Kodagu Zilla Kaveri Tamil Sangha Pongal celebrations, 21/01/2023
Kodagu Zilla Kaveri Tamil Sangha Pongal celebrations. ತಮಿಳು ಸಂಘದ ಪೊಂಗಲ್ ಕಾರ್ಯಕ್ರಮ ಸಿದ್ದಾಪುರದಲ್ಲಿ, ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ. ಹಬ್ಬಗಳು ಜನರನ್ನು ಬೆಸೆಯುವ, ಸ್ನೇಹ ಸೌಹಾರ್ದತೆಯನ್ನು ಹೆಚ್ಚಿಸುವ ದಿನಗಳು. ಕಾವೇರಿ ತಾಯಿಯ ಆಶೀರ್ವಾದದ ಕೊಡುಗೆಯಿಂದ ಕೋಟ್ಯಂತರ ಜನ ಈ ಹಬ್ಬವನ್ನು ಆಚರಿಸುವಂತಾಗಿದೆ. ಕೊಡಗಿನಲ್ಲಿ ನೆಲೆಯೂರಿರುವ ತಮಿಳು ಜನರಿಗೆ ಹಬ್ಬದ ಶುಭಾಶಯ ಕೋರಿ ಸಂಘದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದೆ. ಬಾಷೆ ನಮ್ಮ ಅಸ್ತಿತ್ವವನ್ನು ಉಳಿಸುತ್ತದೆ. ಆದರೆ ಅದು ನಮ್ಮನ್ನು ಬೇರೆ ಮಾಡುವ ಸಾಧನವಲ್ಲ. ಎಲ್ಲಾ ಸಮುದಾಯಗಳ ಜನರು ಕೊಡಗಿನಲ್ಲಿ ನೆಲೆಸಿ ತಮ್ಮದೇ ಕೊಡುಗೆ ಕೊಡುತ್ತಿರುವುದು ಹೆಮ್ಮೆಯ ಮತ್ತು ಸಂತಸದ ವಿಷಯ. ಕಾವೇರಿ ತಾಯಿಯ ಆಶೀರ್ವಾದ ಸದಾ ಕಾಲ ಎಲ್ಲರ ಮೇಲೂ ಇರಲಿ ಎಂದು ಹಾರೈಸಿದೆ. #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

A S Ponnanna was honored by the management of Hudikeri Janata High School., 18/01/2023
ಅಜ್ಜಿಕುಟ್ಟೀರ ಎಸ್ ಪೊನ್ನಣ್ಣರವರಿಗೆ ಹುದಿಕೇರಿ ಜನತಾ ಪ್ರೌಢಶಾಲೆ ಆಡಳಿತ ಮಂಡಳಿಯವರಿಂದ ಸನ್ಮಾನ
ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಪೊನ್ನಣ್ಣರವರು ಮಾತನಾಡಿ ಈ ಶಾಲೆಯು ನಮ್ಮ ತಂದೆಯವರು ಓದಿದ ಶಾಲೆ ಹಾಗೂ ಇದು ನನ್ನ ಊರು. ಈ ಶಾಲೆಯಲ್ಲಿ ಓದಿದವರು ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಈ ಶಾಲೆ ಆಡಳಿತ ಮಂಡಳಿಯವರು ನನ್ನನ್ನು ಕರೆಸಿ ಈ ಶಾಲೆಯ ಶಾಲೆಯ ಕಟ್ಟಡಗಳ ದುಸ್ಥಿತಿಯ ಬಗ್ಗೆ ತಿಳಿಸಿದಾಗ ಹೇಗಾದರೂ ಮಾಡಿ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಸಂಕಲ್ಪದೊಂದಿಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಿ ಕೊನೆಗೆ ಕೋಲಾರ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ರವರಿಂದ 10 ಲಕ್ಷ ಅನುದಾನ ತರುವಲ್ಲಿ ಯಶಸ್ವಿಯಾದೆ. ಶಾಲಾ ಅಡತ ಮಂಡಳಿ ಅಧ್ಯಕ್ಷರಾದ ಮಂಡೆಚಂಡ ದಿನೇಶ್ ಚಿಟ್ಯಪ್ಪರವರು ಮಾತನಾಡಿ ಈ ಹಿಂದೆ ಹಲವಾರು ವರ್ಷಗಳಿಂದ ಇದರ ದುರಸ್ತಿಗೆ ಹಲವಾರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ರಾಜಕೀಯ ಲೆಕ್ಕಾಚಾರಗಳಿಂದಾಗಿ ಯಾರೊಬ್ಬರೂ ಆಸಕ್ತಿ ವಹಿಸಿರಲಿಲ್ಲ. ಆದರೆ ಪೊನ್ನಣ್ಣವರು ಯಾವುದೇ ಅಧಿಕಾರವಿಲ್ಲದಿದ್ದರೂ ಕೂಡ, ತಮ್ಮ ಸೇವಾ ಮನೋಭಾವದಿಂದ ಶಾಲಾ ಆಡಳಿತ ಮಂಡಳಿಯವರೊಂದಿಗೆ ಕೈಜೋಡಿಸಿ ಶಾಲೆಯನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಹಿಂದಿನ ಆಡಳಿತ ಮಂಡಳಿ ಹಾಗೂ ಹಾಲಿ ಆಡಳಿತ ಮಂಡಳಿಯ ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

