Demand for KS Eshwarappa's arrest, 15/04/2022
ಬಿಜೆಪಿ ನಾಯಕ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಲಂಚ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಾಲದು. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ ತನಿಖೆ ಆರಂಭಿಸಬೇಕು. ಇದೊಂದು ಸಾಧಾರಣ ವಿಚಾರವಲ್ಲ. ಜನತೆಗೆ ಸರ್ಕಾರ ಹಾಗೂ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಬುಡಮೇಲು ಮಾಡುವ ಪರಿಸ್ಥಿತಿ ಇದೆ. ಸರ್ಕಾರ ನಡೆಸುವವರೆ ಈ ಪರಿಯ ಭ್ರಷ್ಟಾಚಾರದಲ್ಲಿ ತೊಡಗಿರುವುದು ರಾಜ್ಯವೇ ತಲೆ ತಗ್ಗಿಸುವಂತಹ ವಿಚಾರ.
#KSEshwarappa #Contractors #40% #Corruption
Happy Kodava New Year, 14/04/2022


Ambedkar Jayanti wishes, 14/04/2022

Visit to home of tiger attack victim, 12/04/2022
ಹುಲಿ ದಾಳಿಯಿಂದ ಮೃತಪಟ್ಟ ಕೂಲಿ ಕಾರ್ಮಿಕ ಗಣೇಶ್ (ಪುಟ್ಟ) ಅವರ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬಸ್ತರಿಗೆ ಸಾಂತ್ವನ ಕೋರಿದೆ. ಸರ್ಕಾರ ಇವರ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಆದಷ್ಟು ಶೀಘ್ರದಲ್ಲೇ ಒದಗಿಸುವ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನ್ನ ವೈಯಕ್ತಿಕ ಪರಿಹಾರದ ಚೆಕ್ ಗಣೇಶ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ. ಸ್ಥಳದಲ್ಲೇ ಅರಣ್ಯ ಇಲಾಖೆಯ ಮುಖ್ಯಸ್ಥರಾದ ಪಿ.ಸಿ.ಸಿ.ಎಫ್ ವಿಜಯ್ ಕುಮಾರ್ ಗೋಗಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಗೆ ಕಾರಣವಾದ ಹುಲಿಯನ್ನು ಹಿಡಿದು ಜನರ ಆತಂಕ ನಿವಾರಣೆ ಮಾಡಲು ಒತ್ತಾಯಿಸಿ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದೆ. ಡಿ.ಎಫ್.ಓ ಚಕ್ರಪಾಣಿ ಮತ್ತು ಎ.ಟಿ.ಪೂವಯ್ಯ ಅವರ ಜೊತೆ ಕೂಡ ವಿಷಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ಮಾಡಿದೆ. ಬಿಟ್ಟಂಗಾಲ ಸಮೀಪ ಕಂಡಂಗಾಲ ಗ್ರಾಮದಲ್ಲಿ ನಡೆದ ಈ ಅಹಿತಕರ ಘಟನೆ ಕೇವಲ ಒಂದು ಪ್ರತ್ಯೇಕ ಘಟನೆ ಎಂದು ನೋಡದೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷದ ಭಾಗವಾಗಿ ನೋಡಿ ಪೂರ್ಣಪ್ರಮಾಣದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಗಣೇಶ್ ಅವರ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.
#Coorg #Kodagu #Tiger #AnimalConflict #TigerAttack #Madikeri #Virajpet #Ponnampet #Kandangala #Bittangala

Visit to combing camp set up to capture man-eating tiger, 11/04/2022
ನರಭಕ್ಷಕ ಹುಲಿಯಿಂದ ಪೀಡಿತವಾದ ಪ್ರದೇಶಕ್ಕೆ ಭೇಟಿ.
ಕಂಡಂಗಾಲ ಶಾಲೆಯಲ್ಲಿರುವ ಅರಣ್ಯ ಕೂಂಬಿಂಗ್ ಸಿಬಿರಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ ಹುಲಿ ಕಾರ್ಯಚರಣೆಯ ವಿವರ ಪಡೆದೆ. ಮುಂದಿನ ಕಾರ್ಯಚರಣೆಗೆ ಸ್ಥಳೀಯರ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಲು ಸಲಹೆ ನೀಡಿದೆ. ಪ್ರತಿದಿನದ ಕಾರ್ಯಚರಣೆಯ ವಿವರಗಳನ್ನು ಸ್ಥಳೀಯ ಮುಖಂಡರಿಗೆ ವಿವರಣೆ ನೀಡಿದರೆ ಗ್ರಾಮಸ್ಥರಲ್ಲಿ ಇರುವ ಆತಂಕ ಕಡಿಮೆಯಾಗುತ್ತದೆ ಎಂಬ ಸಲಹೆಯನ್ನು ಕೂಡ ಅಧಿಕಾರಿಗಳಿಗೆ ನೀಡಲಾಯಿತು. ಈ ಬೇಟಿಯ ಸಮಯದಲ್ಲಿ ಉಪಾದ್ಯಕ್ಷರಾದ ಕಡೇಮಡ ಕುಸುಮ ಜೋಯಪ್ಪ, ಬಿ ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೊಲ್ಲಿರ ಬೋಪಣ್ಣ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಮೀದೇರಿರ ನವಿನ್, ಚೇರಂಡ ಜಗನ್, ರೋಷನ್ ಚಂದುರ ಗಣಪತಿ, ನಂಬುಡುಮಾಡ ದಿವ್ಯ, ಚಂದುರ ಸನ್ನು, ರೋಹಿತ್, ಜಗನ್, ಬವನ್, ಸುಬ್ಬಯ್ಯ, ಮುಡಿಯಂಡ ದರ್ಶನ್, ಆಲೆಯಂಡ ಲೋಕೇಶ್ ಹಾಗೂ ಸ್ಥಳೀಯ ಗ್ರಾಮಸ್ಥರು ಬಾಗಿಯಾಗಿದ್ದರು.
#Kodagu #Coorg #Ponnampet #Madikeri #Virajpet #Kandangala #Tiger