Meeting with Principal Chief Conservator of Forests (Wildlife), 31/03/2022

ಬಂಬುಕಾಡು, ಕಾರೆಕಂಡಿ, ಮಜ್ಜಿಗಳ ಆನೆ ಕ್ಯಾಂಪ್, ಚೇಣಿಹದ್ಲು, ಆಯಿರಸುಳ್ಳಿ, ಜಂಗಲ್ಲಾಡಿ, ಈ ಹಾಡಿಗಳಲ್ಲಿ ವಾಸವಾಗಿರುವ ಗಿರಿಜನರ ಸಮಸ್ಯೆಗಳ ಬಗ್ಗೆ, ಅವರು ಜೀವನ ನಡೆಸುವುದಕ್ಕೆ ಇರುವ ತೊಂದರೆಗಳ ಬಗ್ಗೆ, ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ವಿ ಬಾಡಗ ಗ್ರಾಮದಲ್ಲಿ ನಡೆದಂತಹ ಹುಲಿಯ ಹಾವಳಿ ಮತ್ತು ಅಲ್ಲಿ ಮೃತಪಟ್ಟ ಅಮಾಯಕ ಕಾರ್ಮಿಕ, ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮನುಷ್ಯ ಮತ್ತು ಆನೆಗಳ ಸಂಘರ್ಷ ಈ ಎಲ್ಲಾ ವಿಚಾರಗಳ ಬಗ್ಗೆ ಪ್ರಿನ್ಸಿಪಾಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ಪಿ.ಸಿ.ಸಿ.ಎಫ್) Wildlife, ಶ್ರೀ ವಿಜಯ್ ಕುಮಾರ್ ಗೋಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಆದಷ್ಟು ಶೀಘ್ರದಲ್ಲಿ ಜಿಲ್ಲೆಗೆ ಭೇಟಿ ನೀಡಿ ಸರ್ಕಾರದ ಮಟ್ಟದಲ್ಲಿ ಯಾವ ರೀತಿ ಈ ಸಮಸ್ಯೆಗಳಿಗೆ ಪರಿಹಾರ ತಂದುಕೊಡುವ ಬಗ್ಗೆ ನೀತಿಯನ್ನು ರೂಪಿಸುವ ಭರವಸೆಯನ್ನು ಕೊಟ್ಟರು. ಈ ವಿಷಯಗಳ ಬಗ್ಗೆ ದೀರ್ಘ ಕಾಲ ನಮ್ಮ ಜೊತೆ ಚರ್ಚೆಯನ್ನು ನಡೆಸಿ ಜನರ ತೊಂದರೆಗಳನ್ನು ಆಲೈಸಿದ ಶ್ರೀ ಗೋಗಿ ಅವರಿಗೆ ಧನ್ಯವಾದಗಳು. ಸಮಸ್ಯೆಗಳಿಗೆ ಆದಷ್ಟು ಬೇಗ  ಸರ್ಕಾರದಿಂದ ಪರಿಹಾರವನ್ನು ಕೊಡಿಸಬೇಕೆಂದು ಅವರನ್ನು ಒತ್ತಾಯ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷದ ಪೊನ್ನಂಪೇಟ್ ಬ್ಲಾಕ್ ಅಧ್ಯಕ್ಷರಾದ ಮೀದೇರಿರ ನವೀನ್, ಸ್ಥಳೀಯರಾದ ಅಜ್ಜಿಕುಟ್ಟೀರ ಗಿರೀಶ್ ಅವರು, ಜಿಲ್ಲಾ ಪಂಚಾಯತ್ ಸದಸ್ಯರಾದ ಪಂಕಜಾ ಅವರು, ಗಿರಿಜನ ಒಕ್ಕೂಟದ ಮುಖಂಡರಾದ ರಾಮು, ಶಿವಣ್ಣ, ಮತ್ತು ಸ್ಥಳೀಯರ ನಿಯೋಗದೊಂದಿಗೆ ಭೇಟಿ ಮಾಡಲಾಯಿತು.

#Kodagu #Coorg #Wildlife #Ponnampet #Madikeri #Virajpet #TigerAttack #AnimalConflict #Forest