Paying Tribute to Dr. Manmohan Singh: Former Prime Minister, Visionary Economist, and Statesman. The loss of Dr. Manmohan Singh is an irreparable one for the nation and the Congress party, 27/12/2024
ಭಾರತದ ಮಾಜಿ ಪ್ರಧಾನ ಮಂತ್ರಿಗಳು, ಕೇಂದ್ರದ ಮಾಜಿ ಹಣಕಾಸು ಸಚಿವರು, ಶ್ರೇಷ್ಠ ಅರ್ಥಶಾಸ್ತ್ರಜ್ಞರು, ಹಿರಿಯ ರಾಜಕೀಯ ಮುತ್ಸದ್ದಿ, ಆರ್ ಬಿ ಐ ನ ಮಾಜಿ ಗವರ್ನರ್, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದ ಶ್ರೀ ಮನಮೋಹನ್ ಸಿಂಗ್ ರವರು ದೈವಾಧೀನರಾದ ವಿಷಯ ನನಗೆ ಅತೀವ ನೋವನ್ನು ತಂದಿದೆ.
ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ.
ಡಾ. ಮನಮೋಹನ್ ಸಿಂಗ್ ರವರ ಅಗಲಿಕೆ ದೇಶಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.
ಈ ಸಮಯದಲ್ಲಿ ಅವರ ಕುಟುಂಬಕ್ಕೆ ಮತ್ತು ಅವರ ಅಸಂಖ್ಯಾತ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ಆ ಸರ್ವಶಕ್ತ ಕರುಣಿಸಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
