Kodava family cricket tournament in T Shettigeri, 17/04/2022

ಟಿ ಶೆಟ್ಟಿಗೇರಿಯಲ್ಲಿ ಕೊಡವ ಕುಟುಂಬಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡುವ ಅವಕಾಶ ಒದಗಿಬಂತು. ಕೊಡಗಿನ ವಿಶಿಷ್ಟ ಪರಂಪರೆಗಳಲ್ಲಿ ಕುಟುಂಬಗಳ ಕ್ರೀಡಾ ಪಂದ್ಯಾವಳಿಗಳು ಕೂಡ ಒಂದು. ಕ್ರೀಡಾ ಮನೋಭಾವ ಮತ್ತು ಒಗ್ಗಟ್ಟು ಬೆಳಸುವುದರಲ್ಲಿ ಈ ಕ್ರೀಡಾಕೂಟಗಳು ಸಹಕಾರಿ. ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಹೆಸರುವಾಸಿಯಾದ ನಮ್ಮ ಜಿಲ್ಲೆಯಲ್ಲಿ ಕ್ರೀಡೆಗಳ ಜನಪ್ರಿಯತೆಗೆ ಕೂಡ ಈ ಕುಟುಂಬ ಕ್ರೀಡಾಕೂಟಗಳ ಕೊಡುಗೆ ದೊಡ್ಡದು.

ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ಮತ್ತು ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ನಡೆಸಿದ ಆಯೋಜಕರಿಗೆ, ಕ್ರೀಡಾಪಟುಗಳಿಗೆ ಮತ್ತು ಟಿ ಶೆಟ್ಟಿಗೇರಿಯ ಸ್ಥಳೀಯರಿಗೆ ಅಭಿನಂದನೆಗಳು ಮತ್ತು ವಂದನೆಗಳು.

#Kodagu #Coorg #Madikeri #Virajpet #Ponnampet #TShettigeri

 
 

Vishu wishes, 15/04/2022

#Vishu wishes to all celebrating the arrival of the new year and spring. Let the festival herald the beginning of new hope, happiness and prosperity.
 
ವಿಶು ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ಹೊಸ ವರ್ಷ ಆಚರಣೆಯ ಶುಭಾಶಯಗಳು. ಈ ಹಬ್ಬವು ಎಲ್ಲರ ಜೀವನದಲ್ಲಿ ಹೊಸ ಸಂತೋಷ, ನೆಮ್ಮದಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ.
 
 
img
 

Good Friday, 15/04/2022

On #GoodFriday, let the sacrifice of Jesus Christ restore love, compassion and peace in our lives.
 
ಗುಡ್ ಫ್ರೈಡೆ ದಿನದಂದು ಯೇಸು ಕ್ರಿಸ್ತನ ಬಲಿದಾನ ನೆನೆದು ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಕರುಣೆ ತುಂಬಲೆಂದು ಆಶಿಸೋಣ.
 
 
img
 

Demand for KS Eshwarappa's arrest, 15/04/2022

ಬಿಜೆಪಿ ನಾಯಕ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಲಂಚ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಾಲದು. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ ತನಿಖೆ ಆರಂಭಿಸಬೇಕು. ಇದೊಂದು ಸಾಧಾರಣ ವಿಚಾರವಲ್ಲ. ಜನತೆಗೆ ಸರ್ಕಾರ ಹಾಗೂ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಬುಡಮೇಲು ಮಾಡುವ ಪರಿಸ್ಥಿತಿ ಇದೆ. ಸರ್ಕಾರ ನಡೆಸುವವರೆ ಈ ಪರಿಯ ಭ್ರಷ್ಟಾಚಾರದಲ್ಲಿ ತೊಡಗಿರುವುದು ರಾಜ್ಯವೇ ತಲೆ ತಗ್ಗಿಸುವಂತಹ ವಿಚಾರ.

 #KSEshwarappa #Contractors #40% #Corruption

 
 

Happy Kodava New Year, 14/04/2022

ಕೊಡವರ ಸಾಂಪ್ರದಾಯಿಕ ಹೊಸ ವರ್ಷ ಆಚರಣೆ ಎಡಮ್ಯಾರ್ ಒಂದ್ ದಿನದ ಶುಭಾಶಯಗಳು. ತಲತಲಾಂತರದಿಂದ ಕೊಡಗಿನಲ್ಲಿ ನಡೆದುಬಂದಿರುವ ಈ ವಿಶಿಷ್ಟ ಆಚರಣೆ ಸಾಂಪ್ರದಾಯಿಕ ಕೊಡವ ಕ್ಯಾಲೆಂಡರ್‌ನ ಪ್ರಕಾರ ವರ್ಷದ ಮೊದಲ ದಿನ. ಮುಂಬರುವ ವರ್ಷ ಸಕಲ ಜನಕ್ಕೂ ಹೊಸ ಭರವಸೆ, ಸಂತೋಷ ಮತ್ತು ಗೆಲುವನ್ನು ತುಂಬಲೆಂದು ಹಾರೈಸುತ್ತೇನೆ
 
My best wishes to everyone on the occasion of the traditional new year celebrations of Kodavas, Edamyar Ond. I wish the new year brings happiness, success and new hope to everyone.
 
#Kodagu #Coorg #NewYear #EdamyarOnd
 
 
img
img