I congratulate all students, parents and school teachers for securing third position in Kodagu district state in SSLC examination, 09/05/2024

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದ್ದು ಎಲ್ಲ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಾಲಾ ಶಿಕ್ಷಕ ವೃಂದದವರಿಗೆ ಆಭಿನಂದನೆಗಳನ್ನು ಸಲ್ಲಿಸುತ್ತೇನೆ. ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬರದೇ ಇರುವ ವಿದ್ಯಾರ್ಥಿಗಳು ಎದೆಗುಂದದೆ ಧೈರ್ಯವಾಗಿ ಮುಂದಿನ ಪರೀಕ್ಷೆಗಳನ್ನು ಎದುರಿಸಿ ಎಂದು ಹಾರೈಸುತ್ತೇನೆ.
 
 
img
 

Participated in Sneha Milana program organized by Vokkaligara society in Shimoga, 05/05/2024

ಶಿವಮೊಗ್ಗದಲ್ಲಿ ಒಕ್ಕಲಿಗರ ಸಮಾಜದ ವತಿಯಿಂದ ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರ ಪರ ಮತ ಯಾಚಿಸಲಾಯಿತು. ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿಯವರು, ಮಾನ್ಯ ಶಾಸಕರಾದ ಶ್ರೀ ರಾಜೇಗೌಡರವರು , ಶ್ರೀ ರವಿಯವರು , ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
 
 

Participated in the campaign for Shimoga Loksabha constituency candidate Mrs. Geetha Shivaraj Kumar in Bhadravati, 04/05/2024

ಭದ್ರಾವತಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರ ಪರ ಪ್ರಚಾರದಲ್ಲಿ ಭಾಗವಹಿಸಲಾಯಿತು.
 
 
img
img
 

On the occasion of participating in the Gowda Leather Ball Premier League Games organized by Kodagu Gowda Yuva Forum in Madikeri, 03/05/2024

ಮಡಿಕೇರಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಏರ್ಪಡಿಸಿದ್ದ ಪುರುಷರ ಹಾಗೂ ಮಹಿಳೆಯರ ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
 
 
 

Attended in the cricket tournament organized by Kodagu Airi Samaj and congratulated the participants, 02/05/2024

ಕೊಡಗು ಐರಿ ಸಮಾಜ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭಕೋರಲಾಯಿತು
 
Attended in the cricket tournament organized by Kodagu Airi Samaj and congratulated the participants