Visit to home of tiger attack victim, 12/04/2022

ಹುಲಿ ದಾಳಿಯಿಂದ ಮೃತಪಟ್ಟ ಕೂಲಿ ಕಾರ್ಮಿಕ ಗಣೇಶ್ (ಪುಟ್ಟ) ಅವರ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬಸ್ತರಿಗೆ ಸಾಂತ್ವನ ಕೋರಿದೆ. ಸರ್ಕಾರ ಇವರ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಆದಷ್ಟು ಶೀಘ್ರದಲ್ಲೇ ಒದಗಿಸುವ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನ್ನ ವೈಯಕ್ತಿಕ ಪರಿಹಾರದ ಚೆಕ್ ಗಣೇಶ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ. ಸ್ಥಳದಲ್ಲೇ ಅರಣ್ಯ ಇಲಾಖೆಯ ಮುಖ್ಯಸ್ಥರಾದ ಪಿ.ಸಿ.ಸಿ.ಎಫ್ ವಿಜಯ್ ಕುಮಾರ್ ಗೋಗಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಗೆ ಕಾರಣವಾದ ಹುಲಿಯನ್ನು ಹಿಡಿದು ಜನರ ಆತಂಕ ನಿವಾರಣೆ ಮಾಡಲು ಒತ್ತಾಯಿಸಿ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದೆ. ಡಿ.ಎಫ್.ಓ ಚಕ್ರಪಾಣಿ ಮತ್ತು ಎ.ಟಿ.ಪೂವಯ್ಯ ಅವರ ಜೊತೆ ಕೂಡ ವಿಷಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ಮಾಡಿದೆ. ಬಿಟ್ಟಂಗಾಲ ಸಮೀಪ ಕಂಡಂಗಾಲ ಗ್ರಾಮದಲ್ಲಿ ನಡೆದ ಈ ಅಹಿತಕರ ಘಟನೆ ಕೇವಲ ಒಂದು ಪ್ರತ್ಯೇಕ ಘಟನೆ ಎಂದು ನೋಡದೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷದ ಭಾಗವಾಗಿ ನೋಡಿ ಪೂರ್ಣಪ್ರಮಾಣದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಗಣೇಶ್ ಅವರ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

#Coorg #Kodagu #Tiger #AnimalConflict #TigerAttack #Madikeri #Virajpet #Ponnampet #Kandangala #Bittangala

 

img

 


Visit to combing camp set up to capture man-eating tiger, 11/04/2022

ನರಭಕ್ಷಕ ಹುಲಿಯಿಂದ ಪೀಡಿತವಾದ ಪ್ರದೇಶಕ್ಕೆ ಭೇಟಿ.
ಕಂಡಂಗಾಲ ಶಾಲೆಯಲ್ಲಿರುವ ಅರಣ್ಯ ಕೂಂಬಿಂಗ್ ಸಿಬಿರಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ ಹುಲಿ ಕಾರ್ಯಚರಣೆಯ ವಿವರ ಪಡೆದೆ. ಮುಂದಿನ ಕಾರ್ಯಚರಣೆಗೆ ಸ್ಥಳೀಯರ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಲು ಸಲಹೆ ನೀಡಿದೆ. ಪ್ರತಿದಿನದ ಕಾರ್ಯಚರಣೆಯ ವಿವರಗಳನ್ನು ಸ್ಥಳೀಯ ಮುಖಂಡರಿಗೆ ವಿವರಣೆ ನೀಡಿದರೆ ಗ್ರಾಮಸ್ಥರಲ್ಲಿ ಇರುವ ಆತಂಕ ಕಡಿಮೆಯಾಗುತ್ತದೆ ಎಂಬ ಸಲಹೆಯನ್ನು ಕೂಡ ಅಧಿಕಾರಿಗಳಿಗೆ ನೀಡಲಾಯಿತು. ಈ ಬೇಟಿಯ ಸಮಯದಲ್ಲಿ ಉಪಾದ್ಯಕ್ಷರಾದ ಕಡೇಮಡ ಕುಸುಮ ಜೋಯಪ್ಪ, ಬಿ ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೊಲ್ಲಿರ ಬೋಪಣ್ಣ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಮೀದೇರಿರ ನವಿನ್, ಚೇರಂಡ  ಜಗನ್, ರೋಷನ್ ಚಂದುರ ಗಣಪತಿ, ನಂಬುಡುಮಾಡ ದಿವ್ಯ, ಚಂದುರ ಸನ್ನು, ರೋಹಿತ್, ಜಗನ್, ಬವನ್, ಸುಬ್ಬಯ್ಯ, ಮುಡಿಯಂಡ ದರ್ಶನ್, ಆಲೆಯಂಡ ಲೋಕೇಶ್ ಹಾಗೂ ಸ್ಥಳೀಯ ಗ್ರಾಮಸ್ಥರು ಬಾಗಿಯಾಗಿದ್ದರು.

