A.K. Subbaiah–Ponnamma Subbaiah Trust Supports Students with Scholarships, 29/09/2026
ಪ್ರತಿಯೊಂದು ಮಗುವಿನ ಕನಸುಗಳಿಗೆ ರೆಕ್ಕೆ ನೀಡುವ ಶಕ್ತಿ ಶಿಕ್ಷಣಕ್ಕಿದೆ. ಆರ್ಥಿಕ ಅಡೆತಡೆಗಳು ಯಾವುದೇ ವಿದ್ಯಾರ್ಥಿಯ ಭವಿಷ್ಯದ ಬೆಳಕನ್ನು ಮಸುಕುಗೊಳಿಸಬಾರದು.
ದಿವಂಗತ ಎ.ಕೆ ಸುಬ್ಬಯ್ಯ-ಪೊನ್ನಮ್ಮ ಸುಬ್ಬಯ್ಯ ರವರ ದತ್ತಿನಿಧಿ (ಚಾರಿಟೇಬಲ್ ಟ್ರಸ್ಟ್) ವತಿಯಿಂದ ಪದವಿ ಶಿಕ್ಷಣಕ್ಕೆ ವಿದ್ಯಾರ್ಥಿವೇತನಗಳನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಪಯಣಕ್ಕೆ ಬಲವಾದ ಬೆಂಬಲ ನೀಡುತ್ತಿದ್ದೇವೆ
ಶಿಕ್ಷಣವು ಕೇವಲ ಒಂದು ಹಕ್ಕು ಮಾತ್ರವಲ್ಲ; ಅದು ಉತ್ತಮ ಜೀವನದತ್ತ ದಾರಿ ತೋರಿಸುವ ಅಮೂಲ್ಯ ಕೀಲಿಕೈ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಏಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆಯ ಭಾರತದ ನಿರ್ಮಾತೃಗಳು. ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶಗಳನ್ನು ಒದಗಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ.
ಅವರ ಶೈಕ್ಷಣಿಕ ಪಯಣಕ್ಕೆ ಬಲವಾದ ಬೆಂಬಲ ನಮ್ಮ ಟ್ರಸ್ಟ್ ನೀಡುತ್ತಿದೆ.
ಬನ್ನಿ, ಅವರ ಕನಸುಗಳಿಗೆ ಬೆಂಬಲವಾಗಿ ನಿಲ್ಲೋಣ, "ಶಿಕ್ಷಣದ ಬೆಳಕನ್ನು ಹರಡೋಣ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಕೈಜೋಡಿಸೋಣ.”
ಇಂದಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ನನ್ನ ದೊಡ್ಡಮ್ಮನವರಾದ ಗಂಗಮ್ಮ, ಶಕ್ತಿ ದಿನ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್, ಗೀತಾ ಚಂಗಪ್ಪ ಉಪಸ್ಥಿತರಿದ್ದರು.
