Book release function, 10/10/2022
Book release function. ಪುಸ್ತಕ ಬಿಡುಗಡೆ ಕಾರ್ಯಕ್ರಮ
ಹುದಿಕೇರಿ ಕೊಡವ ಸಮಾಜದಲ್ಲಿ, ಕೊಡವ ಕೂಟಾಳಿಯಡ ಕೂಟದವರು ಆಯೋಜಿಸಿದ್ದ ಪದ್ದತಿ ಪಡಿಕನ, ಸಮ್ಮಂದ ಅಡ್ಕನಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
ಪುಸ್ತಕ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಮ್ಮ ಬಾಷೆ ಉಳಿವಿನೊಂದಿಗೆ ನಮ್ಮ ಪದ್ಧತಿಗಳು ಉಳಿಯುತ್ತವೆ. ನಮ್ಮ ಭಾಷೆ, ಸಂಸ್ಕೃತಿ ಮತ್ತು ಪದ್ಧತಿಗಳ ಬಗ್ಗೆ ಪುಸ್ತಕಗಳನ್ನು ಬರೆದಾಗ ಅವುಗಳನ್ನು ಉಳಿಸಲು ಅನುಕೂಲವಾಗುತ್ತದೆ. ಭಾಷೆ ಕೇವಲ ವ್ಯವಹಾರಕ್ಕೆ ಸೀಮಿತವಾಗಾಬಾರದು. ಅವು ನಮ್ಮ ಸಂಸ್ಕೃತಿಯ ಪ್ರತೀಕ.
ಕೋಟ್ಯಂತರ ಜನ ಮಾತನಾಡುವ ಕನ್ನಡಕ್ಕೆ 2,100 ರ ವೇಳೆಗೆ ಅಪಾಯ ಇದೆ ಎಂದು ಬಾಷಾತಜ್ಞರು ಎಚ್ಚರಿಸಿದ್ದಾರೆ. ಇನ್ನು ಕೇವಲ ಒಂದು ಲಕ್ಷದ ಐವತ್ತು ಸಾವಿರ ಜನ ಮಾತನಾಡುವ ಕೊಡವ ಭಾಷೆಗೆ ಅಪಾಯ ತಪ್ಪಿದ್ದಲ್ಲ. ನಮ್ಮ ಭಾಷೆ ಜೊತೆಗೆ ನಮ್ಮ ಸಂಸ್ಕೃತಿ ಉಳಿಸುವ ಕೆಲಸ ನಾವು ಮಾಡಬೇಕು.
ಈ ನಿಟ್ಟಿನಲ್ಲಿ ಕೊಡವ ಕೂಟಾಳಿಯಡ ಕೂಟ ಮುಂತಾದ ಸಂಘಟನೆಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ. ಅವರಿಗೆ ನನ್ನ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Hudikeri #Gonikoppal #Shivakeri #Talakaveri #LegalCell #Kodava #Kannada #Traditions

Ration Kit distribution for the specially abled persons of Virajpet and Ponnampet Taluk, 08/10/2022
Distribution of food kits to specially-abled. ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಣೆ
ಎ.ಕೆ.ಸುಬ್ಬಯ್ಯ-ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ (ಅಜ್ಜಿಕುಟ್ಟೀರ) ನಿಂದ, ದಿವ್ಯಾಂಗರ ಒಕ್ಕೂಟ ಸಹಯೋಗದಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳ ವಿಶೇಷ ಚೇತನರಿಗೆ ಆಹಾರ ಕಿಟ್ ಮತ್ತು ಒಕ್ಕೂಟಕ್ಕೆ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿತ್ತು.
