Sports meet of indigenous people, 20/12/2022

Sports meet of indigenous people. ಕೊಡಗು ಮೂಲನಿವಾಸಿಗಳ ಕ್ರೀಡಾಕೂಟ
 
ಕೊಡಗು ಮೂಲನಿವಾಸಿಗಳ ಅರಮನೆ ಪಾಲೆ ಸಮಾಜ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ 2022 ರಲ್ಲಿ ಪಾಲ್ಗೊಂಡ ಸಂದರ್ಭ. ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಕೊಡಗಿನಲ್ಲಿ ಎಲ್ಲಾ ಸಮಜಗಳಲ್ಲೂ ಕ್ರೀಡೆಗೆ ಇರುವ ಮಹತ್ವಕ್ಕೆ ಸಾಕ್ಷಿಯಾಗಿತ್ತು.
 
ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಅವರನ್ನು ಉದ್ದೇಶಿಸಿ ಮಾತನಾಡುತ್ತ ಕ್ರೀಡಾಕೂಟಗಳನ್ನು ಆಯೋಜಿಸುವ ಮಹತ್ವದ ಬಗ್ಗೆ ವಿವರಿಸಿದೆ. ಎಲ್ಲಾ ಸ್ತರಗಳಲ್ಲೂ ಕ್ರೀಡೆಗೆ ಪ್ರೋತ್ಸಾಹ ದೊರೆತಾಗ ಮಾತ್ರ ಕ್ರೀಡಾಪಟುಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಈ ರೀತಿಯ ಕ್ರೀಡಾಕೂಟ ಆಯೋಜಿಸಿದ ಸಮಾಜಕ್ಕೆ ಅಭಿನಂದನೆಗಳು.
 
ಇದೇ ಸಂದರ್ಭದಲ್ಲಿ ಸಾಧನೆ ಮಾಡಿರುವ ಮೂಲನಿವಾಸಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಮೂಲನಿವಾಸಿ ಸಮಾಜದಿಂದ ಇನ್ನು ಹೆಚ್ಚಿನ ಕ್ರೀಡಾಪಟುಗಳು ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದೆ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Kaveri #Talacauvery #Hudikeri #Napoklu #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img