172nd Sri Narayana Guru Jayanti Celebrated in Siddapur, 29/08/2026

ವಿರಾಜಪೇಟೆ ತಾಲೂಕು ಸಿದ್ದಾಪುರ ಭಾಗದಲ್ಲಿ ಇರುವ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡ 172 ನೇ ಶ್ರೀ ನಾರಾಯಣ ಗುರು ಜಯಂತಿಯ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಶ್ರೀ ನಾರಾಯಣ ಗುರುರವರ ಆದರ್ಶ ಸಮಾಜಕ್ಕೆ ಮಾದರಿಯಾಗಿರುವಂತದ್ದು. ಅವರ ಅನುಯಾಯಿಗಳು ಇಂದು ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಅವರ ತತ್ವವಾದರ್ಷಗಳನ್ನು ಪಾಲಿಸುತ್ತಿದ್ದು ಇತರ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಮ ಸಮಾಜದ ಚಿಂತನೆಯೊಂದಿಗೆ ಎಲ್ಲರಲ್ಲೂ ಸಹ ಬಾಳ್ವೆಯ ಸಂದೇಶವನ್ನು ಸಾರಿದಂತಹ ನಾರಾಯಣ ಗುರುಗಳ ಆದರ್ಶವನ್ನು ನಾವೆಲ್ಲರೂ ಪಾಲಿಸುವಂತಗಬೇಕು.