#Kodagu #Coorg #Ponnampet #Madikeri #Virajpet #Kandangala #Tiger

 
 

KPCC Legal Cell members meet KPCC President DK Shivakumar, 10/04/2022

ಪಕ್ಷದ ಕಾನೂನು ಘಟಕದ ಸದಸ್ಯರ ಜೊತೆ ಕೆ.ಪಿ.ಸಿ.ಸಿ.ಯ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಮಾಡಿ ಪ್ರಸಕ್ತ ಹಲವಾರು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಪಕ್ಷದ ಮತ್ತು ಸಮಾಜದ ಮುಂದಿರುವ ಹಲವಾರು ಕಾನೂನು ಹೋರಾಟಗಳ ಬಗ್ಗೆ ಕೂಡ ದೀರ್ಘ ಚರ್ಚೆ ನಡೆಸಲಾಯಿತು.

#Kodagu #Coorg #Madikeri #Virajpet #Ponnampet

 
 

Visit to Brahmarishi Sri Narayana Guru community centre project site, 08/04/2022

ಗೋಣಿಕೊಪ್ಪಲು S.N.D.P ಬ್ರಹ್ಮ ಋಷಿ ಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ವೀಕ್ಷಣೆ ಮಾಡಿ S.N.D.Pಯ ಪ್ರಮುಖರ ಜೊತೆ ಇದರ ವಿಷಯವಾಗಿ ಚರ್ಚೆ ಮಾಡಿದೆ. ಪಕ್ಷದ ಮುಖಂಡರಾದ ಡಾ.ಮಂತ್ರರ್ ಗೌಡ, ಹಾಗೂ ಕರ್ನಾಟಕ ಸೇವೆದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತೆರೇಸಾ ವಿಕ್ಟರ್ ಸಭೆಯಲ್ಲಿ ಉಪಸ್ಥಿತರಿದ್ದರು. ಭವನದ ಕಾಮಗಾರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡವ ಭರವಸೆ ನೀಡಲಾಗಿದೆ.
 
ಈ ಸಂದರ್ಭದಲ್ಲಿ S N.D.P. ಉಪಾಧ್ಯಕ್ಷ ಶ್ರೀ ಪಿ.ಜಿ. ರಾಜಶೇಖರ, ಪ್ರಾಧನ ಕಾರ್ಯದರ್ಶಿ ಶ್ರೀ, ಕೆ.ವಿ. ಭಾಸ್ಕರ್, ಮಹಿಳಾ ವಿಭಾಗದ ಅಧ್ಯಕ್ಷೆ ಕುಮಾರಿ ರಮಾವತಿ, ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಎಂ.ಎಸ್. ಸುಬ್ರಮಣಿ ಜೊತೆಗೆ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಗಣಪತಿ, ಧ್ಯಾನ್ ಸುಬ್ಬಯ್ಯ ಹಾಗೂ ಶರತ್ ಭಾಗವಹಿಸಿದ್ದರು.
 
#Kodagu #Coorg #Madikeri #Virajpet #Ponnampet #Gonikoppa
 
 
img
img
img
img
 

Protest against price rise, 07/04/2022

ಪಕ್ಷದ ಕುಟ್ಟ ವಲಯ ಆಯೋಜಿಸಿದ್ದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮತ್ತು ಆ ಭಾಗದ ಪ್ರಮುಖರು ಪಕ್ಷ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ಕುಟ್ಟ ಬಸ್ ನಿಲ್ದಾಣದಿಂದ ಕೊಡವ ಸಮಾಜದ ವರೆಗೂ ಪಾದಯಾತ್ರೆ ಮೂಲಕ ಬಂದ ನೂರಾರು ಪಕ್ಷದ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದೆವು.

ಮುಕ್ಕತಿರ ನವೀನ್, ಅಪ್ಪಯ್ಯ, ಚೆಂಗಪ್ಪ, ದರ್ಶನ್, ಉಮೇರ್ ಮತ್ತಿತರರು ಪಕ್ಷ ಸೇರ್ಪಡೆಯಾದರು. ಪಕ್ಷ ಸಂಘಟನೆ ಮಾಡಲು ಇನ್ನಷ್ಟು ಶಕ್ತಿಯನ್ನು ಈ ಕಾರ್ಯಕ್ರಮ ತುಂಬಿದೆ.

ಬಡ ಜನರು, ಸೋಷಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ಜನರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.

#Kodagu #Virajpet #Madikeri #Ponnampet #Kutta