀಡೆ ಕೊಡಗಿನ ಜೀವನಾಡಿ ನಮ್ಮ ತಾಯಿ ಕಾವೇರಿ ಅಷ್ಟೇ ಪವಿತ್ರ. ಇದಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ನಮ್ಮ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಮತಿಯಲ್ಲಿ ಮೂರು ದಿನದ ಕೊಡವ ಕುಟುಂಬದವರ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಫುಟ್ಬಾಲ್ ಪಂದ್ಯಾವಳಿ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾವಳಿ ಉದ್ಘಾಟನೆ ಮಾಡುವಾಗ ಒಂದು ಸಾರ್ಥಕತೆಯ ಮನೋಭಾವ. ನಮ್ಮ ಪೂಜ್ಯ ತಂದೆ ತಾಯಿಯವರ ಹೆಸರಿನಲ್ಲಿ ನಡೆಯುತ್ತಿರುವ ಟ್ರಸ್ಟ್ ಮೂಲಕ ಈ ಪಂದ್ಯಾವಳಿಗೆ ಚಿಕ್ಕ ಪ್ರೋತ್ಸಾಹ ನೀಡಿ ಅವರ ಜೊತೆ ನಾನೂ ಒಬ್ಬನಾಗಿ ಈ ಪಂದ್ಯದಲ್ಲಿ ಭಾಗವಹಿಸಲು ಬಹಳ ಖುಷಿಯಾಯಿತು. ಓ ಎಕ್ಸ್ ಸ್ಪೋರ್ಟ್ಸ್ ಸಂಸ್ಥೆಯ ಜೊತೆಗೂಡಿ ಈ ಪಂದ್ಯಾವಳಿ ಶುರುವಾಗಿದೆ .ಎಲ್ಲಾ ಕಡೆಯಿಂದ ತಂಡಗಳು ಬಂದಿದ್ದಾವೆ. ನನ್ನ ಜೊತೆಗೂಡಿ ಪಂದ್ಯಕ್ಕೆ ಆರಂಭ ನೀಡಿದ ಕರ್ನಲ್ ಸುಬ್ಬಯ್ಯ , ಡಾಕ್ಟರ್ ಅಮೃತ್ ನಾಣಯ್ಯ ,ಪ್ರಕಾಶ್ , ಹರ್ಷಿಕಾ ಪೂಣಚ್ಚ, ಧರ್ಮಜ ಉತ್ತಪ್ಪ ಮತ್ತು ವಿ ಸುಬ್ರಮಣಿ ಹಾಗೂ ಎಲ್ಲಾ ಅತಿಥಿ ಗಣಕ್ಕೆ ನನ್ನ ಮನದಾಳದಿಂದ ಧನ್ಯವಾದಗಳು. ಬಂದಿರುವ ಎಲ್ಲಾ ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಆಡಿ ಕ್ರೀಡೆಗೆ ಜಯ ತಂದು ಕೊಡಿ. ನಮ್ಮ ಕೊಡವ ಕುಟುಂಬದಿಂದ ಇನ್ನಷ್ಟು, ಮತ್ತಷ್ಟು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕೀರ್ತಿ ಪತಾಕೆಯನ್ನು ಹಾರಿಸಲಿ.
 
I had the great pleasure to launch a three-day Kodava Family Sports Meet at Ammathi in Virajpet yesterday, with a football tournament and women's throwball tournament. I also got the wonderful opportunity to participate in this match along with them in spirit, by providing a small incentive to this tournament.
 
This tournament was started in association with OX Sports, featuring sports teams from all over. My heartfelt thanks to Colonel Subbaiah, Dr. Amrit Nanaiah, Prakash, Harshika Poonachcha, Dharmaja Uthappa, V Subramani, and all the guests who started the match with me.
 
All the athletes at the event are pumped up with competitive spirit and excited to play and bring victory to their teams. May many more athletes from Kodagu represent India and fly the flag of Kodagu glory at the international level!
 
 
img
 

KPCC Manifesto Launch, 02/03/2023

ಕೊಡಗು ಜಿಲ್ಲೆಯ ಜನತೆಗೆ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್- ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ
 
 
img
 

I am extremely grateful for opportunities to work towards understanding the problems and finding solutions for our community, 01/03/2023

ಕಳೆದ ಫೆಬ್ರುವರಿ ತಿಂಗಳು ಅತ್ಯಂತ ಅವರ್ಣನೀಯ ,ಆಕರ್ಷಕ ಮತ್ತು ಅರ್ಥಪೂರ್ಣವಾಗಿತ್ತು,ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಉದ್ದಗಲಕ್ಕೂ ಪ್ರಯಾಣ ಮಾಡಿ ಕ್ಷೇತ್ರದ ಜನರ ಕುಂದು ಕೊರತೆಗಳನ್ನ,ಕಷ್ಟ ಕಾರ್ಪಣ್ಯಗಳನ್ನ ಅರಿಯಲು ಸಹಾಯವಾಯಿತು.
 
ಕೊಡವ ಸಂಸ್ಕೃತಿಯ ಮಹತ್ತರ ಕಾರ್ಯಕ್ರಮಗಳಲ್ಲಿ, ಕ್ರೀಡಾ ಕೂಟಗಳಲ್ಲಿ ಪಾಲ್ಗೊಂಡು ಪುನೀತನಾದೆ. ನನ್ನ ಕಡೆಯಿಂದ ಇದನ್ನ ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದೆ.
 
ಇಂದು ಮಾರ್ಚ್ ತಿಂಗಳ ಆರಂಭ, ಈ ತಿಂಗಳನ್ನ ಮತ್ತುಷ್ಟು ಅರ್ಥ ಪೂರ್ಣವಾಗಿಸೋಣ , ಜನಸೇವೆಗೆ ಮುಡುಪಾಗಿಡೋಣ!
 
I am extremely grateful for the event-filled and engaging February I have had, which gave me innumerable opportunities to work towards understanding the problems and finding solutions for our community. I had a wonderful time meeting the people of my constituency, attending various conferences and sports tournaments, and really connecting with the vibrant Kodava culture.
 
Today, we begin March with the hopes of making it an even more successful month together!
 
 
img
 

Public meeting held last week when Shri Sanket Poovaiah joined the Congress party, 28/02/2023

ಕಳೆದ ವಾರ ನಡೆದ ಜನಸ್ಪಂದನ ಸಭೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಸಂಕೇತ್ ಪೂವಯ್ಯ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದರು. ಈಗ ಜೆ ಡಿ ಎಸ್ ಪಕ್ಷದ ಹಿರಿಯರಾದ ಪರ್ಮಾಲೆ ಗಣೇಶ್ ಮತ್ತು ೫೦ ಕ್ಕೂ ಹೆಚ್ಚು ಪಕ್ಷದ ಪದಾಧಿಕಾರಿಗಳು ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ.
 
ಕಾಂಗ್ರೆಸ್ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟು ಬಂದ ತಮ್ಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಜನಪರ ಕೆಲಸಗಳನ್ನ ಮಾಡೋಣ!
 
It was a delightful event at the public meeting held last week when Shri Sanket Poovaiah joined the Congress party! Now, we are excited to bring JDS party senior Parmale Ganesh and more than 50 party office bearers to the Congress family as well.
 
A hearty welcome to all those who believe in the principles of the Congress. In the coming days, I'm looking forward to working together to provide for the people!
 
 
img