ಹುದಿಕೇರಿಯ ಕೊಡವ ಸಮಾಜದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದೆ. ಒಕ್ಕೂಟವು ವಿಶೇಷ ಚೇತನರಿಗೆ ಮಾಡುತ್ತಿರುವ ಕೆಲಸಗಳು ಶ್ಲಾಘನೀಯ ಮತ್ತು ಅನುಕರಣೀಯ. ನಿಸ್ವಾರ್ಥದಿಂದ ಒಕ್ಕೂಟ ಸಲ್ಲಿಸುತ್ತಿರುವ ಸೇವೆಗೆ ನಮ್ಮ ಟ್ರಸ್ಟ್ ಕೈಜೋಡಿಸಿದ್ದು ನನಗೆ ಹೆಮ್ಮೆ ಇದೆ.
ನಮ್ಮ ಟ್ರಸ್ಟ್ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಜನರ ಸೇವೆಯಲ್ಲಿ ತೊಡಗಿಕೊಂಡಿದೆ. ಸಮಾನತೆಯ, ಒಗ್ಗಟ್ಟಿನ ಸಮಾಜ ನಿರ್ಮಾಣವೇ ನಮ್ಮ ಧ್ಯೇಯವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣೇಶ್ ಕೆ.ಎನ್, ಅಜ್ಜಿಕುಟ್ಟೀರ ಎಸ್.ಕಾರ್ಯಪ್ಪ, ಕೊಲ್ಲೀರ ಬೋಪಣ್ಣ, ಮೀದೇರಿರ ನವೀನ್ ಅವರುಗಳಿಗೆ ಧನ್ಯವಾದಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #FoodKits #SpeciallyAbled



Wishing everyone a happy and prosperous Ayudha Pooja and Dasara. ನಾಡಿನ ಸಮಸ್ತ ಜನರಿಗೂ ಆಯುಧ ಪೂಜೆ ಮತ್ತು ದಸರಾ ಹಬ್ಬದ ಶುಭಾಶಯಗಳು. ಆ ದೇವರು ಸಕಲರಿಗೂ ಸುಖ, ಸಮೃದ್ಧಿ, ಸಂಪತ್ತು ಮತ್ತು ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ., 04/10/2022
Wishing everyone a happy and prosperous Ayudha Pooja and Dasara. ನಾಡಿನ ಸಮಸ್ತ ಜನರಿಗೂ ಆಯುಧ ಪೂಜೆ ಮತ್ತು ದಸರಾ ಹಬ್ಬದ ಶುಭಾಶಯಗಳು. ಆ ದೇವರು ಸಕಲರಿಗೂ ಸುಖ, ಸಮೃದ್ಧಿ, ಸಂಪತ್ತು ಮತ್ತು ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.!
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Teerthodbhava #Kailpodh #40% #40PerCent #PayCM #PayCMPoster #ASPonnanna #Ponnanna #BharatJodo #BharataAikyataYaatre #Dasara #AyudhaPooja #ದಸರಾ #ಆಯುಧಪೂಜೆ

The power and commitment of advocates on display. ದೇಶಕಟ್ಟುವಲ್ಲಿ ವಕೀಲರದು ದೊಡ್ಡ ಪಾತ್ರ, 03/10/2022
ಆಧುನಿಕ ಭಾರತದ ಇತಿಹಾಸದಲ್ಲಿ ವಕೀಲರ ಪಾತ್ರ ಮಹತ್ವದ್ದು. ನಮ್ಮ ಸ್ವಾತಂತ್ರ್ಯ ಹೋರಾಟದ ಹಲವಾರು ನಾಯಕರುಗಳು ವಕೀಲರಾಗಿದ್ದವರು. ಮುಂದೆ ದೇಶಕಟ್ಟಿದ ಹಲವಾರು ನಾಯಕರು ವಕೀಲಿ ವೃತ್ತಿಯಿಂದ ಬಂದವರು.
