Took the final darshan and offered prayers for the soul after viewing the mortal remains of our nation's pride, renowned scientist, former ISRO chairman, and Padma Vibhushan awardee Dr. K. Kasturirangan in Bengaluru, 27/04/2025
ನಮ್ಮ ದೇಶದ ಹೆಮ್ಮೆ ಸುಪ್ರಸಿದ್ಧ ವಿಜ್ಞಾನಿ,ಇಸ್ರೋದ ಮಾಜಿ ಅಧ್ಯಕ್ಷರು, ಪದ್ಮವಿಭೂಷಣ ಡಾ. ಕೆ.ಕಸ್ತೂರಿ ರಂಗನ್ ರವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಬೆಂಗಳೂರಿನಲ್ಲಿ ಪಡೆದು ಗೌರವ ನಮನಗಳನ್ನು ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದೆ.

Participated and conveyed best wishes in the final match of the Muddanda Hockey Sports Meet, 27/04/2025
ಮುದ್ದಂಡ ಹಾಕಿ ಕ್ರೀಡಾ ಕೂಟದ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಶುಭ ಕೋರಿದೆ.

Groundbreaking Ceremony for New Road Projects at Gandhadagudi Colony, Balele, 26/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ,ಪೊನ್ನಂಪೇಟೆ ತಾಲೂಕು ಬಾಳೆಲೆ ಗ್ರಾಮ ಪಂಚಾಯತಿಯ ಗಂಧದಗುಡಿ ಪರಿಶಿಷ್ಟ ಜನಾಂಗದವರ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಲು ಯೋಜಿಸಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶುಭಸಂದರ್ಭ. #ASPonnanna

Participation in Constitution Day Celebrations and E-Library Inauguration at Doddaballapur Bar Association, 25/04/2025
ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ 134ನೇ ಜನ್ಮದಿನ , ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಮಂತ್ರಿ ಡಾ|| ಬಾಬು ಜಗಜೀವನ ರಾಂ ರವರ 118ನೇ ಜಯಂತೋತ್ಸವ ಹಾಗೂ ವಕೀಲರ ಸಂಘದ ನೂತನ ಇ-ಗ್ರಂಥಾಲಯವನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

Heartfelt thanks to the Congress party workers in Doddaballapur for this warm felicitation, 25/04/2025
ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೀಡಿದ ಈ ಆತ್ಮೀಯ ಸನ್ಮಾನಕ್ಕೆ ಅನಂತ ಧನ್ಯವಾದಗಳು.