Rs.3 lakh grant for Gowda Samaj, 17/01/2023
Rs.3 lakh grant for Gowda Samaj. ಭಾಗಮಂಡಲ ಗೌಡ ಸಮಾಜಕ್ಕೆ ರೂ.3 ಲಕ್ಷ ಅನುದಾನ
ನನ್ನ ಮನವಿಯನ್ನು ಮನ್ನಿಸಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ನಾಗರಾಜ ಯಾದವ್ ಅವರು ಭಾಗಮಂಡಲದ ಗೌಡ ಸಮಾಜಕ್ಕೆ ಮೂರು ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆ ವೈಯಕ್ತಿಕವಾಗಿ ನನ್ನ ಕಡೆಯಿಂದ ಕೈಲಾದ ಕೊಡುಗೆಯನ್ನು ಸಮಾಜಕ್ಕೆ ಹಸ್ತಾಂತರಿಸಲಾಗಿದೆ.
ಸಮಾಜದ ಭವನ ನಿರ್ಮಾಣ ಹಂತದಲ್ಲಿದ್ದು ಅಲ್ಲಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಮಾಜದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿರುವ ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದೆ. ನಿರ್ಮಾಣ ಕಾರ್ಯ ಬೇಗ ಪೂರ್ಣಗೊಳ್ಳಲಿ ಎಂದು ಹಾರೈಸಿದೆ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

Visit to the construction site of Sri Ram Mandir at Bhagmandala, 16/01/2023
Visit to the construction site of Sri Ram Mandir at Bhagmandala. ಭಾಗಮಂಡಲದ ಶ್ರೀ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ
ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ಸ್ಥಳಕ್ಕೆ ಭೇಟಿ ನೀಡಿ ದೇವಸ್ಥಾನದ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರ ಜೊತೆ ನಿರ್ಮಾಣ ಕಾರ್ಯದ ಬಗ್ಗೆ ಚರ್ಚಿಸಿದೆ. ದೇವಸ್ಥಾನದ ನಿರ್ಮಾಣಕ್ಕೆ ಇರುವ ಅಗತ್ಯಗಳನ್ನು ತಿಳಿದುಕೊಂಡು ನನ್ನ ಕೈಲಾದ ಸಣ್ಣ ಸಹಾಯವನ್ನು ಮಾಡಿದ್ದೇನೆ.
ಆದಷ್ಟು ಬೇಗ ಮಂದಿರದ ನಿರ್ಮಾಣ ಪೂರ್ಣಗೊಂಡು ಭಕ್ತಾದಿಗಳಿಗೆ ತೆರೆಯಲಿ ಎಂದು ಹಾರೈಸಿ ದೇವರಲ್ಲಿ ಬೇಡಿಕೊಂಡೆ. ಸುಂದರವಾದ ದೇವಸ್ಥಾನದ ನಿರ್ಮಾಣಕ್ಕೆ ಮುಂದಾಗಿರುವ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರಿಗೆ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

Happy Makar Sankranti, 14/01/2023
Happy Makar Sankranti. ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡುತ್ತಾ, ಸುಗ್ಗಿಯ ಈ ಸಂಭ್ರಮವನ್ನು ಸಡಗರದಿಂದ ಆಚರಿಸೋಣ. ಸೂರ್ಯ ದೇವನು ನಮಗೆಲ್ಲ ನವ ಚೈತನ್ಯ ತುಂಬಲಿ ಎಂದು ಹಾರೈಸುತ್ತೇನೆ.
#HappySankranti #HappyMakarSankranti2023 #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong