Folk Dasara 2026 Adds Cultural Grandeur to Madikeri Navaratri Celebrations, 19/10/2026
ಮಡಿಕೇರಿ ನಗರ ದಸರಾ ಸಮಿತಿ (ರಿ) ಮಡಿಕೇರಿ ದಸರಾ ಸಾಂಸ್ಕೃತಿ ಸಮಿತಿ ಸಹಯೋಗದಲ್ಲಿ ಕೊಡಗು ಜಾನಪದ ಪರಿಷತ್ ಇದರ ವತಿಯಿಂದ ಆರನೇ ವರ್ಷದ ಜನಪದ ದಸರಾ 2026ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದೆ.
ಬಳಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಐತಿಹಾಸಿಕವಾಗಿ ಮಹತ್ವವುಳ್ಳಂತಹ ಮಡಿಕೇರಿಯ ದಸರದಲ್ಲಿ ಜಾನಪದ ಕಾರ್ಯಕ್ರಮವು ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತಿದೆ.
ಜಾನಪದ ದಸರದಲ್ಲಿ ಹಲವಾರು ತಂಡಗಳು ತಮ್ಮ ಜಾನಪದ ಕಲಾಪ್ರದರ್ಶನ ಮಾಡುವುದರೊಂದಿಗೆ ನಾಡಿನ ಜನತೆಗೆ ಹಾಗೂ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಾರ್ವಜನಿಕರಿಗೆ ನಾಡಿನ ಜಾನಪದ ಸಂಸ್ಕೃತಿಯ ಹಾಗೂ ವೈಭವದ ಪರಿಚಯವನ್ನು ಮಾಡುತ್ತಿರುವುದು ಹಾಗೂ ಜನರ ಮನಸ್ಸನ್ನು ಸೂರ್ಯಗೊಳ್ಳುತ್ತಿರುವುದು ದಸರಾ ಹಬ್ಬದ ಮತ್ತೊಂದು ವಿಶೇಷವಾಗಿದೆ. ಇದೇ ರೀತಿ ಗೋಣಿಕೊಪ್ಪ ದಸರಾದಲ್ಲೂ ಸಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಎರಡು ದಸರಾ ಕಾರ್ಯಕ್ರಮಗಳು ಕೊಡಗಿನ ಜನತೆಗೆ ರಸದೌತಣ ನೀಡುವುದರೊಂದಿಗೆ ನವರಾತ್ರಿಯ ಆಚರಣೆಯನ್ನು ಮತ್ತಷ್ಟು ವಿಜೃಂಭಣೆಯಿಂದ ತೋರುವಂತೆ ಮಾಡಿದೆ.
