Pattalodi Amme Celebrated with Cultural Grandeur in T. Shettigeri, 29/10/2026
ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್ನಾಂಡ್ ಕೊಡವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆ ವತಿಯಿಂದ, ಕಾವೇರಿ ಚಂಗ್ರಾಂದಿ ಅಂಗವಾಗಿ ನಡೆಯುತ್ತಿರುವ "ಪತ್ತಾಲೋದಿ ನಮ್ಮೆ"ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಾಯಿತು.
ಈ ಭಾಗದಲ್ಲಿ ಆಚರಿಸಲ್ಪಡುವ ದಸರಾ ಕಾರ್ಯಕ್ರಮಕ್ಕೆ ಸರಿಸಾಟಿಯಾಗಿ, ಕಳೆದ 10 ವರ್ಷಗಳಿಂದ ಕಾವೇರಿ ತೀರ್ಥೋದ್ಭವದ ಬಳಿಕ, ಸತತವಾಗಿ 10 ದಿನಗಳ ಕಾಲ ಧಾರ್ಮಿಕ ಹಿನ್ನೆಲೆಯುಳ್ಳ ಸಾಂಸ್ಕೃತಿಕ ವೈಭವದೊಂದಿಗೆ ಈ ಪತ್ತಾಲೋದಿ ಆಚರಣೆ ನಡೆದುಕೊಂಡು ಬರುತ್ತಿದೆ.
ಕಳೆದ ನಾಲ್ಕು ವರ್ಷದಿಂದ ಪತ್ತಾಲೋದಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುತ್ತಿದ್ದು, ಅಂದಿನಿಂದಲೂ ಇಂದಿನವರೆಗೆ ಜನರ ಸಂಭ್ರಮ ಹಾಗೂ ಉತ್ಸಾಹ ಒಂದೇ ರೀತಿಯಲ್ಲಿ ಇದೆ. ನಾಡಿನ ಅದರಲ್ಲೂ ವಿಶೇಷವಾಗಿ ಕೊಡಗಿನ ಸಾಂಸ್ಕೃತಿಕ ವೈಭೋಗವನ್ನು ಧಾರ್ಮಿಕ ಲೇಪನದೊಂದಿಗೆ ಆಚರಿಸುತ್ತಾ ಬಂದಿರುವುದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತಿದೆ. ಆಧುನಿಕ ಯುಗದ ವೇಗದ ಭರದಲ್ಲಿ, ಇಂತಹ ಆಚರಣೆಗಳು ಮತ್ತು ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ ನಮ್ಮ ಸಂಸ್ಕೃತಿ, ಆಚರಣೆ ಹಾಗೂ ಪಾರಂಪರಿಕ ಪದ್ಧತಿಗಳನ್ನು ಜೀವಂತವಾಗಿರಿಸಲು ತುಂಬಾ ಸಹಕಾರಿಯಾಗಿದೆ. ಈ ಕಾರ್ಯಕ್ರಮವು ಒಂದು ವಿನೂತನ ಅನುಭವವನ್ನು ನೀಡುವುದರೊಂದಿಗೆ ಜನರ ಮನಸ್ಸಿಗೆ ಶಾಂತಿ ಹಾಗೂ ಮದರಂಜನೆಯನ್ನು ನೀಡುತ್ತಿರುವುದು ವಿಶೇಷ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ಸಂಖ್ಯೆಯಲ್ಲಿ ನಾಡಿನಾದ್ಯಂತ ಪರಿಚಯಿಸಲಿ ಎಂದು ಹಾರೈಸಲಾಯಿತು.
