Participated in the Kodava book finding program organized by Kodava Sahitya Academy at Virajpet Taluk Ammati-Onti shop area and the book was released. Kodava Sahitya Academy is doing well wishing the program, playing a major role in bringing awareness abo, 26/07/2026

ವಿರಾಜಪೇಟೆ ತಾಲೂಕು ಅಮ್ಮತಿ -ಒಂಟಿಅಂಗಡಿ ಭಾಗದ ಕೊಡವ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಕೊಡವ ಸಾಹಿತ್ಯ ಅಕಾಡೆಮಿ ರವರು ಆಯೋಜಿಸಿದ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ಕೊಡವ ಸಾಹಿತ್ಯ ಅಕಾಡೆಮಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಪೀಳಿಗೆಗೆ ಕೊಡವ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಮಹತ್ವದ ಅರಿವು ಮೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪತ್ತಾಯ ಬಿಡುಗಡೆಯಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆದ ಸಂದರ್ಭದಲ್ಲಿ, ಸಮುದಾಯದ ಬಾಂಧವರಿಗೆ ನಮ್ಮ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ. ಬಹು ಪುರಾತನವಾದ ಕೊಡವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಮಹತ್ತರ ಜವಾಬ್ದಾರಿ ಕೇವಲ ಅಕಾಡೆಮಿಗೆ ಮಾತ್ರವಲ್ಲದೆ ಜನಾಂಗದ ನಮ್ಮೆಲ್ಲರಿಗೂ ಸಮಾನವಾಗಿ ಇದೆ. ನಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ಆಚಾರ-ವಿಚಾರಗಳನ್ನು ನಮ್ಮ ಯುವ ಪೀಳಿಗೆಗೆ ತಿಳಿಸುತ್ತಾ, ಅವರ ಮುಂದಿನ ಭವಿಷ್ಯದಲ್ಲಿ ಅದನ್ನು ಬೆಳೆಸುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಎಲ್ಲರಲ್ಲಿ ವಿನಂತಿಸಲಾಯಿತು.