The state-level competition of shooting coconut and coconut organized by Iron Site Shooters, 26/09/2021

ಐರನ್ ಸೈಟ್ ಶೂಟರ್ಸ್ ಸಂಸ್ಥೆಯವರು ಕೈಲ್ ಪೋಳ್ದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ತೋಕ್ ನಮ್ಮೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ರಾಜ್ಯ ಮಟ್ಟದ ಸ್ಪರ್ಧೆಯನ್ನು ಮಾಯಮೂಡಿಯಲ್ಲಿ ಇಂದು ಭಾನುವಾರ ಉದ್ಘಾಟಿಸುವ ಸದಾವಕಾಶ ಒದಗಿಬಂತು.
ಈ ಸಂದರ್ಭದಲ್ಲಿ, ಈ ರೀತಿಯ ನಮ್ಮ ಸಂಸ್ಕೃತಿಯನ್ನು ಕಾಪಾಡಿ ಬೆಳೆಸುವ ಅವಶ್ಯಕತೆ ಬಗ್ಗೆ ಮಾತನಾಡಿದೆ. ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಬಂದೂಕು ಪರವಾನಗಿಯಲ್ಲಿ ವಿನಾಯತಿ ದೊರೆಯಲು ಕಾರಣ ನಮ್ಮ ವಿಶಿಷ್ಟ ಸಂಪ್ರದಾಯಗಳು ಮತ್ತು ಸಂಸ್ಕೃತಿ ಎನ್ನುವುದನ್ನು ವಿವರಿಸಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಇನ್ನು ಹೆಚ್ಚು ಮತ್ತು ವಿವಿಧ ಸ್ಥಳಗಳಲ್ಲಿ ಆಯೋಜಿಸುವ ಅವಶ್ಯಕತೆ ಬಗ್ಗೆ ಮಾತನಾಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಐರನ್ ಸೈಟ್ ಶೂಟರ್ಸ್ಬಸಂಸ್ಥೆಯ ಆಪಟ್ಟಿರ ಆರ್.ಅಯ್ಯಪ್ಪ, ಅಂತಾರಾಷ್ಟ್ರೀಯ ಆಟಗಾರರಾದ ಮಾದಂಡ ಪಿ.ತಿಮ್ಮಯ್ಯ, ಕರ್ನಲ್ ಬಿ.ಕೆ.ಸುಬ್ರಮಣಿ,
ಅಪ್ಪಟ್ಟೀರ ಟಾಟು ಮೋನಪ್ಪ, ಕಾಳಪಂಡ ಸಿ.ಸುಧೀರ್, ಕಾಳಪಂಡ ಟಿ.ಟಿಪ್ಪು ಬಿದ್ದಪ್ಪ, ಶ್ರೀಮತಿ ಬಲ್ಲನಮಾಡ ರೀಟಾ ಅಪ್ಪಯ್ಯ, ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಮತ್ತು ಇತರ ಗಣ್ಯರು ಹಾಗೂ ಕ್ರೀಡಾಳುಗಳು ಹಾಜರಿದ್ದರು.
ನಂತರ ವಿಜೇತರಿಗೆ ಬಹುಮಾನ ವಿತರಿಸಿದ ಚೆಪ್ಪುಡೀರ ಕಿರಣ್ ಅಯ್ಯಪ್ಪ, ಬಾನಂಡ ಎನ್.ಪೃತ್ಯು, ಮಚ್ಚಮಾಡ ಅನೀಶ್ ಮಾದಪ್ಪ, ಅರಮಣಮಾಡ ಇಂದಿರಾ ಮೋಹನ್, ಸಣ್ಣುವಂಡ ಎ.ಪ್ರಸಾದ್ ಅಚ್ಚಯ್ಯ ಮತ್ತು ಬಹುಮಾನಗಳನ್ನು ಪ್ರಯೋಜಿಸಿದ ಕುಟುಂಬಗಳಿಗೂ, ಇತರ ಗಣ್ಯರು, ಕ್ರೀಡಾಪಟುಗಳು ಹಾಗೂ ಆಯೋಜಕರಿಗೆ ಶುಭ ಹಾರೈಕೆಗಳು.