Condolences to family of laborer Annappa killed by wild elephant in Yadur, 11/08/2026
ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಯಡೂರು ಭಾಗದಲ್ಲಿ ಕಾಡನೆ ಆನೆದಾಳಿಯಿಂದ ಸಾವನ್ನಪ್ಪಿದ ಕಾರ್ಮಿಕ ಅಣ್ಣಪ್ಪ ರವರ ಕುಟುಂಬದವರಿಗೆ ಪರಿಹಾರ ಚೆಕ್ ಹಸ್ತಾಂತರಿಸಿ ಅವರಿಗೆ ಸಾಂತ್ವನ ಹೇಳಲಾಯಿತು.
ಬಳಿಕ ಅರಣ್ಯ ಕಂಟ್ರೋಲ್ ರೂಮ್ ಗೆ ತೆರಳಿ, ಅಧಿಕಾರಿಗಳಿಗೆ ಪ್ರಾಣಿಗಳ ಚಲನವಲನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಿನದ 24 ಗಂಟೆಯೂ ಪರಿಶೀಲಿಸುತ್ತಾ, ಜನ ಸಾಮಾನ್ಯರಿಗೆ ಜಾಗೃತ ಮಾಹಿತಿ ನೀಡಬೇಕೆಂಬ ಸೂಚನೆ ನೀಡಿದೆ.
