March to highlight wildlife attacks, 22/11/2022
March to highlight wildlife attacks. ವನ್ಯಜೀವಿ ಹಾವಳಿ ತಡೆಗೆ ಅರಣ್ಯ ಭವನ ಚಲೋ
ಕೊಡಗು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿರುವ ಕಾರಣ ಜನರ ಬಾಳು ದುಸ್ತರವಾಗಿದೆ. ಬೆಳೆ ನಾಶ ಮಾತ್ರವಲ್ಲದೆ ಹಲವಾರು ಜನ ಪ್ರಾಣ ಕಳೆದುಕೊಳ್ಳುತಿದ್ದಾರೆ. ಅರಣ್ಯ ಇಲಾಖೆ ತನ್ನ ಕೆಲಸಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ಪರಿಸ್ಥಿತಿ ಬಂದಿದೆ. ಇದರ ವಿರುದ್ಧ ಸಾವಿರಾರು ರೈತರ ಜೊತೆ ಅರಣ್ಯ ಭವನ ಚಲೋ ಕಾಲ್ನಡಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂದರ್ಭ.
ರೈತರ ಪರವಾಗಿ ಹಕ್ಕೊತ್ತಾಯ ಮಂಡಿಸಿ ಶೀಘ್ರ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಎಚ್ಚರಿಸಲಾಯಿತು. ಅರಣ್ಯದ ಒಳಗೆ ಯಾವುದೇ ಬಗೆಯ ಪ್ರವಾಸೋದ್ಯಮ ನಡೆಸಬಾರದು, ಅರಣ್ಯದ ಅಂಚಿನಲ್ಲಿ ರೈಲ್ವೆ ಬ್ಯಾರಿಕೆಡ್, ಚೈನ್ ಲಿಂಕ್ ಅಳವಡಿಸಬೇಕು, ಕಾಡು ಹಂದಿಗಳನ್ನು ಅರಣ್ಯ ಇಲಾಖೆ ಬೇಟೆಯಾಡಿ ಕೊಲ್ಲಬೇಕು, ವನ್ಯ ಜೀವಿಗಳ ದಾಳಿಯಲ್ಲಿ ಸತ್ತವರ ಕುಟುಂಬಕ್ಕೆ ಶೈಕ್ಷಣಿಕ, ಆರ್ಥಿಕ ನೆರವು ಕೊಡಬೇಕು ಇನ್ನೂ ಮುಂತಾದ ಹಲವಾರು ಹಕ್ಕೊತ್ತಾಯವನ್ನು ಮಾಡಲಾಯಿತು.
ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಈ ಬೇಡಿಕೆಗಳು ಈಡೇರದಿದ್ದರೆ ಕಾನೂನು ಹೋರಾಟಕ್ಕೆ ನನ್ನ ಬೆಂಬಲವನ್ನು ರೈತರಿಗೆ ರೈತ ಸಂಘಕ್ಕೆ ನೀಡಿದ್ದೇನೆ. ಕೊಡಗಿನ ಮೂಲ ಅಸ್ತಿತ್ವ ಉಳಿಯಬೇಕೆಂದರೆ ನಾವು ಕಾನೂನು ಹೋರಾಟ ಮಾಡಲೇಬೇಕು. ಜನರನ್ನು ಕಷ್ಟಕ್ಕೆ ದೂಡಿ ಯಾವುದೇ ಅರಣ್ಯವನ್ನು ರಕ್ಷಿಸಲು ಸಾಧ್ಯವಿಲ್ಲ.
#Kodagu #Madikeri #Virajpet #Ponnampet #Coorg #Thithimathi #Somwarpet #Wildlife #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura