Meeting of the Virajpet town party members, 15/05/2022
My support to the protest by tribals for basic infrastructure , 14/05/2022
ಕಳೆದ ಐದು ದಿನಗಳಿಂದ ಮೂಲಸೌಕರ್ಯಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಆದಿವಾಸಿಗಳ ಬೇಡಿಕೆಗಳಿಗೆ ಬೆಂಬಲ ಸೂಚಿಸಲು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದೆ.
ಪೊನ್ನಂಪೇಟೆ ತಾಲ್ಲೂಕಿನ ಬಾಳಲೆ ಸಮೀಪದ ಹಾಡು ಗುಂಡಿ ಹಾಡಿಯಲ್ಲಿ ಗಾಳಿ ಮಳೆಯ ನಡುವೆಯೂ ಆಹೋರಾತ್ರಿ ಪ್ರತಿಭಟನೆ ಮುಂದುವರಿಸಿರುವ ಆದಿವಾಸಿಗಳ ಬಗ್ಗೆ ಆಡಳಿತ ನಿರ್ಲಕ್ಷ್ಯ ತೋರಿಸುತ್ತಿದೆ. ಇದನ್ನು ಒಪ್ಪಲಾಗದು.
ಹಾಡಿಯಿಂದ ವರ್ಷಗಳ ಹಿಂದೆ ಪುನರ್ವಸತಿ ಕೇಂದ್ರಕ್ಕೆ ಅವರನ್ನು ಸ್ಥಳಾಂತರಿಸಿ ಈಗಲೂ ಕೂಡ ಅಲ್ಲಿ ಅವರಿಗೆ ಮೂಲಸೌಕರ್ಯ ಒಡಗಿಸದೆ ಇರುವುದು ಅಮಾನವೀಯ. ಮಾಸ್ತಿಗುಡಿ, ನಾಗಪುರದಲ್ಲಿ ಮೂಲಸೌಕರ್ಯವೂ ಇಲ್ಲದೆ ಅತ್ತ ಹಾಡಿಗೂ ಮರಳದಂತೆ ಅವರನ್ನು ತಡೆಯಲಾಗಿದೆ.
ಆದಿವಾಸಿಗಳು ಪ್ರತಿಭಟನೆ ನಡೆಸುತ್ತಿರುವ ಜಾಗಕ್ಕೆ ಭೇಟಿಕೊಟ್ಟು ಅವರ ಸಮಸ್ಯೆಗಳನ್ನು ಆಲಿಸಿ ಅವರ ಮುಖಂಡರ ಜತೆ ಸಮಾಲೋಚನೆ ನಡೆಸಿದೆ.
ಆದಿವಾಸಿಗಳ ಸಮಸ್ಯೆಯನ್ನು ಒಂದು ದಿನವೂ ತದ ಮಾಡದೆ ಸರ್ಕಾರ ಬಗೆಹರಿಸಬೇಕು. ಇದರ ಸಲುವಾಗಿ ಅಧಿಕಾರಿಗಳಿಗೆ ಸ್ಥಳದಿಂದಲೇ ದೂರವಾಣಿ ಮಾಡಿ ಕ್ರಮ ಜರುಗಿಸಲು ಆಗ್ರಹಿಸಿದ್ದೇನೆ.
#Kodagu #Coorg #Ponnampet #Kushalnagar #Madikeri #Tribals
Happy Basava Jayanti, 03/05/2022
Wishing everyone an enlightening #BasavaJayanti2022.
"ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ" ಎಲ್ಲರಿಗೂ #ಬಸವ_ಜಯಂತಿಯ ಶುಭಾಶಯಗಳು. ಕಾಯಕವೇ ಕೈಲಾಸ ನಮ್ಮ ನಿತ್ಯ ಮಂತ್ರವಾಗಲಿ.
Eid Mubarak, 02/05/2022
Wishing a prosperous and blessed #Ramzan #EidAlFitr to all. May this festival spread joy and hope among everyone.
ಸಮಸ್ತ ಮುಸ್ಲಿಂ ಸಮುದಾಯದವರಿಗೂ ಈದ್-ಉಲ್-ಫಿತರ್ (ರಂಜಾನ್) ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ನಡುವೆ ಸಹೋದರತ್ವ ಮತ್ತು ಪ್ರೀತಿಯನ್ನು ಹೆಚ್ಚಿಸಲಿ.
#Ramzan2022 #EidAlFitr