ಈಗ ಭಾರತ ಐಕ್ಯತಾ ಯಾತ್ರೆಯಲ್ಲಿ ಕೂಡ ವಕೀಲರ ಪಾತ್ರ ಮಹತ್ವದ್ದು. ದೇಶಕ್ಕೆ ಒಗ್ಗಟ್ಟಿನ ಅವಶ್ಯಕತೆ ಇದೆ. ಜನರನ್ನು ಬೆಸೆಯುವ ಕೆಲಸ ಮಾಡುವವರು ಬೇಕಾಗಿದ್ದಾರೆ. ಆ ಕೆಲಸವನ್ನು ತಮ್ಮ ವೃತ್ತಿಯಲ್ಲೂ ಮಾಡುವ ವಕೀಲರು ಐಕ್ಯತಾ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ.
ಪಕ್ಷದ ಕಾನೂನು ಘಟಕದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿರುವವರು, ಪದಾಧಿಕಾರಿಗಳ ಜೊತೆಗೆ ದೇಶದ ಬಗ್ಗೆ ಪ್ರೀತಿಯಿರುವ, ಐಕ್ಯತೆಗೆ ಬೆಂಬಲ ಕೊಡಲು ಬರುತ್ತಿರುವ ವಕೀಲರುಗಳಿಗೆ ನನ್ನ ಅಭಿನಂದನೆ ಮತ್ತು ಧನ್ಯವಾದಗಳು. ಎಲ್ಲರ ಆದರ್ಶದ ಈ ನಡಿಗೆ ದೇಶಕ್ಕೆ ಹೊಸ ದಾರಿಯಾಗುವ ನಿಟ್ಟಿನಲ್ಲಿ ಸಾಗಲಿ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Teerthodbhava #Kailpodh #40% #40PerCent #PayCM #PayCMPoster #ASPonnanna #Ponnanna #BharatJodo #BharataAikyataYaatre


Indebted to the love and affection of people of Kodagu. ನಿಮ್ಮ ಪ್ರೀತಿಗೆ ನಾನು ಚಿರಋಣಿ, 02/10/2022
ಐತಿಹಾಸಿಕ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಅಪಾರ ಪ್ರೀತಿ ವಿಶ್ವಾಸವನ್ನು ತೋರಿಸಿದ ನನ್ನ ಪ್ರೀತಿಯ ಕೊಡಗಿನ ಜನರಿಗೆ ನನ್ನ ಪ್ರಣಾಮಗಳು ಮತ್ತು ಧನ್ಯವಾದಗಳು.
ನೀವು ತೋರಿಸಿದ ಈ ಅಕ್ಕರೆಯ ಬೆಂಬಲ ಎಂದಿಗೂ ಮರೆಯಲಾಗದು. ದೇಶದ ಗಮನ ಈ ಯಾತ್ರೆಯ ಮೇಲೆ ಇದೆ. ಈಗ ಕರ್ನಾಟಕದಲ್ಲಿ ಸಂಚರಿಸುತ್ತಿರುವ ಯಾತ್ರೆಯಲ್ಲಿ ನಾನು ಪಾಲ್ಗೊಂಡ ಸಂಧರ್ಬದಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿ ನೀವು ಕೊಟ್ಟ ಬೆಂಬಲ ಅವಿಸ್ಮರಣೀಯ.
ನಿಮ್ಮೆಲ್ಲರ ವಿಶ್ವಾಸವನ್ನು ಗಳಿಸಿರುವುದು ನನಗೆ ಹೆಮ್ಮೆ ಇದೆ. ದೇಶ ಕಟ್ಟುವ ಕೆಲಸದಲ್ಲಿ ಕೊಡಗಿನ ಜನ ಸದಾ ಮುಂಚೂಣಿಯಲ್ಲಿ ಇರುತ್ತಾರೆ ಎನ್ನುವ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ. ನಾವೆಲ್ಲ ಒಗ್ಗಟ್ಟಿನಿಂದ ಮುನ್ನಡೆಯೋಣ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Teerthodbhava #Kailpodh #40% #40PerCent #PayCM #PayCMPoster #ASPonnanna #Ponnanna #BharatJodo #BharataAikyataYaatre
