Supporting the cause of Kunda residents, 12/12/2022

Supporting the cause of Kunda residents. ಕುಂಡ ಗ್ರಾಮದ ಜನರಿಗೆ ಸಹಕಾರ
 
ಕುಂಡ ಗ್ರಾಮದ ನಿವಾಸಿಗಳು ತಮ್ಮ ಸ್ವಂತ ಶ್ರಮದಿಂದ ಅಲ್ಲಿನ ಆಟದ ಮೈದಾನವನ್ನು ನವೀಕರಣ ಮಾಡಲು ಕೈಹಾಕಿದ್ದಾರೆ. ಅವರ ಈ ಸ್ವಯಂಸೇವೆಗೆ ನನ್ನ ಬೆಂಬಲ ಮತ್ತು ಸಹಕಾರ ಸೂಚಿಸಿದೆ.
 
ಮೈದಾನದ ನವೀಕರಣಕ್ಕೆ ಗುದ್ದಲಿ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಗ್ರಾಮದ ನಿವಾಸಿಗಳಿಗೆ ಶುಭಕೋರಿದೆ. ಮೂಲಸೌಕರ್ಯಗಳನ್ನು ನಾವು ಆಡಳಿತದಿಂದ ನೀರೀಕ್ಷೆ ಮಾಡುವುದು ಸಹಜ. ಅದು ವಿಫಲವಾದಾಗ ಅನಿವಾರ್ಯವಾಗಿ ಜನ ಇವುಗಳನ್ನು ತಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಒದಗುತ್ತದೆ.
 
ಒಂದು ಮಾದರಿ ಕೆಲಸಕ್ಕೆ ಮುಂದಾಗಿರುವ ಕುಂಡ ಗ್ರಾಮದ ಜನತೆ ಅಭಿನಂದನಾರ್ಹರು. ಈ ಕಾರ್ಯ ಶೀಘ್ರ ಪೂರ್ಣಗೊಂಡು ಸ್ಥಳೀಯ ಕ್ರೀಡಾಪಟುಗಳು, ಮಕ್ಕಳು ಹಾಗೂ ಸಾರ್ವಜನಿಕರು ಉಪಯೋಗ ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ.
 
#Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Amangeri #Kunda #ಕೊಡಗು #ವಿರಾಜಪೇಟೆ #ಮಡಿಕೇರಿ #ಪೊನ್ನಂಪೇಟೆ #ಕುಶಾಲನಗರ
 
 
img
 

Families Sports Meet at Amangeri., 10/12/2022

Families Sports Meet at Amangeri.
ಅಮ್ಮಂಗೇರಿಯಲ್ಲಿ ಕೌಟುಂಬಿಕ ಕ್ರೀಡಾಕೂಟ

ಅಮ್ಮಂಗೇರಿಯಲ್ಲಿ ಜರುಗಿದ ಕೌಟುಂಬಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಂದರ್ಭ. ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ ಕೊಡಗಿನ ಪರಂಪರೆಯನ್ನು ಕಾಪಾಡುವ ಈ ರೀತಿಯ ಕ್ರೀಡಾಕೂಟಗಳ ಮಹತ್ವದ ಬಗ್ಗೆ ಮಾತನಾಡಿದೆ.

ಕೊಡಗಿನಲ್ಲಿ ಕ್ರೀಡೆ ವೃತ್ತಿಪರ ಆಟಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆ ಇಲ್ಲಿನ ಎಲ್ಲಾ ಜನರ ಬದುಕಿನ, ಸಂಸ್ಕೃತಿಯ ಬಾಗವಾಗಿದೆ. ಇದನ್ನು ಬೆಳಸಿ, ಪೋಷಿಸುವ ಜವಾಬ್ದಾರಿ ಹೊತ್ತಿರುವ ಈ ರೀತಿಯ ಸಂಘಟನೆಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ.

ಕ್ರೀಡಾಕೂಟವನ್ನು ಆಯೋಜಿಸಿ ಅದನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ಪದಾಧಿಕಾರಿಗಳಿಗೆ ನನ್ನ ಶುಭಾಶಯಗಳು. ಇದನ್ನು ಯಸಶ್ವಿಗೊಳಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.

#Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Amangeri
 
 
img
 

Celebration of Puthari festival in Kodagu., 08/12/2022

Celebration of Puthari festival in Kodagu.

ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಿದ ಸಂದರ್ಭ

ಕೊಡಗಿನ ಪ್ರತಿಯೊಬ್ಬರ ಬದುಕಿನಲ್ಲೂ ಹಾಸುಹೊಕ್ಕಾಗಿರೋ ಪುತ್ತರಿ ಹಬ್ಬದ ಆಚರಣೆಗಳನ್ನು ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಸೇರಿ ಆಚರಿಸುವುದು ಅನಾದಿ ಕಾಲದಿಂದ ನಡೆದು ಬಂದಿರುವ ಒಂದು ಸಂಪ್ರದಾಯ. ಹೊಸ ತೆನೆಯನ್ನು ಮನೆಗೆ ಧಾನ್ಯಲಕ್ಷ್ಮಿಯಾಗಿ ಮನೆಗಳಿಗೆ ಬರಮಾಡಿಕೊಳ್ಳುವ ಈ ಪೂಜಾ ಸಾಂಸ್ಕ್ರುತಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದು ಒಬ್ಬ ಕೊಡಗಿನವನಾಗಿ ನನಗೆ ಹೆಮ್ಮೆ ಮತ್ತು ಧಾರ್ಮಿಕ ಧನ್ಯತೆ ತರುವ ವಿಚಾರ.

#Puthari #Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
 
 
img
 

Wishing a prosperous and joyous Puthari festival to everyone , 07/12/2022

Wishing a prosperous and joyous Puthari festival to everyone

ಪುತ್ತರಿ ಹಬ್ಬದ ಶುಭಾಶಯಗಳು

ಪೊಲಿ ಪೊಲಿ ದೇವಾ.... ಪೊಲಿ... ಪೊಲಿ.. ಪೊಲಿ..

ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಸಂಭ್ರಮದಿಂದ ಆಚರಿಸಲ್ಪಡುವ ಪುತ್ತರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಧಾನ್ಯಲಕ್ಷ್ಮಿಯನ್ನು (ಹೊಸ ಅಕ್ಕಿ) ಮನೆಗೆ ಸ್ವಾಗತಿಸುವ ಕೊಡಗಿನ ಸುಗ್ಗಿ ಎಂದೇ ಕರೆಯುವ ಸಡಗರದ ಪುತ್ತರಿ ಹಬ್ಬ ಕೊಡಗಿನ ಸಮಸ್ತ ಜನರ ಮನ ಮತ್ತು ಮನೆಗಳನ್ನು ಬೆಳಗಲಿ. ಹೊಸ ತೆನೆ ರೈತರ ಬದುಕ್ಕನ್ನು ಬೆಳಗಿಸಿ ಶ್ರಮಿಕರ ಮತ್ತು ದುಡಿಯುವ ವರ್ಗದವರಿಗೆ ಹರುಷ ತರಲಿ.

ಕೊಡಗಿನವರ ಬದುಕು ತಂಬಿಟ್ಟಿನಂತೆ ಸಿಹಿಯಾಗಿರಲಿ. ಮಾಗುರು ಶ್ರೀ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಯ ಶ್ರೀರಕ್ಷೆ ಜನರ ಮೇಲಿರಲಿ ಎಂದು ಆಶಿಸುವ.

ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ

ಹಿರಿಯ ವಕೀಲರು, ಕರ್ನಾಟಕ ಹೈಕೋರ್ಟ್ ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್, ಕರ್ನಾಟಕ ಸರ್ಕಾರ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಆರ್. ಟಿ. ಐ. ಘಟಕ ವಕ್ತಾರರು, ಕೆಪಿಸಿಸಿ

ಕಲ್ಲುಗುಂಡಿ ಎಸ್ಟೇಟ್, ಬೆಳ್ಳೂರು ಗ್ರಾಮ, ಹೈಸೊಡ್ಲುರು ಅಂಚೆ, ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ. asponnanna.com
 
 
img
 

Babasaheb Dr. Ambedkar Maha Parinirvan Divas, 06/12/2022

Babasaheb Dr. Ambedkar Maha Parinirvan Divas

ದೇಶ ಕಂಡ ಮಹಾನ್ ಚೇತನಗಳಲ್ಲಿ ಒಬ್ಬರಾದ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದಂದು ನನ್ನ ಗೌರವಪೂರ್ಣ ನಮನಗಳು.

The Nation and its billions are forever indebted to the foresight and contributions of one of the greatest intellectuals of all time, #Babasaheb Dr #Ambedkar. My salutes and humble remembrance of his brilliance and greatness on his #MahapariNirvanDivas.

#Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #MahapariNirvanDivas #Babasaheb #DrAmbedkar
 
 
img