**Rural Volleyball Tournament Promotes Sportsmanship and Youth Talent in Virajpet**, 28/11/2026
ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ ಹಾಗೂ ಸಂತ ಅನ್ನಮ್ಮ ದೇವಾಲಯ, ವಿರಾಜಪೇಟೆ ಇವರ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮಾಂತರ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಶುಭ ಹಾರೈಸಿದೆ.
ಸಮುದಾಯದ ಜನರೆಲ್ಲರೂ ಒಂದೆಡೆ ಸೇರಿ ಕ್ರೀಡಾಸ್ಫೂರ್ತಿಯನ್ನು ಸಂಭ್ರಮಿಸುವುದರ ಜೊತೆಗೆ, ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಇಂತಹ ಪಂದ್ಯಾವಳಿಗಳು ಉತ್ತಮ ವೇದಿಕೆಯಾಗಿವೆ. ವಾಲಿಬಾಲ್ನಂತಹ ಕ್ರೀಡೆಗಳು ಚುರುಕುತನ, ಸಮಯಪ್ರಜ್ಞೆ, ಚಾಣಾಕ್ಷತನ ಹಾಗೂ ತಂಡದ ಒಗ್ಗಟ್ಟನ್ನು ಬೆಳೆಸುವ ಮೂಲಕ ಯುವಜನತೆಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ.
ಇಂತಹ ಕ್ರೀಡಾಕೂಟಗಳು ಮತ್ತಷ್ಟು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಲಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹೊಸ ಸಾಧನೆಗಳಿಗೆ ನಾಂದಿಯಾಗಲಿ ಎಂದು ಹಾರೈಸುತ್ತೇನೆ.
