**New Bridge Construction at Kedamullur Nears Completion, Improving Local Connectivity**, 28/11/2026

ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಭಾಗದ ಕುನ್ಯಮಕ್ಕಿ–ಬೊಯಿಕೇರಿ–ಕೆದಮುಳ್ಳೂರು ಕರಡ ರಸ್ತೆಯ ಮಧ್ಯೆ ನೂತನ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಸೇತುವೆ ನಿರ್ಮಾಣ ಕಾಮಗಾರಿಯಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಯಾಯ ರಸ್ತೆಯನ್ನು ನಿರ್ಮಿಸಲಾಗಿದ್ದು, ಈ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.
ಇದರೊಂದಿಗೆ ಹಳೆಯ ಸೇತುವೆಯನ್ನು ತೆರವುಗೊಳಿಸುವ ಕಾಮಗಾರಿಯೂ ಪ್ರಗತಿಯಲ್ಲಿದೆ.
ನೂತನ ಸೇತುವೆ ನಿರ್ಮಾಣದಿಂದ ಸ್ಥಳೀಯ ಜನರು ಹಾಗೂ ವಾಹನ ಸವಾರರ ಸಂಚಾರ ಮತ್ತಷ್ಟು ಸುಗಮಗೊಳ್ಳುವುದರ ಜೊತೆಗೆ, ಈ ಭಾಗದ ಸಂಪರ್ಕ ವ್ಯವಸ್ಥೆಯೂ ಬಲವರ್ಧನೆಗೊಳ್ಳಲಿದೆ.