₹6.90 Crore Development Works Inaugurated at Field Marshal K.M. Cariappa Cultural and Sports Centre, Balugodu, 21/11/2026
ವಿರಾಜಪೇಟೆ ತಾಲೂಕಿನ ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರದಲ್ಲಿ ಸರ್ಕಾರದ ವಿಶೇಷ ಅನುದಾನದಡಿ ಒಟ್ಟು ₹6.90 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಂದು ಉದ್ಘಾಟಿಸಲಾಯಿತು.
ಈ ಯೋಜನೆಯಡಿ ಕ್ರೀಡಾಂಗಣದ ತಡೆಗೋಡೆ ನಿರ್ಮಾಣ, ಕೊಡವ ವೀರಯೋಧರ ಸ್ಮಾರಕಕ್ಕೆ ಗ್ರಾನೈಟ್ ಅಳವಡಿಕೆ, ವೀಕ್ಷಕರ ಗ್ಯಾಲರಿ ನಿರ್ಮಾಣ, ಕೊಡವ ಸಮಾಜದ ಆವರಣದ ತಡೆಗೋಡೆ, ಸಮಾಜದ ಮುಂಭಾಗದ ಮೇಲ್ಛಾವಣಿ, ಅಡುಗೆ ಕೋಣೆಯ ನವೀಕರಣ, ನೀರು ಶುದ್ಧೀಕರಣ ಘಟಕ ಸ್ಥಾಪನೆ ಹಾಗೂ ಊಟದ ಮನೆಯ ಎದುರು ಮೇಲ್ಛಾವಣಿ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಕೊಡವ ಸಂಸ್ಕೃತಿ, ಪರಂಪರೆ ಹಾಗೂ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ಪೂರಕವಾಗಿರುವ ಈ ಅಭಿವೃದ್ಧಿ ಕಾರ್ಯಗಳು ಕೇಂದ್ರದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿವೆ.
