Today met Karnataka State Government Health Minister Shri Dinesh Gundurao at Vidhana Soudha office and discussed many important topics related to Health Department in our constituency. Requested Honorable Health Minister to explain the requirements and he, 17/07/2025
ಇಂದು ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು. ಕ್ಷೇತ್ರಾದ್ಯಂತ ಜನರ ಅವಶ್ಯಕತೆಗಳು ಹಾಗೂ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾನ್ಯ ಆರೋಗ್ಯ ಸಚಿವರಿಗೆ ವಿವರಿಸಿ ನಮ್ಮ ಕ್ಷೇತ್ರಗಳಲ್ಲಿನ ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಿದೆ. ವಿಶೇಷವಾಗಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಗಳ ಮೇಲ್ದರ್ಜೆಗೆ ಬಜೆಟ್ ನಲ್ಲಿ ಅನುಮೋದನೆ ದೊರಕಿದ್ದು ಸಮುದಾಯ ಆರೋಗ್ಯ ಕೇಂದ್ರಗಳ ಬಗ್ಗೆ ಹಾಗೂ ವೈದ್ಯರುಗಳ ಕೊರತೆಯ ಬಗ್ಗೆ ಸಚಿವರ ಗಮನ ಸೆಳೆದಾಗ, ಕೂಡಲೇ ಖಾಲಿ ಇರುವ ಸ್ಥಾನಗಳನ್ನು ತುಂಬಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕ್ಷೇತ್ರಕ್ಕೆ ಸಂಬಂಧಿಸಿದ ಇನ್ನೂ ಹಲವು ಬೇಡಿಕೆಗಳನ್ನು ಹಂತಹಂತವಾಗಿ ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಮಾನ್ಯ ಸಚಿವರು ಭರವಸೆ ನೀಡಿದರು. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು, ಸರಕಾರದ ಅಭಿಯಾನ ನಿರ್ದೇಶಕರು ಮತ್ತು ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
Women of the state have made history by traveling 500 crore times in transport buses for reasons like employment, education, health, one of the guarantee scheme of the state Congress government, 16/07/2025
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ' ಯೋಜನೆಯಡಿ ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಸ್ವಾವಲಂಬನೆಯ ಮಹತ್ವದ ಹೆಜ್ಜೆ 'ಶಕ್ತಿ' ಯೋಜನೆಯ ಅಭೂತಪೂರ್ವ ಯಶಸ್ಸು, ಜನಬೆಂಬಲ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಮತ್ತಷ್ಟು ಶಕ್ತಿ ತುಂಬಿದೆ..

Attended the National Advisory Committee meeting of All India National Congress Party Backward Classes Unit held at Bharat Jodo Bhavan of Bangalore KPCC office., 16/07/2025
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ..

Today, along with the commission of Bhagamandala Nadagowda society, Kudpaje P Palangappa, met Honorable Chief Minister Shri Siddaramaiah and appealed for many important demands. Mainly, the Gowda Community Bhavan built in 1983 in Bhagamandala village has , 15/07/2025
ಇಂದು ಭಾಗಮಂಡಲ ನಾಡಗೌಡ ಸಮಾಜದ ಅಧ್ಯಕ್ಷರಾದ ಕುದ್ಪಾಜೆ ಪಿ ಪಳಂಗಪ್ಪರವರ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಹಲವು ಪ್ರಮುಖ ಬೇಡಿಕೆಗಳಿಗೆ ಮನವಿ ಸಲ್ಲಿಸಲಾಯಿತು.ಪ್ರಮುಖವಾಗಿ, ಭಾಗಮಂಡಲ ಗ್ರಾಮದಲ್ಲಿ 1983 ರಲ್ಲಿ ನಿರ್ಮಿಸಿರುವ ಗೌಡ ಸಮುದಾಯ ಭವನದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದ್ದು, ಭಾಗಮಂಡಲ ಭಾಗದಲ್ಲಿ ಏಕೈಕ ಸಮುದಾಯ ಭವನ ಇದಾಗಿದೆ. ಗೌಡ ಸಮಾಜ ಮತ್ತು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಸಮುದಾಯ ಭವನದ ನಿರ್ಮಿಸಲು ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಅನುದಾನ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು. ಈ ನಿಯೋಗದಲ್ಲಿ, ಗೌಡ ಸಮಾಜದ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ಪ್ರಕಾಶ್ ಕುದ್ಪಾಜೆ, ದೇವಂಗೋಡಿ ಹರ್ಷ, ಕುಯ್ಯಮುಡಿ ರಂಜು ನಿಡ್ಯಮಲೆ ರವಿ, ಕುದ್ಪಾಜೆ ಗಗನ್, ನಿಡ್ಯಮಲೆ ದಾಮೋದರ, ಅಮೆ ಹರೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Met the Honorable Revenue Minister of Karnataka State Government Shri Krishna Biregowda and requested to bring amendment to some bills of the Revenue Department, 14/07/2025
ಕರ್ನಾಟಕ ರಾಜ್ಯ ಸರಕಾರದ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರನ್ನು ಭೇಟಿ ಮಾಡಿ ಕಂದಾಯ ಇಲಾಖೆಯ ಕೆಲವು ಮಸೂದೆಗಳಿಗೆ ತಿದ್ದುಪಡಿ ತರುವಂತೆ ಮನವಿ ಸಲ್ಲಿಸಲಾಯಿತು.ವಿಶೇಷವಾಗಿ, ಕೊಡಗಿನವರ ಜಮ್ಮಬಾಣೆಗೆ ಕಂದಾಯ ನಿಗದಿ, ಪಟ್ಟೇದಾರರ ಸಮಸ್ಯೆ ಮತ್ತು ಪಹಣಿ ಪತ್ರದಲ್ಲಿ P ನಂಬರ್ ಗಳ ಸಮಸ್ಯೆಯನ್ನ ನಿವಾರಣೆ ಮಾಡಲು ಸೂಕ್ತ ತಿದ್ದುಪಡಿಯನ್ನು ಕರ್ನಾಟಕ ಕಂದಾಯ ಕಾಯ್ದೆ 1964 ಕ್ಕೆ ತರಬೇಕೆಂದು ಮಾನ್ಯ ಕಂದಾಯ ಸಚಿವರಲ್ಲಿ ಮನವಿ ಮಾಡಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಕಂದಾಯ ಸಚಿವರು, ಮುಂಬರುವ ಮುಂಗಾರು ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಯನ್ನು ತರಲಾಗುವುದೆಂಬ ಭರವಸೆಯನ್ನು ನೀಡಿದರು

