Let's pledge to protect our freedom on #IndependenceDay2022, 15/08/2022

On the 75th anniversary of our #TrystWithDestiny let's pledge to protect our freedom on #IndependenceDay2022
 
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಮ್ಮೆಲ್ಲರ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸುವ, ದೇಶದ ಸಂವಿಧಾನವನ್ನು ಕಾಪಾಡುವ, ಜನರ ನಿಜವಾದ ಹಕ್ಕುಗಳನ್ನು ಪ್ರತಿಪಾದಿಸುವ ಸಂಕಲ್ಪವನ್ನು ಮಾಡೋಣ. #JaiHind
 
 
img
 

Visit to Talacauvery, 14/08/2022

ಭಾಗಮಂಡಲದಲ್ಲಿ ತಲಕಾವೇರಿ ಕ್ಷೇತ್ರಕ್ಕೆ ಭೇಟಿಕೊಟ್ಟು, ತಾಯಿ ಕಾವೇರಿಯ ಆಶೀರ್ವಾದ ಪಡೆದ ಕ್ಷಣಗಳು.
 
ಕೊಡಗಿನ ಜೀವಸಂಕುಲದ ದೇವತೆ, ಕೊಡಗಿನ ಜನರ ಕುಲದೇವತೆ ಕಾವೇರಿ ತಾಯಿಯು ಸಾವಿರಾರು ವರ್ಷಗಳಿಂದ ನಮ್ಮನ್ನು ಸಲುಹಿದ್ದಾಳೆ. ತಾಯಿಯ ಸನ್ನಿಧಿಗೆ ಭೇಟಿಕೊಡುವುದೇ ಪುಣ್ಯದ ಕೆಲಸ.
 
ಈ ವರ್ಷವೂ, ಜನರ ಪಾಲಿಗೆ ವರವಾಗಿ, ರೈತರ ಪಾಲಿಗೆ ಜೀವನದಿಯಾಗಿ ಸಕಲ ಜನಕ್ಕೂ ಒಳ್ಳೆಯದಾಗಲಿ ಎಂದು ಬೇಡಿಕೊಂಡೇ. ನಾಡಿನ ಸಮಸ್ತ ಜನರ ರಕ್ಷಣೆಗೆ ದೇವರಲ್ಲಿ ಪ್ರಾರ್ಥಿಸಿದೆ. ಜೊತೆಗೆ ಭಗಂಡೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು, ಪೂಜೆ ಸಲ್ಲಿಸಿದೆ.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery
 
 
img
 

Program on BTV, 13/08/2022

#law #lawyer #karnatakalawyer #kodava #kodagu #virajpet

He raised me to be a strong man, 09/08/2022

ನನ್ನ ತಂದೆಯವರಾದ ಎ ಕೆ ಸುಬ್ಬಯ್ಯ ಅವರು ಈ ರಾಜ್ಯ ಕಂಡ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ. ಒಬ್ಬ ತಂದೆಯಾಗಿ ಅವರು ನನ್ನನ್ನು ಸ್ವಂತವಾಗಿ ಆಲೋಚನೆ ಮಾಡಲು ಮತ್ತು ಸ್ವ-ಇಚ್ಛೆಯಿಂದ ಹೆಜ್ಜೆ ಇಡುವಂತೆ ಬೆಳೆಸಿದ್ದಾರೆ. ಸ್ವಾಭಾವಿಕವಾಗಿ ಅವರ ಈ ಗುಣಗಳು ನನ್ನಲೂ ಇದೆ.
 
ಶಿಕ್ಷಣದ ಮಹತ್ವ, ಜನರೊಂದಿಗೆ ಬೆರೆಯುವ ತವಕ, ಸಮಾಜಮುಖಿಯಾಗಿ ಆಲೋಚನೆ ಮಾಡುವ ಹಂಬಲ, ಜನರ ಬಗ್ಗೆ ಇಡಬೇಕಾದ ಕಾಳಜಿ, ಎಲ್ಲವನ್ನು ನಾನು ಅವರಿಂದ ಕಲಿತೆ.
 
ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ಣ ಪ್ರೀತಿಯ ನಮನಗಳು.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #AKSubbaiah
 
 
img
img
 

Hearty congratulations to all sportspersons making India proud at the #CWG2022, 08/08/2022

ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಪಾರಂಪರಿಕವಾಗಿ ಪ್ರಭಲವಿದ್ದ ಕ್ರೀಡೆಗಳ ಜೊತೆಗೆ ನಮ್ಮ ಕ್ರೀಡಾಪಟುಗಳು ಬೇರೆ ಸ್ಪರ್ಧೆಗಳಲ್ಲೂ ಪದಕಗಳನ್ನು ಗೆಲ್ಲುತ್ತಿರುವುದು ಎಲ್ಲಾ ಭಾರತೀಯರಿಗೂ ಸಂತಸ ತಂದಿದೆ.
 
ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಳಿಗೆ ಇದೆ ಎನ್ನುವ ಮಾತನ್ನು, ದೇಶದ ನಾನಾ ಕಡೆಗಳಿಂದ ಸೇರಿದ ಕ್ರೀಡಾಪಟುಗಳು ದೇಶದ ಕೀರ್ತಿ ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಎತ್ತಿ ಹಿಡಿಯುತ್ತಿರುವುದು, ರುಜು ಮಾಡಿದೆ.
 
ಗೆದ್ದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಕೆಗಳು
 
#India4CWG2022 #Sports #CWG2022India
 
 
img