Ponnampet Taluk Senior Civil Court Inaugurated; Justice Brought Closer to People, 31/10/2026
ಪೊನ್ನಂಪೇಟೆ ತಾಲೂಕಿನ ಸೀನಿಯರ್ ಸಿವಿಲ್ ಹಾಗೂ ನ್ಯಾಯಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಪೊನ್ನಂಪೇಟೆ ತಾಲೂಕಿನ ಸಾರ್ವಜನಿಕರಿಗೆ ನ್ಯಾಯದಾನ ಇನ್ನಷ್ಟು ಹತ್ತಿರವಾಗಲಿದ್ದು ಈ ನೂತನ ನ್ಯಾಯಾಲಯದಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ. ನ್ಯಾಯಾಲಯವು ನ್ಯಾಯ ವಿಚಾರಣೆಯ ವ್ಯವಸ್ಥೆ ಸರಿಯಾಗಿ ನಡೆಯಬೇಕಾದರೆ ಕಟ್ಟ ಕಡೆಯ ವ್ಯಕ್ತಿಗೂ ಕೂಡ ನ್ಯಾಯ ದೊರಕಬೇಕಾದರೆ ನ್ಯಾಯ ನ್ಯಾಯಾಲಯಗಳು ಹತ್ತಿರದಲ್ಲಿ ಸಿಗುವಂತ ವ್ಯವಸ್ಥೆ ಆಗಬೇಕು.
ಸಮಾಜದ ಜನರ ಏಳಿಗೆಗಾಗಿ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನ್ಯಾಯಾಲಯದ ಮಹತ್ವದ ಬಗ್ಗೆ ಮಾತನಾಡಿದೆ.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆಯನ್ನು ಸಲ್ಲಿಸಿದ ಜಸ್ಟಿಸ್ ಅಜ್ಜಿಕುಟ್ಟಿರ ಎಸ್ ಬೋಪಣ್ಣ, ಕರ್ನಾಟಕ ಹೈಕೋರ್ಟ್ನ ಖಾಯಂ ನ್ಯಾಯಮೂರ್ತಿಗಳು ಹಾಗೂ ಕೊಡಗು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಯವರಾದ ಶ್ರೀ ರಾಚಯ್ಯ, ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ. ಚೆಪ್ಪುಡೀರ ಎಂ. ಪೂಣಚ್ಚ, ಕೆ. ಜಿ. ಶಾಂತಿ, ಶ್ರೀ ಎಂ.ಜಿ. ಸುಕುರೆ ಕಮಲ್, ಶ್ರೀ. ಕೆ. ಎಸ್. ಭರತ್ ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾರುತಿ ಎಸ್ ಬಾಗಡೆ, ಪೊನ್ನಂಪೇಟೆ ಬಾರ್ ಕೌನ್ಸಿಲ್ ಅಧ್ಯಕ್ಷರು ಶ್ರೀ ಎಂ. ಜಿ. ರಾಕೇಶ್, ಕಾರ್ಯದರ್ಶಿ ಶ್ರೀ ಗಿರೀಶ್ ಅಣ್ಣಯ್ಯ, ಅಡ್ವೋಕೇಟ್ ಶ್ರೀ. ಎಂ. ಸುರೇಶ್ ಅಯ್ಯಪ್ಪ ಹಾಗೂ ಹಿರಿಯ ವಕೀಲರುಗಳು ಉಪಸ್ಥಿತರಿದ್ದರು.
